ಕ್ರಿಕೆಟ್‌ ಸುದ್ದಿ | ಕ್ರಿಕೆಟಿಗರು | ಲೇಖನಗಳು | ಐಪಿಎಲ್ | ಕ್ರಿಕೆಟ್ ಟಿಕರ್ | ಅಂಕಿಅಂಶ | ಟಿ-20ವಿಶ್ವಕಪ್
ಮುಖ್ಯ ಪುಟ » ಕ್ರೀಡಾ ಜಗತ್ತು » ಕ್ರಿಕೆಟ್‌ » ಕ್ರಿಕೆಟ್‌ ಸುದ್ದಿ » ಸರಣಿಯಿಂದಲೇ ಬ್ರೆಟ್ ಲೀ ಔಟ್; ತವರಿಗೆ ವಾಪಸ್ (Brett Lee | Australia | India | ODI series)
Feedback Print Bookmark and Share
 
ಮೊಣಕೈ ಗಾಯದಿಂದ ಬಳಲುತ್ತಿರುವ ಆಸ್ಟ್ರೇಲಿಯಾ ವೇಗಿ ಬ್ರೆಟ್ ಲೀ ಪ್ರಸಕ್ತ ನಡೆಯುತ್ತಿರುವ ಭಾರತ ವಿರುದ್ಧದ ಸರಣಿಯಿಂದಲೇ ಹೊರ ಬಿದ್ದಿದ್ದು, ತವರಿಗೆ ವಾಪಸಾಗಲಿದ್ದಾರೆ. ಇದರೊಂದಿಗೆ ಸತತ ಗಾಯಾಳು ಸಮಸ್ಯೆ ಎದುರಿಸುತ್ತಿರುವ ಪ್ರವಾಸಿ ತಂಡಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ.

ತಜ್ಞರು 32ರ ಹರೆಯದ ವೇಗಿಯನ್ನು ಪರೀಕ್ಷೆ ನಡೆಸಿದ ನಂತರ ಅವರು ಸರಣಿಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬರಲಾಗಿದೆ. ಹಾಗಾಗಿ ಅವರು ಸರಣಿಯ ಮಧ್ಯದಲ್ಲೇ ತವರಿಗೆ ಮರಳಲಿದ್ದಾರೆ ಎಂದು ತಂಡದ ಆಡಳಿತವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ವಡೋದರದಲ್ಲಿ ನಡೆದ ಮೊದಲ ಏಕದಿನ ಪಂದ್ಯದ ಸಂದರ್ಭದಲ್ಲಿ ಲೀ 10 ಓವರ್ ಬೌಲಿಂಗ್ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಆ ನಂತರ ನಡೆದ ನಾಗ್ಪುರದ ಎರಡನೇ ಏಕದಿನ ಪಂದ್ಯದಿಂದಲೂ ಅವರು ಹೊರಗುಳಿದಿದ್ದರು.

ಇಂದು ಲೀಯವರು ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಅಭ್ಯಾಸ ನಡೆಸಿದ್ದರು. ನಂತರ ಮಾತನಾಡಿದ್ದ ನಾಯಕ ರಿಕಿ ಪಾಂಟಿಂಗ್, ಅವರು ಶೇ.85ರಷ್ಟು ಫಿಟ್ನೆಸ್ ಹೊಂದಿದ್ದಾರೆ ಎಂದಿದ್ದರು.

ಬ್ರೆಟ್ ಲೀಯವರ ಮೊಣಕೈ ಗಾಯವು ನಾವಂದುಕೊಂಡ ರೀತಿಯಲ್ಲಿ ಚೇತರಿಕೆ ಕಂಡಿಲ್ಲ. ಚಿಕಿತ್ಸೆಗೆ ಪರಿಣಾಮಕಾರಿಯಾಗಿ ಅವರ ಗಾಯ ಗುಣಮುಖವಾಗಿಲ್ಲ. ಹಾಗಾಗಿ ಅವರನ್ನು ಪ್ರವಾಸದ ಮಧ್ಯದಲ್ಲೇ ತವರಿಗೆ ಕಳುಹಿಸಲು ನಿರ್ಧರಿಸಲಾಗಿದೆ. ಅಲ್ಲಿ ಅವರು ವಿಶೇಷ ತಜ್ಞರನ್ನು ಸಂಪರ್ಕಿಸಲಿದ್ದಾರೆ ಎಂದು ತಂಡದ ಫಿಸಿಯೋ ಕೆವಿನ್ ಸಿಮ್ಸ್ ತಿಳಿಸಿದ್ದಾರೆ.

ಈ ಸಂಬಂಧ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ರಾಷ್ಟ್ರೀಯ ಆಯ್ಕೆ ಸಮಿತಿಯು ಬದಲಿ ಆಟಗಾರನನ್ನು ಆಯ್ಕೆಗೊಳಿಸುವ ಪ್ರಕ್ರಿಯೆಯಲ್ಲಿ ನಿರತವಾಗಿದೆ. ಶೀಘ್ರದಲ್ಲೇ ಈ ಕುರಿತ ಸಲಹೆ ಹೊರ ಬೀಳಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮೈಕೆಲ್ ಕ್ಲಾರ್ಕೆ, ಕಾಲಮ್ ಫೆರ್ಗುಸನ್ ಮತ್ತು ಬ್ರಾಡ್ ಹಡ್ಡಿನ್‌ರವರು ಪ್ರವಾಸಕ್ಕೂ ಮೊದಲೇ ಗಾಯಾಳುಗಳಾಗಿದ್ದ ಕಾರಣ ಅವರಿಲ್ಲದ ತಂಡ ಭಾರತಕ್ಕೆ ಬಂದಿತ್ತು. ಕಳೆದ ಪಂದ್ಯದಲ್ಲಿ ವಿಕೆಟ್ ಕೀಪರ್ ಟಿಮ್ ಪಾಯ್ನೆ ಗಾಯಾಳುವಾಗಿದ್ದರು. ಅವರ ಬದಲಿಗೆ ಗ್ರಹಾಂ ಮನಾವ್‌ರನ್ನು ತಂಡಕ್ಕೆ ಸೇರ್ಪಡೆಗೊಳಿಸಲಾಗಿದ್ದು, ಶುಕ್ರವಾರ ರಾತ್ರಿ ಅವರು ಆಗಮಿಸಲಿದ್ದಾರೆ.

ಅದೇ ಹೊತ್ತಿಗೆ ಆಲ್-ರೌಂಡರ್ ಜೇಮ್ಸ್ ಹೋಪ್ಸ್ ಸ್ನಾಯು ಸೆಳೆತದಿಂದ ಬಳಲುತ್ತಿದ್ದು, ಅವರ ಭವಿಷ್ಯ ಇನ್ನಷ್ಟೇ ನಿರ್ಧಾರವಾಗಬೇಕಿದೆ. ಇಂದು ಬೆಳಿಗ್ಗೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ನೀಡಿದ್ದ ಹೇಳಿಕೆ ಪ್ರಕಾರ ಅವರು ಶನಿವಾರದ ಪಂದ್ಯಕ್ಕೆ ಲಭ್ಯರಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ