ಇಂಗ್ಲೆಂಡ್ ತಂಡದ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಜಗತ್ತಿನ ಅತ್ಯುತ್ತಮ ಬ್ಯಾಟ್ಸ್‌ಮೆನ್‌ರಾಗಿದ್ದಾರೆ ಎಂದು ಆಸ್ಟ್ರೇಲಿಯಾ ಕ್ರಿಕೆಟಿಗರು ಹೇಳಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾ ತಂಡದ ಆಟಗಾರರ ಶೇ.50 ರಷ್ಟು ಮತಗಳನ್ನು ಪಡೆದ ಕೆವಿನ್ ಪೀಟರ್ಸನ್ ,ಸಚಿನ್ ತೆಂಡೂಲ್ಕರ್ ಗ್ರೇಮ್ ಸ್ಮಿತ್ ,ಜಾಕ್ವಾಸ್ ಕಲಿಸ್ ಮತ್ತು ಕುಮಾರ್ ಸಂಗಕ್ಕಾರ ಅವರಿಗಿಂತ ತುಂಬಾ ಮುಂದಿದ್ದಾರೆ ಎಂದು ಕ್ರಿಕೆಟ್ ಮೂಲಗಳು ತಿಳಿಸಿವೆ. ಏತನ್ಮಧ್ಯೆ , ಮುಂಬರುವ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ತಂಡಗಳ ಆಶಸ್ ಸರಣಿಯಲ್ಲಿ ಕೆವಿನ್ ಪೀಟರ್ಸನ್ ಅವರನ್ನು ಎದುರಿಸಬೇಕಾಗಿರುವುದರಿಂದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸದಸ್ಯರು ಆತಂಕವ್ಯಕ್ತಪಡಿಸಿದ್ದಾರೆ. ಪೀಟರ್ಸನ್ ,ಆಸ್ಟ್ರೇಲಿಯಾ ವಿರುದ್ಧ 53.50ರ ಸರಾಸರಿಯಲ್ಲಿ 963ರನ್‌ಗಳನ್ನು ಪೇರಿಸಿದ್ದಾರೆ. ಆದರೆ 29 ವರ್ಷ ವಯಸ್ಸಿನ ಪೀಟರ್ಸನ್ ದಾಖಲೆಯನ್ನು ಸ್ಥಾಪಿಸುವ ಗುರಿಯನ್ನು ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೆವಿನ್ ಪೀಟರ್ಸನ್‌ರಂತಹ ಆಟಗಾರರು ನಿರಂತರ ತಂಡವನ್ನು ಮುನ್ನಡೆಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಕೆವಿನ್ ಅವರ ಟೆಸ್ಟ್ ಸರಾಸರಿ (63.35) ನನಗೆ ತಿಳಿದಿಲ್ಲ. ಆದರೆ ಪೀಟರ್ಸನ್ ಸಾಮಾನ್ಯವಾಗಿ ರನ್‌ಗಳಿಸುವ ಸಮಯದಲ್ಲಿ ವೇಗದ ರನ್‌ಗಳಿಕೆಗಾಗಿ ಪ್ರಯತ್ನಿಸುತ್ತಾರೆ ಎಂದು ಆಸ್ಟ್ರೇಲಿಯನ್ ತಂಡದ ನಾಯಕ ರಿಕಿ ಪಾಟಿಂಗ್ ಹೇಳಿದ್ದಾರೆ. |