ಪಾಕಿಸ್ತಾನ ಟೆಸ್ಟ್ ತಂಡಕ್ಕೆ ಮೊದಲ ಬಾರಿ ಪಾದಾರ್ಪಣೆ ಮಾಡಿದ ಮೊಹಮ್ಮದ್ ಅಮೇರ್ ಅದ್ಭುತ ಬೌಲಿಂಗ್ ಪ್ರದರ್ಶನದಿಂದಾಗಿ ಶ್ರೀಲಂಕಾ ತಂಡವನ್ನು ದಿನದಾಟದ ಅಂತ್ಯಕ್ಕೆ ಏಳು ವಿಕೆಟ್‌ಗಳನ್ನು ಕಳೆದುಕೊಂಡು 292ರನ್‌ಗಳಿಸಿತು.
ಪಾಕ್ ತಂಡದ ಪರ 17 ವರ್ಷ ಅಮೇರ್ ತಮ್ಮ ಮೊದಲ ಟೆಸ್ಟ್ ಪಂದ್ಯದಲ್ಲಿ ಮೂರು ವಿಕೆಟ್ ಕಬಳಿಸಿದರು. ಮತ್ತೊಬ್ಬ ಹೊಸ ಆಟಗಾರ ರೌಫ್ ಎರಡು ವಿಕೆಟ್‌ಗಳನ್ನು ಕಬಳಿಸಿ ಶ್ರೀಲಂಕಾ ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿದರು.
ಯುನೂಸ್ ಖಾನ್ 23 ರನ್‌ಗಳನ್ನು ನೀಡಿ 2 ವಿಕೆಟ್‌ಗಳನ್ನು ಗಳಿಸಿದರು. ವಿಕೆಟ್ ಕೀಪರ್ ಕಮ್ರಾನ್ ಅಕ್ಮಲ್ ನಾಲ್ಕು ಕ್ಯಾಚ್‌ಗಳನ್ನು ಹಿಡಿದು ಒಂದು ಸ್ಟಂಪಿಂಗ್ ಮಾಡುವ ಮೂಲಕ ಶ್ರೀಲಂಕಾ ತಂಡ 6 ವಿಕೆಟ್‌ಗಳ ನಷ್ಟಕ್ಕೆ 194 ರನ್‌ಗಳಿಗೆ ತಲುಪಿತು.
ಶ್ರೀಲಂಕಾದ ಆರಂಭಿಕ ಎಡಗೈ ಆಟಗಾರ ತರಂಗಾ ಪರಣವಿತನಾ ಮೂರನೇ ವಿಕೆಟ್ ಜೊತೆಯಾಟದಲ್ಲಿ ಮಹೇಲಾ ಜಯವರ್ಧನಾ (30) ಅವರೊಂದಿಗೆ 72 ಎಸೆತಗಳಲ್ಲಿ 75 ರನ್‌ಗಳಿಸಿದರು, ತಿಲಾನ್ ಸಮರವೀರಾ ಅವರೊಂದಿಗಿನ ನಾಲ್ಕನೇ ವಿಕೆಟ್ ಜತೆಯಾಟದಲ್ಲಿ 43ರನ್‌ಗಳಿಸಿದರು.
ಶ್ರೀಲಂಕಾ ಟೆಸ್ಟ್ ತಂಡಕ್ಕೆ ಪಾದಾರ್ಪಣೆ ಮಾಡಿದ ಅಂಗೆಲೊ ಮ್ಯಾಥ್ಯುಸ್, ಕುಲಸೇಖರ್ ಏಳನೇ ವಿಕೆಟ್ ಜೊತೆಯಾಟದಲ್ಲಿ 57 ಎಸೆತಗಳಲ್ಲಿ 42ರನ್‌ಗಳನ್ನು ಬಾರಿಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ಕುಲಸೇಖರ್ 38 ರನ್‌ಗಳಿಸಿದರು.
|