ಕ್ರಿಕೆಟ್‌ ಸುದ್ದಿ | ಕ್ರಿಕೆಟಿಗರು | ಲೇಖನಗಳು | ಐಪಿಎಲ್ | ಕ್ರಿಕೆಟ್ ಟಿಕರ್ | ಅಂಕಿಅಂಶ | ಟಿ-20ವಿಶ್ವಕಪ್
ಮುಖ್ಯ ಪುಟ » ಕ್ರೀಡಾ ಜಗತ್ತು » ಕ್ರಿಕೆಟ್‌ » ಕ್ರಿಕೆಟ್‌ ಸುದ್ದಿ » ಯೂನಿಸ್ ಟೆಸ್ಟ್‌ಗೆ ಸಾಕು; ನಾಯಕತ್ವ ಆಫ್ರಿದಿಗಿರಲಿ: ಹಕ್ (Shahid Afridi | Pakistan | Inzamam-ul Haq | Younis Khan)
Feedback Print Bookmark and Share
 
ಪಾಕಿಸ್ತಾನದ ಟ್ವೆಂಟಿ-20 ರಾಷ್ಟ್ರೀಯ ತಂಡಕ್ಕೆ ಶಾಹಿದ್ ಆಫ್ರಿದಿ ನಾಯಕನಾದ ನಂತರ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು, ಏಕದಿನ ತಂಡದ ಕಪ್ತಾನಗಿರಿಯನ್ನೂ ಈ ಆಲ್-ರೌಂಡರ್‌ಗೆ ನೀಡಬೇಕೆಂದು ಮಾಜಿ ಕಪ್ತಾನ ಇಂಜಮಾಮ್ ಉಲ್ ಹಕ್ ಒತ್ತಾಯಿಸಿದ್ದಾರೆ.

ಅಬುಧಾಬಿ ಮತ್ತು ದುಬೈಗಳಲ್ಲಿ ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನವು ಏಕದಿನ ಮತ್ತು ಟ್ವೆಂಟಿ-20 ಸರಣಿಗಳಿಗಾಗಿ ಕ್ರಮವಾಗಿ ಯೂನಿಸ್ ಖಾನ್ ಮತ್ತು ಶಾಹಿದ್ ಆಫ್ರಿದಿ ನಾಯಕತ್ವಗಳಲ್ಲಿ ಆಡುತ್ತಿರುವ ನಡುವೆ ಇಂಜಮಾಮ್ ಈ ಹೇಳಿಕೆ ನೀಡಿದ್ದಾರೆ.

ನನ್ನ ಪ್ರಕಾರ ಆಫ್ರಿದಿ ಟ್ವೆಂಟಿ-20 ನಾಯಕನಾದ ಮೇಲೆ ಅತ್ಯುತ್ತಮ ಆಟ ನೀಡುತ್ತಿದ್ದಾರೆ. ಅವರು ಪ್ರೌಢತೆಯನ್ನು ಮೈಗೂಡಿಸಿಕೊಂಡಿದ್ದು, ಜವಾಬ್ದಾರಿಯನ್ನು ಅರಿತ ಆಟಗಾರನಾಗಿ ಬದಲಾಗಿದ್ದಾರೆ ಎಂದು ಹಕ್ ಅಭಿಪ್ರಾಯಪಟ್ಟರು.

ಮುಂಬರುವ 2011ರ ವಿಶ್ವಕಪ್ ತನಕ ಆಫ್ರಿದಿಯವರನ್ನು ಪಾಕಿಸ್ತಾನ ಏಕದಿನ ತಂಡದ ನಾಯಕನನ್ನಾಗಿ ಮಾಡಬೇಕು. ಈ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಗಂಭೀರವಾಗಿ ಯೋಚಿಸಬೇಕು ಎಂದು ಪಾಕಿಸ್ತಾನದ ಪರ ಅತೀ ಹೆಚ್ಚು ಟೆಸ್ಟ್ (120) ಮತ್ತು ಏಕದಿನ (378) ಪಂದ್ಯಗಳಲ್ಲಿ ಆಡಿರುವ ಇಂಜಮಾಮ್ ಆಗ್ರಹಿಸಿದ್ದಾರೆ.

ಅವರು ತಂಡದ ಇತರ ಆಟಗಾರರ ಜತೆ ಕೂಡ ಉತ್ತಮ ಸಂಬಂಧ ಹೊಂದಿದ್ದಾರೆ. ಅತ್ಯುತ್ತಮ ಸಂಪರ್ಕಜ್ಞಾನವೂ ಅವರಿಗಿದೆ. ಜವಾಬ್ದಾರಿಯನ್ನು ಅವರಿಗೆ ನೀಡಿದ ನಂತರ ಅವರ ವೈಯಕ್ತಿಕ ಪ್ರದರ್ಶನವೂ ಉನ್ನತಗೊಂಡಿದೆ. ಹಾಗಾಗಿ ನಾಯಕ ಸ್ಥಾನಕ್ಕೆ ಅವರೇ ಸೂಕ್ತ ವ್ಯಕ್ತಿ ಎಂದರು.

ಯೂನಿಸ್ ಮೇಲೆ ದಾಳಿ ನಡೆಸಿದ ಅವರು, ರನ್ ಗಳಿಸಲು ಪರದಾಡುತ್ತಿರುವ ಅವರಿಂದ ತಂಡಕ್ಕೆ ಒಳಿತಾಗದು ಎಂದಿದ್ದಾರೆ.

ಯೂನಿಸ್ ಒತ್ತಡದಲ್ಲಿದ್ದಾರೆ. ನಾಯಕನಾದವ ಆಟಗಾರನಾಗಿ ತನ್ನ ಕೊಡುಗೆಯನ್ನು ನೀಡದಿದ್ದರೆ ತಂಡದ ಇತರ ಸದಸ್ಯರ ಮೇಲೆ ಒತ್ತಡ ಬೀಳುತ್ತದೆ. ಅವರೀಗ ಏಕದಿನದಲ್ಲಿ ಪರದಾಡುತ್ತಿದ್ದಾರೆ ಎಂದು ಹಕ್ ತನ್ನ ಅನಿಸಿಕೆ ವ್ಯಕ್ತಪಡಿದರು.

ಯೂನಿಸ್‌ರನ್ನು ಟೆಸ್ಟ್ ತಂಡಕ್ಕೆ ನಾಯಕನನ್ನಾಗಿ ಮಾತ್ರ ಉಳಿಸಿಕೊಳ್ಳುವ ಮೂಲಕ ತನ್ನ ಬ್ಯಾಟಿಂಗ್ ಮೇಲೆ ಗಮನ ಕೇಂದ್ರೀಕರಿಸಲು ಅವಕಾಶ ಮಾಡಿಕೊಡುವುದು ಉತ್ತಮ ಎಂದು ಮಂಡಳಿಗೆ ಅವರು ಸಲಹೆ ನೀಡಿದ್ದಾರೆ.

ಅದೇ ಹೊತ್ತಿಗೆ ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದಿಂದ ಆಲ್-ರೌಂಡರ್ ಶೋಯಿಬ್ ಮಲಿಕ್‌ರನ್ನು ಕೈ ಬಿಟ್ಟಿರುವುದಕ್ಕೆ ನಾಯಕ ಯೂನಿಸ್, ಕೋಚ್ ಇಂತಿಕಾಬ್ ಆಲಮ್ ಮತ್ತು ಮುಖ್ಯ ಆಯ್ಕೆಗಾರ ಇಕ್ಬಾಲ್ ಖಾಸಿಂರನ್ನು ಹಕ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ