ಕ್ರಿಕೆಟ್‌ ಸುದ್ದಿ | ಕ್ರಿಕೆಟಿಗರು | ಲೇಖನಗಳು | ಐಪಿಎಲ್ | ಕ್ರಿಕೆಟ್ ಟಿಕರ್ | ಅಂಕಿಅಂಶ | ಟಿ-20ವಿಶ್ವಕಪ್
ಮುಖ್ಯ ಪುಟ » ಕ್ರೀಡಾ ಜಗತ್ತು » ಕ್ರಿಕೆಟ್‌ » ಕ್ರಿಕೆಟ್‌ ಸುದ್ದಿ » ರಣಜಿ: ಉ.ಪ್ರ. ವಿರುದ್ಧ ಕರ್ನಾಟಕಕ್ಕೆ ಅಮೋಘ ಜಯ (Ranji Trophy | Rahul Dravid | Manish Pandey | Karnataka)
Feedback Print Bookmark and Share
 
ನಿರೀಕ್ಷೆಯಂತೆ ರಣಜಿ ಟ್ರೋಫಿ ಸೂಪರ್ ಲೀಗ್ 'ಎ' ಗುಂಪಿನ ಮೊದಲ ಪಂದ್ಯವನ್ನು ಕರ್ನಾಟಕ ಸುಲಭವಾಗಿ ಗೆದ್ದುಕೊಂಡಿದೆ. ಎರಡನೇ ಇನ್ನಿಂಗ್ಸ್‌ನಲ್ಲೂ ಮಿಂಚಿರುವ ಅಭಿಮನ್ಯು ಮಿಥುನ್ ಐದು ವಿಕೆಟು ಪಡೆಯುವ ಮೂಲಕ ಉತ್ತರ ಪ್ರದೇಶವನ್ನು ರಾಹುಲ್ ದ್ರಾವಿಡ್ ಪಡೆ 185 ರನ್ನುಗಳ ಅಂತರದಿಂದ ಮಣಿಸಿತು.

ಕರ್ನಾಟಕ ನೀಡಿದ್ದ 438 ರನ್ನುಗಳ ಹಿಂದೆ ಬಿದ್ದಿದ್ದ ಉತ್ತರ ಪ್ರದೇಶ ಇಲ್ಲಿನ ಸಿವಿಲ್ ಲೈನ್ಸ್‌ನ ವಿಕ್ಟೋರಿಯಾ ಪಾರ್ಕ್ ಕ್ರೀಡಾಂಗಣದಲ್ಲಿ ಕೊನೆಯ ದಿನ ಬಹಳ ಹೊತ್ತು ಆಟ ಮುಂದುವರಿಯಲು ಕರ್ನಾಟಕ ಅವಕಾಶ ನೀಡಲಿಲ್ಲ. ಆ ಮೂಲಕ ಒಟ್ಟಾರೆ 66.6 ಓವರುಗಳಲ್ಲಿ 252 ರನ್ನು ಗಳಿಸಿದ ಆತಿಥೇಯರು ಸರ್ವಪತನ ಕಂಡು ಸೋಲೊಪ್ಪಿಕೊಂಡರು.

ಮೂರನೇ ದಿನದಂತ್ಯಕ್ಕೆ ಎರಡನೇ ಇನ್ನಿಂಗ್ಸ್ ಆರಂಭಿಸಿ 29 ರನ್ನುಗಳಿಗೆ ಒಂದು ವಿಕೆಟ್ ಕಳೆದುಕೊಂಡಿದ್ದ ಉತ್ತರ ಪ್ರದೇಶಕ್ಕಿಂದು ಭುವನೇಶ್ವರ್ ಕುಮಾರ್ (63) ಮತ್ತು ನಾಯಕ ಮೊಹಮ್ಮದ್ ಕೈಫ್ (54) ಅರ್ಧಶತಕದ ಆಸರೆಯಾಗಿದ್ದನ್ನು ಹೊರತುಪಡಿಸಿದರೆ ಉಳಿದವರದ್ದು ನಗಣ್ಯ.

ಶಿವಕಾಂತ್ ಶುಕ್ಲಾ (35), ರವಿಕಾಂತ್ ಶುಕ್ಲಾ (10), ಪರ್ವೀಂದರ್ ಸಿಂಗ್ (14), ಪಿಯೂಶ್ ಚಾವ್ಲಾ (17) ಮತ್ತು ಪ್ರವೀಣ್ ಗುಪ್ತಾ (11*) ಹೆಚ್ಚು ಸಹಕಾರಿಯೆನಿಸಲಿಲ್ಲ.

ಮೊದಲ ಇನ್ನಿಂಗ್ಸ್‌ನಲ್ಲಿ ಆರು ವಿಕೆಟ್ ಕಬಳಿಸಿದ್ದ ಅಭಿಮನ್ಯು ಮಿಥುನ್ ಎರಡನೇ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಕಿತ್ತರು. ರಣಜಿ ಪದಾರ್ಪಣೆ ಪಂದ್ಯದಲ್ಲೇ 11 ವಿಕೆಟುಗಳನ್ನು ಪಡೆಯುವ ಮೂಲಕ ಮಿಥುನ್ ಗಮನ ಸೆಳೆದಿದ್ದಾರೆ. ಉಳಿದಂತೆ ಸುನಿಲ್ ಜೋಷಿ ಎರಡು ಹಾಗೂ ಆರ್. ವಿನಯ್ ಕುಮಾರ್, ಅಮಿತ್ ವರ್ಮಾ, ಉದಿತ್ ಪಟೇಲ್ ತಲಾ ಒಂದೊಂದು ವಿಕೆಟ್ ಪಡೆದರು.

ಈ ಪಂದ್ಯದಲ್ಲಿ ಗೆಲುವು ಸಾಧಿಸುವುದರೊಂದಿಗೆ ಕರ್ನಾಟಕ ಐದು ಅಂಕಗಳನ್ನು ಪಡೆದುಕೊಂಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಮನೀಷ್ ಪಾಂಡೆ (194) ಮತ್ತು ರಾಹುಲ್ ದ್ರಾವಿಡ್ (97) ಆಟ ಕರ್ನಾಟಕಕ್ಕೆ ಹೆಚ್ಚು ಬಲ ನೀಡಿತ್ತು.

ಸಂಕ್ಷಿಪ್ತ ಸ್ಕೋರ್
ಕರ್ನಾಟಕ 405 ಮತ್ತು 311/5 ಡಿಕ್ಲೇರ್
ಉತ್ತರ ಪ್ರದೇಶ 278 ಮತ್ತು 252
ಸಂಬಂಧಿತ ಮಾಹಿತಿ ಹುಡುಕಿ