ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಬೋರ್ಡ್‌ನ ಆಯ್ಕೆ ಸಮಿತಿ ಅಧ್ಯಕ್ಷರ ಹೇಳಿಕೆಯನ್ನು ತಳ್ಳಿಹಾಕಿದ ಚಮಿಂದಾ ವ್ಯಾಸ್ , ತಾವು ಅಂತಹ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ.
ಸುಮಾರು 15 ವರ್ಷಗಳ ಕ್ರಿಕೆಟ್ ಜೀವನದ ಅವಧಿಯಲ್ಲಿ 110 ಟೆಸ್ಟ್ ಪಂದ್ಯಗಳನ್ನಾಡಿದ್ದು, 354 ವಿಕೆಟ್‌ಗಳನ್ನು ಪಡೆದ ಶ್ರೀಲಂಕಾ ತಂಡದ ವೇಗದ ಬೌಲರ್ ಚಮಿಂದಾ ವ್ಯಾಸ್ , ಆಯ್ಕೆ ಸಮಿತಿ ಅಧ್ಯಕ್ಷರನ್ನು ಭೇಟಿ ಮಾಡಿ ತಾವು ಟೆಸ್ಟ್ ಪಂದ್ಯಗಳಿಂದ ನಿವೃತ್ತಿಯಾಗುವುದಾಗಿ ಮಾಹಿತಿ ನೀಡಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಕಾರ್ಯದರ್ಶಿ ನಿಶಾಂತಾ ರಣತುಂಗಾ ಹೇಳಿದ್ದಾರೆ.
ಏತನ್ಮಧ್ಯೆ , ನಾನು ನಿವೃತ್ತಿಯಾಗುವುದಾಗಿ ಪ್ರಕಟವಾಗಿರುವ ವರದಿಗಳು ಸತ್ಯಕ್ಕೆ ದೂರವಾಗಿದ್ದು, ನಿವೃತ್ತಿಯಾಗುವ ನಿರ್ಧಾರ ಇಲ್ಲಿಯವರೆಗೆ ನಾನು ತೆಗೆದುಕೊಂಡಿಲ್ಲ ಎಂದು ಚಮಿಂದಾ ವ್ಯಾಸ್ ಸ್ಪಷ್ಟಪಡಿಸಿದ್ದಾರೆ.
ಚಮಿಂದಾವ್ಯಾಸ್ ,ಮುಂಬರುವ ದಿನಗಳಲ್ಲಿ ಏಕದಿನ ಪಂದ್ಯಗಳು ಹಾಗೂ ಟ್ವೆಂಟಿ20 ಪಂದ್ಯಗಳತ್ತ ಗಮನಹರಿಸುವುದಾಗಿ ಹಾಗೂ ವಿದೇಶದಿಂದ ಶ್ರೀಲಂಕಾಗೆ ಆಗಮಿಸಿದ ನಂತರ ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ಅಧಿಕೃತ ಪತ್ರ ರವಾನಿಸುವುದಾಗಿ ಆಯ್ಕೆ ಸಮಿತಿ ಅಧ್ಯಕ್ಷರಿಗೆ ತಿಳಿಸಿದ್ದಾರೆ ಎಂದು ರಣತುಂಗಾ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಮಧ್ಯಂತರ ಸಮಿತಿ ವ್ಯಾಸ್ ನಿವೃತ್ತಿಯ ಕುರಿತಂತೆ ಮಾತನಾಡಿ ಮುಂಬರುವ ದಿನಗಳಲ್ಲಿ ಅವರನ್ನು ತಂಡದ ಬೌಲಿಂಗ್ ಕೋಚ್ ಸ್ಥಾನಕ್ಕೆ ನೇಮಕ ಮಾಡುವ ಸಾಧ್ಯತೆಗಳಿವೆ ಎಂದು ಹೇಳಿಕೆ ನೀಡಿದೆ. |