ಕ್ರಿಕೆಟ್‌ ಸುದ್ದಿ | ಕ್ರಿಕೆಟಿಗರು | ಲೇಖನಗಳು | ಐಪಿಎಲ್ | ಕ್ರಿಕೆಟ್ ಟಿಕರ್ | ಅಂಕಿಅಂಶ | ಟಿ-20ವಿಶ್ವಕಪ್
ಮುಖ್ಯ ಪುಟ » ಕ್ರೀಡಾ ಜಗತ್ತು » ಕ್ರಿಕೆಟ್‌ » ಕ್ರಿಕೆಟ್‌ ಸುದ್ದಿ » ಸಚಿನ್ 17 ಸಾವಿರ ದಾಖಲೆಯನ್ನು ತಡೆದ ಹೌರಿಟ್ಜ್ (Sachin Tendulkar | India | Australia | ODI series)
Feedback Print Bookmark and Share
 
ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ತನ್ನ ದಾಖಲೆಯ 17,000 ರನ್ ಪೂರೈಸುತ್ತಾರೆ ಎಂದು ಕಾದಿದ್ದ ಅಭಿಮಾನಿಗಳಿಗೆ ತೀವ್ರ ನಿರಾಸೆಯಾಗಿದೆ. ಅಗತ್ಯವಿದ್ದ 47 ರನ್‌ಗಳನ್ನು ಮುಟ್ಟುವ ಮೊದಲೇ ಅವರನ್ನು ನಥಾನ್ ಹೌರಿಟ್ಜ್ ಔಟ್ ಮಾಡುವ ಮೂಲಕ ವಿಶ್ವ ದಾಖಲೆಯ ನಿರೀಕ್ಷೆ ಮತ್ತೆ ಮುಂದಕ್ಕೆ ಹೋಗಿದೆ. ಅವರ ಈ ಸಾಧನೆಗೆ ಇನ್ನೂ 7 ರನ್ನುಗಳು ಬೇಕು.

ಇದೇ ನವೆಂಬರ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎರಡು ದಶಕಗಳನ್ನು ಪೂರ್ಣಗೊಳಿಸಿದ ಮೊತ್ತ ಮೊದಲ ಕ್ರಿಕೆಟ್ ಆಟಗಾರ ಎಂಬ ಹೆಮ್ಮೆಯ ದಾಖಲೆಗೆ ಪಾತ್ರರಾಗಲಿರುವ ಅವರು ಸೋಮವಾರದ ಪಂದ್ಯದಲ್ಲಿ 17,000 ರನ್ ಗಡಿ ದಾಟಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು.

ಆದರೆ ಅವರು 40 ರನ್ ಗಳಿಸಿದ್ದಾಗ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದು ವಿಕೆಟ್ ಒಪ್ಪಿಸಬೇಕಾಯಿತು. ಇಂದು 68 ಎಸೆತಗಳನ್ನೆದುರಿಸಿದ್ದ ಅವರು ಆರು ಬೌಂಡರಿಗಳಿಗೆ ಕಾರಣರಾಗಿದ್ದರು.

ಇನ್ನು ಏಳು ರನ್ ಗಳಿಸಿದರೆ ಅವರು ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ 17,000 ರನ್ ಪೂರೈಸಿದ ಮೊತ್ತ ಮೊದಲ ಕ್ರಿಕೆಟಿಗ ಎಂಬ ದಾಖಲೆಗೆ ಪಾತ್ರರಾಗಲಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಏಳು ಏಕದಿನ ಪಂದ್ಯಗಳ ಸರಣಿಯ ವಡೋದರದ ಮೊದಲ ಪಂದ್ಯದಲ್ಲಿ 14, ನಾಗ್ಪುರದಲ್ಲಿ 4, ದೆಹಲಿಯಲ್ಲಿ 32 ರನ್ ಗಳಿಸಿದ್ದರು. ಸರಣಿಯ ಐದನೇ ಪಂದ್ಯ ಹೈದರಾಬಾದ್‌ನಲ್ಲಿ ಗುರುವಾರ ನಡೆಯಲಿದೆ.

ಇದೀಗ 16,993 ರನ್‌ಗಳನ್ನು ಗಳಿಸಿರುವ ಸಚಿನ್ ಮೊಹಾಲಿಯಲ್ಲಿ ಆಡಿದ್ದು 434ನೇ ಪಂದ್ಯ. ಇದುವರೆಗೆ 44 ಏಕದಿನ ಶತಕ ಹಾಗೂ 91 ಅರ್ಧಶತಕಗಳನ್ನು ಅವರು ದಾಖಲಿಸಿದ್ದಾರೆ. ಅವರ ಬ್ಯಾಟಿಂಗ್ ಸರಾಸರಿ 45.
ಸಂಬಂಧಿತ ಮಾಹಿತಿ ಹುಡುಕಿ