ಕ್ರಿಕೆಟ್‌ ಸುದ್ದಿ | ಕ್ರಿಕೆಟಿಗರು | ಲೇಖನಗಳು | ಐಪಿಎಲ್ | ಕ್ರಿಕೆಟ್ ಟಿಕರ್ | ಅಂಕಿಅಂಶ | ಟಿ-20ವಿಶ್ವಕಪ್
ಮುಖ್ಯ ಪುಟ » ಕ್ರೀಡಾ ಜಗತ್ತು » ಕ್ರಿಕೆಟ್‌ » ಕ್ರಿಕೆಟ್‌ ಸುದ್ದಿ » 44ಕ್ಕೆ ಜಿಂಬಾಬ್ವೆ ಆಲೌಟ್; 3-1ರಿಂದ ಸರಣಿ ಬಾಂಗ್ಲಾಕ್ಕೆ (Zimbabwe | Bangladesh | Hamilton Masakadza | Nazmul Hossain)
Feedback Print Bookmark and Share
 
ಜಿಂಬಾಬ್ವೆಯನ್ನು 44 ರನ್ನುಗಳಿಗೆ ಆಲೌಟ್ ಮಾಡಿದ ಬಾಂಗ್ಲಾದೇಶ ನಾಲ್ಕನೇ ಏಕದಿನ ಪಂದ್ಯವನ್ನು ಆರು ವಿಕೆಟುಗಳಿಂದ ಗೆದ್ದುಕೊಂಡಿದ್ದು, ಸರಣಿಯನ್ನು 3-1ರಿಂದ ವಶಪಡಿಸಿಕೊಂಡಿದೆ.

ಇಲ್ಲಿನ ಜೋಹರ್ ಅಹ್ಮದ್ ಚೌಧುರಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದಿದ್ದ ಪ್ರವಾಸಿ ಜಿಂಬಾಬ್ವೆ ಬ್ಯಾಟಿಂಗ್ ಆಯ್ದುಕೊಂಡಿತ್ತು. ಕೇವಲ 24.5 ಓವರುಗಳಲ್ಲಿ ತಮ್ಮೆಲ್ಲ ವಿಕೆಟುಗಳನ್ನು ಕಳೆದುಕೊಳ್ಳುವ ಮೂಲಕ ಐದು ಏಕದಿನ ಪಂದ್ಯಗಳ ಸರಣಿಯ ನಾಲ್ಕನೇ ಪಂದ್ಯವನ್ನು ತೀರಾ ನಿರಾಶಾಯುತರಾಗಿ ಮುಗಿಸಿದರು.

ಮ್ಯಾಲ್ಕಮ್ ವಾಲರ್ (13) ಮತ್ತು ಸ್ಟುವರ್ಟ್ ಮತ್ಸಿಕೆನ್ಯೇರಿ (11) ಹೊರತುಪಡಿಸಿ ಉಳಿದವರು ಒಂದಂಕಿಗೇ ಸೀಮಿತರಾದರು.

1-2, 2-3, 3-4, 4-8, 5-32, 6-32, 7-36, 8-36, 9-39, 10-44 ಇದು ಜಿಂಬಾಬ್ವೆ ವಿಕೆಟ್ ಕಳೆದುಕೊಂಡ ಪರಿ. ಐದನೇ ವಿಕೆಟಿಗೆ 24 ರನ್ನುಗಳ ಭಾಗೀದಾರಿಕೆ ಹೊರತಾಗಿ ಎರಡಂಕಿ ಜತೆಯಾಟ ಈ ಪಂದ್ಯದಲ್ಲಿ ಸಾಧ್ಯವಾಗಲಿಲ್ಲ.

ಶಾಕಿಬ್ ಅಲ್ ಹಸನ್, ಇನಾಮುಲ್ ಹಕ್ ಜೂನಿಯರ್ ತಲಾ ಮೂರು ವಿಕೆಟ್ ಹಾಗೂ ನಜ್ಮುಲ್ ಹೊಸೈನ್, ಅಬ್ದುರ್ ರಜಾಕ್ ತಲಾ ಎರಡು ವಿಕೆಟುಗಳನ್ನು ಪಡೆದಿದ್ದರು.

ಕೇವಲ 45 ರನ್ನುಗಳ ಗುರಿ ಪಡೆದುಕೊಂಡಿದ್ದ ಆತಿಥೇಯರ ಪರಿಸ್ಥಿತಿ ತೀರಾ ಉತ್ತಮವೇನೂ ಆಗಿರಲಿಲ್ಲ. ತಮೀಮ್ ಇಕ್ಬಾಲ್ 22 ರನ್ ಗಳಿಸಿದ್ದು ಬಿಟ್ಟರೆ ಉಳಿದವರಿಂದ ಏಕಂಕಿ ಸೀಮಿತ ಪ್ರದರ್ಶನ.

ಕೊನೆಗೂ ನಾಲ್ಕು ವಿಕೆಟ್ ನಷ್ಟಕ್ಕೆ 11.5 ಓವರುಗಳಲ್ಲಿ 49 ರನ್ ದಾಖಲಿಸುವ ಮೂಲಕ ಬಾಂಗ್ಲಾ ಗೆಲುವು ದಾಖಲಿಸಿತು. ಜಿಂಬಾಬ್ವೆ ಪರ ರೇ ಪ್ರಿನ್ಸ್ ಮತ್ತು ಗ್ರೇಮ್ ಕ್ರೀಮರ್ ತಲಾ ಎರಡೆರಡು ವಿಕೆಟ್ ಕಿತ್ತಿದ್ದರು.
ಸಂಬಂಧಿತ ಮಾಹಿತಿ ಹುಡುಕಿ