ಕ್ರಿಕೆಟ್‌ ಸುದ್ದಿ | ಕ್ರಿಕೆಟಿಗರು | ಲೇಖನಗಳು | ಐಪಿಎಲ್ | ಕ್ರಿಕೆಟ್ ಟಿಕರ್ | ಅಂಕಿಅಂಶ | ಟಿ-20ವಿಶ್ವಕಪ್
ಮುಖ್ಯ ಪುಟ » ಕ್ರೀಡಾ ಜಗತ್ತು » ಕ್ರಿಕೆಟ್‌ » ಕ್ರಿಕೆಟ್‌ ಸುದ್ದಿ » ಉತ್ತಮ ಆರಂಭವನ್ನು ನಾವು ಕೈ ಚೆಲ್ಲಿದೆವು: ಧೋನಿ (India | Australia | MS Dhoni | Cricket)
Feedback Print Bookmark and Share
 
ನಾಲ್ಕನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 24 ರನ್ನುಗಳ ಅಂತರದಿಂದ ಸೋಲುಂಡ ನಂತರ ಪ್ರತಿಕ್ರಿಯಿಸಿರುವ ಟೀಮ್ ಇಂಡಿಯಾ ಕಪ್ತಾನ ಮಹೇಂದ್ರ ಸಿಂಗ್ ಧೋನಿ, ಚೇಸಿಂಗ್ ಆರಂಭ ಉತ್ತಮವಾಗಿದ್ದರೂ ಅದನ್ನು ಮುಂದುವರಿಸಿಕೊಂಡು ಹೋಗುವಲ್ಲಿ ನಾವು ವಿಫಲರಾದೆವು ಎಂದಿದ್ದಾರೆ.

250 ರನ್ನುಗಳಿಗೆ ಪ್ರವಾಸಿ ತಂಡವನ್ನು ಆಲೌಟ್ ಮಾಡಿದ್ದ ಭಾರತ ತನ್ನ ಇನ್ನಿಂಗ್ಸ್‌ನಲ್ಲಿ ಅಗ್ರ ದಾಂಡಿಗರ ವೈಫಲ್ಯದಿಂದ ಸೋಲುಂಡಿತ್ತು. ಇದರೊಂದಿಗೆ ಏಳು ಏಕದಿನ ಪಂದ್ಯಗಳ ಸರಣಿಯು 2-2ರ ಸಮಬಲ ಕಂಡುಕೊಂಡಿದೆ.

ಇದು ನಿಜಕ್ಕೂ ನಿರಾಸೆ ತಂದಿದೆ. ಇಲ್ಲಿನ ವಿಕೆಟ್ ಕೂಡ ಅತ್ಯುತ್ತಮವಾಗಿತ್ತು. ಅತ್ಯುತ್ತಮ ಆರಂಭ ಪಡೆದುಕೊಂಡಿದ್ದ ನಾವು ಗೆಲ್ಲಬೇಕಿತ್ತು. ನಾವು 50 ಓವರುಗಳ ಕಾಲ ಕಣದಲ್ಲಿ ನಿಲ್ಲಬೇಕಿತ್ತು. ಆದರೆ ಅವೆಲ್ಲವೂ ನಮ್ಮ ಕೈಯಲ್ಲಿ ಪೋಲಾಯಿತು ಎಂದು ಅಭಿಪ್ರಾಯಪಟ್ಟರು.

226 ರನ್ ಗಳಿಸಿದ ಭಾರತವು 46.4 ಓವರುಗಳಲ್ಲಿ ಸರ್ವಪತನ ಕಂಡಿತ್ತು. ಭಾರತದ ಪರ ಅಗ್ರ ವೈಯಕ್ತಿಕ ರನ್ ಕಲೆ (40) ಹಾಕಿದ್ದು ಸಚಿನ್ ತೆಂಡೂಲ್ಕರ್.

ಆದರೂ ಭಾರತದ ಫೀಲ್ಡರುಗಳನ್ನು ಅವರು ಅಭಿನಂದಿಸಿದಿಸಿದ್ದಾರೆ. ಈ ಪಂದ್ಯದಲ್ಲಿ ಭಾರತ ನಾಲ್ಕು ರನ್ನೌಟುಗಳನ್ನು ಮಾಡಿತ್ತು.

ಕಳೆದ ಒಂದೂವರೆ ವರ್ಷಗಳ ಅವಧಿಯಲ್ಲಿ ನಾವು ಮಾಡಿದ ಅತ್ಯುತ್ತಮ ಫೀಲ್ಡಿಂಗ್‌ಗಳಲ್ಲಿ ಇದೂ ಒಂದು. ಸ್ಪಿನ್ನರುಗಳು ಶ್ರೇಷ್ಠ ನಿರ್ವಹಣೆ ನೀಡಿದ್ದಾರೆ. ವೇಗಿಗಳು ಕೂಡ ಕೊನೆಯ ಪವರ್ ಪ್ಲೇ ಸಂದರ್ಭದಲ್ಲಿ ಎದುರಾಳಿಗಳನ್ನು ನಿಯಂತ್ರಿಸಿದರು ಎಂದು ಧೋನಿ ಮೆಚ್ಚುಗೆ ವ್ಯಕ್ತಪಡಿಸಿದರು.

ಗೆಲುವು ಸಾಧಿಸಿದ ತಂಡದ ನಾಯಕ ರಿಕಿ ಪಾಂಟಿಂಗ್ ವಿಶೇಷವಾಗಿ ವೇಗಿ ಡಾಗ್ ಬೊಲ್ಲಿಂಜೆರ್‌ರನ್ನು ಶ್ಲಾಘಿಸಿದರು.

ನಾವು 300ರವರೆಗೆ ರನ್ ಗಳಿಸಬಹುದಾದ ಪಿಚ್ ಇದಾಗಿತ್ತು. ಆದರೆ ಅವರು ಪವರ್ ಪ್ಲೇ ಸಂದರ್ಭದಲ್ಲಿ ಅತ್ಯುತ್ತಮ ಬೌಲಿಂಗ್ ಮಾಡಿದರು. ಭಾರತವು ಅತ್ಯುತ್ತಮ ಆರಂಭವನ್ನು ಪಡೆದಿದ್ದರೂ, ಬೊಲ್ಲಿಂಜೆರ್ ಅವರು ತಡೆದರು. ಅವರು ಪಡೆದ ವಿಕೆಟುಗಳಿಂದ ಪಂದ್ಯಕ್ಕೆ ತಿರುವು ದೊರೆಯಿತು ಎಂದು ಪಾಂಟಿಂಗ್ ತಿಳಿಸಿದ್ದಾರೆ.

ಬೊಲ್ಲಿಂಜೆರ್‌ರವರು ವೀರೇಂದ್ರ ಸೆಹ್ವಾಗ್, ವಿರಾಟ್ ಕೋಹ್ಲಿ ಮತ್ತು ನಾಯಕ ಧೋನಿಯವರನ್ನು ಔಟ್ ಮಾಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ