ಕ್ರಿಕೆಟ್‌ ಸುದ್ದಿ | ಕ್ರಿಕೆಟಿಗರು | ಲೇಖನಗಳು | ಐಪಿಎಲ್ | ಕ್ರಿಕೆಟ್ ಟಿಕರ್ | ಅಂಕಿಅಂಶ | ಟಿ-20ವಿಶ್ವಕಪ್
ಮುಖ್ಯ ಪುಟ » ಕ್ರೀಡಾ ಜಗತ್ತು » ಕ್ರಿಕೆಟ್‌ » ಕ್ರಿಕೆಟ್‌ ಸುದ್ದಿ » ಸರ್ವಿಸಸ್ ಆಟದಿಂದ ಹಿಂಸರಿದದ್ದು ದುರದೃಷ್ಟಕರ: ಚಿದಂಬರಂ (Services team | Ranji Trophy | BCCI | Chidambaram)
Feedback Print Bookmark and Share
 
ಗುಪ್ತಚರ ವರದಿಗಳ ಹಿನ್ನಲೆಯಲ್ಲಿ ಮಿಲಿಟರಿಯವರೇ ತುಂಬಿರುವ ಸರ್ವಿಸಸ್ ತಂಡವು ಜಮ್ಮು-ಕಾಶ್ಮೀರ ವಿರುದ್ಧದ ಶ್ರೀನಗರ ರಣಜಿ ಟ್ರೋಫಿ ಪಂದ್ಯದಲ್ಲಿ ಆಡಿರಲಿಲ್ಲ ಎಂಬ ಗಾಳಿ ಸುದ್ದಿಗಳ ಬೆನ್ನಿಗೆ ನಿಷೇಧ ತೆರವುಗೊಳಿಸುವ ಯತ್ನಗಳೂ ಆರಂಭಗೊಂಡಿವೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹಸಚಿವ ಪಿ. ಚಿದಂಬರಂ, ಜಮ್ಮು-ಕಾಶ್ಮೀರ ವಿರುದ್ಧದ ಶ್ರೀನಗರ ರಣಜಿ ಟ್ರೋಫಿ ಪಂದ್ಯದಿಂದ ಸರ್ವಿಸಸ್ ಹಿಂದಕ್ಕೆ ಸರಿದದ್ದು ದುರದೃಷ್ಟಕರ ಎಂದು ಹೇಳಿದ್ದಾರೆ.

ಸರ್ವಿಸಸ್ ತಂಡ ಹಾಗೆ ಮಾಡಬಾರದಿತ್ತು. ಆದರೂ ಅವರು ಕ್ಷಮೆ ಕೇಳಿದ್ದಾರೆ. ಅದು ಕೇವಲ ಜಮ್ಮು-ಕಾಶ್ಮೀರದ ಕ್ರಿಕೆಟ್ ಅಭಿಮಾನಿಗಳನ್ನು ಮಾತ್ರವಲ್ಲ, ಎಲ್ಲರಲ್ಲೂ ಅವರು ಕ್ಷಮೆ ಯಾಚಿಸಿದ್ದಾರೆ. ಈ ಬೆಳವಣಿಗೆಗಳೆಲ್ಲ ನನ್ನ ಗಮನದಲ್ಲಿದೆ ಎಂದು ಸಚಿವರು ಹೇಳಿದರು.

ಇನ್ನು ಆಡಲು ಸಾಧ್ಯವಾಗುವ ಅಥವಾ ನಿರ್ಧಾರವನ್ನು ಬದಲಾಯಿಸುವ ಕುರಿತು ನಾನು ಏನನ್ನೂ ಹೇಳಲಾರೆ. ನಡೆಯಬೇಕಾಗಿರುವ ಪಂದ್ಯದ ದಿನಾಂಕ ಕಳೆದಿರುವುದರಿಂದ ಅದನ್ನು ಆಡಲು ಸಾಧ್ಯವಿಲ್ಲ ಎಂದಾದರೆ ಮತ್ತೊಂದು ದಿನಾಂಕವನ್ನು ನಿಗದಿಪಡಿಸುವಂತೆ ಬಿಸಿಸಿಐಯಲ್ಲಿ ಮನವಿ ಮಾಡಿಕೊಳ್ಳಿ ಎಂದು ಸರ್ವಿಸಸ್ ಮಂಡಳಿಗೆ ಹೇಳಲು ರಕ್ಷಣಾ ಕಾರ್ಯದರ್ಶಿಯವರಿಗೆ ಸೂಚಿಸಿದ್ದೇನೆ. ಹಾಗೆ ಮಾಡಿದಲ್ಲಿ ಶ್ರೀನಗರದಲ್ಲಿ ಸರ್ವಿಸಸ್ ಆಡಲು ಸಾಧ್ಯವಾಗುತ್ತದೆ ಎಂದು ಚಿದಂಬರಂ ವಿವರಣೆ ನೀಡಿದ್ದಾರೆ.

ಈ ನಡುವೆ ರಕ್ಷಣಾ ಖಾತೆಯ ರಾಜ್ಯ ಸಚಿವ ಪಲ್ಲಂ ರಾಜು ಪ್ರಕರಣವನ್ನು ಬಗೆಹರಿಸಲು ಆಸಕ್ತಿ ತೋರಿಸಿದ್ದಾರೆ.

ರಣಜಿ ಟ್ರೋಫಿಯ ಶ್ರೀನಗರ ಪಂದ್ಯದಿಂದ ಹೊರಗುಳಿಯುವ ನಿರ್ಧಾರವನ್ನು ತೆಗೆದುಕೊಂಡಿದ್ದು ಕೆಳ ಹಂತದಲ್ಲಿ. ಈಗ ಅವರು ಬಿಸಿಸಿಐ ಅವಕಾಶ ನೀಡಿದಲ್ಲಿ ಆಡಲು ಸಿದ್ಧರಿದ್ದಾರೆ. ಹಾಗಾಗಿ ಪ್ರಕರಣವನ್ನು ಸುಖಾಂತ್ಯ ಮಾಡುವ ಕುರಿತು ಇಲಾಖೆಯು ಪ್ರಯತ್ನಿಸಲಿದೆ ಎಂದು ರಾಜು ತಿಳಿಸಿದ್ದಾರೆ.

ಗುಪ್ತಚರ ಇಲಾಖೆ ಎಚ್ಚರಿಕೆ...
ಮಿಲಿಟರಿಯ ಸದಸ್ಯರಿರುವ ಸರ್ವಿಸಸ್ ತಂಡ ಶ್ರೀನಗರದಲ್ಲಿ ಆಡಲು ಹೋಗದಂತೆ ಗುಪ್ತಚರ ಇಲಾಖೆ ತಡೆದಿತ್ತು ಎಂಬ ವರದಿಗಳೂ ಬಂದಿವೆ.

ಆದರೆ ಯಾವ ರೀತಿಯ ಎಚ್ಚರಿಕೆ ನೀಡಲಾಗಿತ್ತು ಎಂಬುದನ್ನು ವಿವರಿಸಲಾಗಿಲ್ಲ. ಅಲ್ಲಿನ ಪರಿಸ್ಥಿತಿಯ ಕುರಿತು ಅಥವಾ ದಾಳಿ ನಡೆಸಲಾಗುತ್ತದೆಯೇ ಎಂಬುದನ್ನು ಹೇಳಿಲ್ಲ, ಆದರೆ ಅಲ್ಲಿಗೆ ಹೋಗುವುದು ಅಪಾಯ ಎಂದು ಹೇಳಲಾಗಿತ್ತು ಎಂದು ಮೂಲಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ