ಕ್ರಿಕೆಟ್‌ ಸುದ್ದಿ | ಕ್ರಿಕೆಟಿಗರು | ಲೇಖನಗಳು | ಐಪಿಎಲ್ | ಕ್ರಿಕೆಟ್ ಟಿಕರ್ | ಅಂಕಿಅಂಶ | ಟಿ-20ವಿಶ್ವಕಪ್
ಮುಖ್ಯ ಪುಟ » ಕ್ರೀಡಾ ಜಗತ್ತು » ಕ್ರಿಕೆಟ್‌ » ಕ್ರಿಕೆಟ್‌ ಸುದ್ದಿ » ಜಮ್ಮು ಕ್ರಿಕೆಟಿಗನಿಗೆ ವಿಧಿವಿಜ್ಞಾನ ಪ್ರಯೋಗಾಲಯ ಕ್ಲೀನ್ ಚಿಟ್ (Forensic Science Laboratory | Jammu & Kashmir | Parvez Rasool | KSCA)
Feedback Print Bookmark and Share
 
ಮೆಟಲ್ ಡಿಟೆಕ್ಟರ್ ಸ್ಫೋಟಕ ಸುಳಿವಿನ ಹಿನ್ನಲೆಯಲ್ಲಿ ಬೆಂಗಳೂರು ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಜಮ್ಮು-ಕಾಶ್ಮೀರ ಕ್ರಿಕೆಟ್ ಆಟಗಾರ ಫರ್ವೇಜ್ ರಸೂಲ್‌ಗೆ ವಿಧಿವಿಜ್ಞಾನ ಪ್ರಯೋಗಾಲಯ ಕ್ಲೀನ್ ಚಿಟ್ ನೀಡಿದೆ. ಆತ ಬ್ಯಾಗ್‌ನಲ್ಲಿ ಸ್ಫೋಟಕದ ಅಂಶಗಳಿಲ್ಲ ಎಂದು ಅದು ತನ್ನ ವರದಿಯಲ್ಲಿ ಸ್ಪಷ್ಟಪಡಿಸಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿಯ ಕೊಠಡಿಯಲ್ಲಿ ಜಮ್ಮು-ಕಾಶ್ಮೀರದ 22 ವರ್ಷದೊಳಗಿನವರ ಕ್ರಿಕೆಟ್ ಕ್ರಿಕೆಟ್ ತಂಡದ ಸದಸ್ಯರು ಉಳಿದುಕೊಂಡಿದ್ದರು. ಈ ಸಂದರ್ಭದಲ್ಲಿ ಕ್ರೀಡಾಂಗಣದ ಬಾಂಬ್ ಶೋಧಕ ಯಂತ್ರವು ಸುತ್ತ-ಮುತ್ತ ಸ್ಫೋಟಕ ಇರುವುದರ ಸೂಚನೆ ನೀಡಿತ್ತು.

ಇದರ ಜಾಡು ಹಿಡಿದು ಹೊರಟಿದ್ದ ಪೊಲೀಸರಿಗೆ ಜಮ್ಮು-ಕಾಶ್ಮೀರ ಕ್ರಿಕೆಟಿಗರು ಉಳಿದುಕೊಂಡಿದ್ದ ಕೊಠಡಿಗೆ ನುಗ್ಗಿದ್ದರು. ಅಲ್ಲಿದ್ದ ಬ್ಯಾಗೊಂದರಲ್ಲಿ ಸ್ಫೋಟಕದ ಅಂಶಗಳಿದೆ ಮೆಟಲ್ ಡಿಟೆಕ್ಟರ್ ಸಂಕೇತ ನೀಡುತ್ತಿದ್ದ ಕಾರಣ ರಸೂಲ್‌ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದರು.

ಬ್ಯಾಗ್‌ನಲ್ಲಿ ಯಾವುದೇ ಸ್ಫೋಟಕದ ಅಂಶಗಳು ಪತ್ತೆಯಾಗಿಲ್ಲ. ಆರ್‌ಡಿಎಕ್ಸ್ ಸೇರಿದಂತೆ ಪ್ಲಾಸ್ಟಿಕ್ ಬಾಂಬ್‌ಗಳ ಕುರಿತೂ ನಾವು ತನಿಖೆ ನಡೆಸಿದ್ದೇವೆ. ಸ್ಫೋಟಕದ ಅಂಶಗಳನ್ನು ಹೊಂದಿದ ಯಾವುದೇ ಪರಿಕರಗಳು ಅದರಲ್ಲಿ ಕಂಡು ಬಂದಿಲ್ಲ ಎಂದು ವಿಧಿವಿಜ್ಞಾನ ಪ್ರಯೋಗಾಲಯ ತನ್ನ ವರದಿಯಲ್ಲೀಗ ತಿಳಿಸಿದೆ.

ಪ್ರಯೋಗಾಲಯದ ವರದಿ ಕೈ ಸೇರಿರುವುದನ್ನು ಹೆಚ್ಚುವರಿ ಪೊಲೀಸ್ ಆಯುಕ್ತರಾದ ಎಂ.ಆರ್. ಪೂಜಾರ್ ಖಚಿತಪಡಿಸಿದ್ದು, ಪ್ರಕರಣವೀಗ ಮುಗಿದು ಹೋಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಬಂಧನಕ್ಕೊಳಗಾಗಿ ಬಿಡುಗಡೆಯಾಗಿದ್ದ ಕ್ರಿಕೆಟಿಗ ರಸೂಲ್‌ನಲ್ಲಿ ಬೆಂಗಳೂರು ಪೊಲೀಸರು ಕ್ಷಮೆ ಕೇಳಬೇಕೆಂದು ಜಮ್ಮು-ಕಾಶ್ಮೀರ ಕ್ರಿಕೆಟ್ ಮಂಡಳಿಯು ಟೂರ್ನಮೆಂಟ್ ಸಂದರ್ಭದಲ್ಲಿ ಪ್ರತಿಭಟನೆ ಕೂಡ ನಡೆಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ