ಮುಖ್ಯ ಪುಟ > ಕ್ರೀಡಾ ಜಗತ್ತು > ಕ್ರಿಕೆಟ್‌ > ಕ್ರಿಕೆಟ್‌ ಸುದ್ದಿ > ದೇವಧರ್ ಟ್ರೋಫಿ ವೇಳಾಪಟ್ಟಿ ನಿಗದಿಗೆ ಬಿಸಿಸಿಐ ಸಭೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೇವಧರ್ ಟ್ರೋಫಿ ವೇಳಾಪಟ್ಟಿ ನಿಗದಿಗೆ ಬಿಸಿಸಿಐ ಸಭೆ
ಕ್ರಿಕೆಟ್ ಪಂದ್ಯಗಳ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ದೇವಧರ್ ಟ್ರೋಫಿಯನ್ನು ರದ್ದುಗೊಳಿಸಿರುವುದಾಗಿ ಹೇಳಿಕೆ ನೀಡಿದ್ದ ಬಿಸಿಸಿಐ ,ಇದೀಗ ದೇವಧರ್ ಟ್ರೋಫಿ ಪಂದ್ಯಗಳನ್ನು ಆಯೋಜಿಸಲು ಚಿಂತನೆ ನಡೆಸುತ್ತಿರುವುದಾಗಿ ಹೇಳಿಕೆ ನೀಡಿದೆ.

ಪ್ರೊಫೆಸರ್ ಡಿ.ಬಿ.ದೇವಧರ್ ಟ್ರೋಫಿ ಮತ್ತು ಮುಶ್ತಾಖ್ ಅಲಿ ಟ್ವೆಂಟಿ20 ಸೂಪರ್ ಲೀಗ್ ಟ್ರೋಫಿಗಾಗಿ ವೇಳಾಪಟ್ಟಿಯನ್ನು ಬಿಸಿಸಿಐ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಂತಿಮಗೊಳಿಸಲಾಗುತ್ತಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಎನ್.ಶ್ರೀನಿವಾಸನ್, 2009-10ರ ರಾಷ್ಟ್ರೀಯ ಹಿರಿಯರ ತಂಡದ ದೇಶಿಯ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು.

ದೇವ್‌ಧರ್ ಟ್ರೋಫಿಯನ್ನು ಕಳೆದ 1973-74ರಿಂದ 60 ಒವರ್‌ಗಳ ಪಂದ್ಯವನ್ನು ವರ್ಷಕ್ಕೊಮ್ಮೆ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದು, 1980-81 ರಿಂದ 50 ಒವರ್‌ಗಳಿಗೆ ಸೀಮಿತಗೊಳಿಸಲಾಗಿದೆ ಎಂದು ಕ್ರಿಕೆಟ್ ಮೂಲಗಳು ತಿಳಿಸಿವೆ.

ಕಿರಿಯ ಆಟಗಾರರ ವೇಳಾಪಟ್ಟಿಯನ್ನು ನಂತರ ಬಿಡುಗಡೆಗೊಳಿಸುವುದಾಗಿ ಬಿಸಿಸಿಐ ಕಾರ್ಯದರ್ಶಿ ಶ್ರೀನಿವಾಸನ್ ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕೆವಿನ್ ಪೀಟರ್ಸನ್ ಜಗತ್ತಿನ ಅತ್ಯುತ್ತಮ ಬ್ಯಾಟ್ಸ್‌ಮೆನ್ : ಆಸೀಸ್
ಟೆಸ್ಟ್ ಕ್ರಿಕೆಟ್‌ನಿಂದ ವ್ಯಾಸ್ ನಿವೃತ್ತಿ ನಿರ್ಧಾರ : ಮೆಲ್
ಮೆಂಡಿಸ್ ಬೌಲಿಂಗ್ ಎದುರಿಸುವುದು ಕಠಿಣವಲ್ಲ : ಯುನೂಸ್
ಪಾಕ್ : ಪಿಸಿಬಿ ಮುಖ್ಯಸ್ಥರಿಂದ ಇಮ್ರಾನ್‌ಗೆ ಕ್ಷಮಾದಾನ
ಮತ್ತಷ್ಟು ಆಕ್ರಮಣಕಾರಿ ಆಟ ಅಗತ್ಯವಾಗಿತ್ತು :ಗೇಲ್
ಟೆಸ್ಟ್ : ಟಾಸ್ ಗೆದ್ದು ಪಾಕ್ ಫಿಲ್ಡಿಂಗ್ ಆಯ್ಕೆ