ಕ್ರಿಕೆಟ್‌ ಸುದ್ದಿ | ಕ್ರಿಕೆಟಿಗರು | ಲೇಖನಗಳು | ಐಪಿಎಲ್ | ಕ್ರಿಕೆಟ್ ಟಿಕರ್ | ಅಂಕಿಅಂಶ | ಟಿ-20ವಿಶ್ವಕಪ್
ಮುಖ್ಯ ಪುಟ » ಕ್ರೀಡಾ ಜಗತ್ತು » ಕ್ರಿಕೆಟ್‌ » ಕ್ರಿಕೆಟ್‌ ಸುದ್ದಿ » ಪಾಕಿಸ್ತಾನ ಯುವಕರಿಗೆ ಸಚಿನ್ ಮಾದರಿ: ಮಿಯಾಂದಾದ್ (Sachin Tendulkar | Javed Miandad | Pakistan | India)
Feedback Print Bookmark and Share
 
ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡೂಲ್ಕರ್‌ರನ್ನು ಅಟ್ಟಕ್ಕೇರಿಸಿರುವ ಪಾಕಿಸ್ತಾನ ಮಾಜಿ ಕಪ್ತಾನ ಜಾವೇದ್ ಮಿಯಾಂದಾದ್, ಉಪಖಂಡದ ಯುವ ಆಟಗಾರರು ನಿಜಕ್ಕೂ ಕ್ರಿಕೆಟ್‌ನಲ್ಲಿ ಸಾಧನೆ ಮಾಡಬೇಕೆಂದಿದ್ದರೆ ಅವರನ್ನು ಅನುಸರಿಸಬೇಕು ಎಂದು ಸಲಹೆ ನೀಡಿದ್ದಾರೆ.

ಹೈದರಾಬಾದ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಐದನೇ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಏಕದಿನದಲ್ಲಿ 17,000 ರನ್ ಪೂರೈಸಿದ ಸಚಿನ್ ತೆಂಡೂಲ್ಕರ್‌ರನ್ನು ಅವರು ಶ್ಲಾಘಿಸಿದ್ದಾರೆ.

ಸಚಿನ್ ತನ್ನ ಕ್ರಿಕೆಟ್ ಜೀವನವನ್ನು ಅತ್ಯುತ್ತಮ ರೀತಿಯಲ್ಲಿ ನಿಭಾಯಿಸಿದ್ದಾರೆ. ರನ್ನುಗಳೆಡೆಗಿನ ತನ್ನ ದಾಹವನ್ನು ಜೀವಂತವಾಗಿಟ್ಟುಕೊಂಡಿರುವ ಕಾರಣದಿಂದ ಸುದೀರ್ಘಾವಧಿಯವರೆಗೆ ಅವರು ತಂಡದಲ್ಲೇ ಉಳಿದುಕೊಂಡಿದ್ದಾರೆ. ನಿಜಕ್ಕೂ ಅವರು ಪಾಕಿಸ್ತಾನ ಮತ್ತು ಭಾರತದ ಯುವ ಕ್ರಿಕೆಟ್ ಆಟಗಾರರರಿಗೆ ಒಂದು ಪಾಠವಾಗಬೇಕು ಎಂದು ಮಿಯಾಂದಾದ್ ಅಭಿಪ್ರಾಯಪಟ್ಟರು.

ಮತ್ತೂ ಮಾತು ಮುಂದುವರಿಸಿದ ಮಿಯಾಂದಾದ್, ಯುವಕರು ಕ್ರೀಡೆಯಲ್ಲಿ ಏನಾದರೂ ಸಾಧಿಸಬೇಕೆಂದು ಗಂಭೀರವಾಗಿ ಅಂದುಕೊಂಡಿದ್ದಲ್ಲಿ, ಅವರು ತೆಂಡೂಲ್ಕರ್ ಅವರನ್ನು ತಮ್ಮ ಮಾದರಿಯೆಂದು ಸ್ವೀಕರಿಸಬೇಕು ಎಂದರು.

ಸುದೀರ್ಘ ಕ್ರೀಡಾ ಜೀವನದ ಹೊರತಾಗಿಯೂ ರನ್ ದಾಹವನ್ನು ಜೀವಂತವಾಗಿರಿಸಿಕೊಂಡ ತೆಂಡೂಲ್ಕರ್ ಅವರ ನಡೆಯನ್ನು ನಾನು ನಿಜಕ್ಕೂ ಮೆಚ್ಚಿಕೊಂಡಿದ್ದೇನೆ ಎಂದು ಇದೇ ಸಂದರ್ಭದಲ್ಲಿ ಅವರು ಅಭಿನಂದಿಸಿದ್ದಾರೆ.

ಕಳೆದ ಪಂದ್ಯದಲ್ಲಿ ಅವರು ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ 17,000 ರನ್ ಪೂರೈಸಿದ್ದಲ್ಲದೆ, 45 ಶತಕಗಳನ್ನು ದಾಖಲಿಸಿದ ಸಾಧನೆಗೂ ಪಾತ್ರರಾಗಿದ್ದಾರೆ. 60ನೇ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದಿರುವುದು ಅವರ ಹಿರಿಮೆಗೆ ಸಂದ ಮತ್ತೊಂದು ಗೌರವ.
ಸಂಬಂಧಿತ ಮಾಹಿತಿ ಹುಡುಕಿ