ಕ್ರಿಕೆಟ್‌ ಸುದ್ದಿ | ಕ್ರಿಕೆಟಿಗರು | ಲೇಖನಗಳು | ಐಪಿಎಲ್ | ಕ್ರಿಕೆಟ್ ಟಿಕರ್ | ಅಂಕಿಅಂಶ | ಟಿ-20ವಿಶ್ವಕಪ್
ಮುಖ್ಯ ಪುಟ » ಕ್ರೀಡಾ ಜಗತ್ತು » ಕ್ರಿಕೆಟ್‌ » ಕ್ರಿಕೆಟ್‌ ಸುದ್ದಿ » 439 ರನ್: 46 ವರ್ಷದ ದಾಖಲೆ ಮುರಿದ 12ರ ಪೋರ (Sarfaraz Khan | Mumbai Cricket | Harris Shield match | Highest Individual Score)
Feedback Print Bookmark and Share
 
ಈ ಹುಡುಗನ ಹೆಸರು ಸರ್ಫರಾಜ್ ಖಾನ್.... ವಯಸ್ಸಿನ್ನೂ 12 ವರ್ಷ.ಆದರೆ ಕಳೆದ ಸೋಮವಾರ ಸಂಜೆ ಹ್ಯಾರಿಸ್ ಶೀಲ್ಡ್ ಪಂದ್ಯದಲ್ಲಿ ಆತ ಏಕಾಂಗಿಯಾಗಿ 439 ರನ್ನುಗಳನ್ನು ಪೇರಿಸಿ ದಾಖಲೆ ಪುಸ್ತಕಗಳನ್ನೆಲ್ಲಾ ತಿದ್ದಿ ಬರೆಯುವಂತೆ ಮಾಡಿದ್ದಾನೆ!

ಶಾಲಾ ಮಟ್ಟದ ಈ ಪಂದ್ಯದಲ್ಲಿ ರಿಜ್ವಿ ಸ್ಪ್ರಿಂಗ್‌ಫೀಲ್ಡ್ ಪರವಾಗಿ ಆಡಿದ ಖಾನ್, ಇಂಡಿಯನ್ ಎಜುಕೇಶನ್ ಸೊಸೈಟಿ (ಕಾಂದೀವಲಿ) ತಂಡದ ಬೌಲರುಗಳನ್ನು ಯದ್ವಾತದ್ವಾ ಚಚ್ಚಿ, ಒಟ್ಟು 56 ಬೌಂಡರಿಗಳು ಮತ್ತು 12 ಸಿಕ್ಸರ್‌ಗಳನ್ನು ಒಬ್ಬನೇ ಒಂದೇ ಪಂದ್ಯದಲ್ಲಿ ಸಿಡಿಸಿದ್ದಾನೆ. 439 ರನ್ ಮಾಡಲು ಆತ ತೆಗೆದುಕೊಂಡದ್ದು 421 ಎಸೆತಗಳನ್ನು.

ಇದು ಹ್ಯಾರಿಶ್ ಶೀಲ್ಡ್ ಸರಣಿಯ 112 ವರ್ಷಗಳ ಇತಿಹಾಸದಲ್ಲೇ ಹೊಸ ದಾಖಲೆ. ಈ ಹಿಂದೆ ಅಂದರೆ 46 ವರ್ಷಗಳ ಹಿಂದೆ (1963-64ರಲ್ಲಿ) ಆರ್.ನಾಗದೇವ್ ಎಂಬವರು 427 ರನ್ ಗಳಿಸಿದ್ದು ಇದುವರೆಗಿನ ಗರಿಷ್ಠ ಸ್ಕೋರ್ ಆಗಿತ್ತು.

ಸ್ಥಳೀಯ ಕ್ರಿಕೆಟ್ ಕೋಚ್ ಆಗಿರುವ ನನ್ನ ತಂದೆಯೇ ನನಗೆ ಪ್ರೇರಣೆ. ಸಚಿನ್ ತೆಂಡುಲ್ಕರ್ ಅವರ 327 ರನ್ನುಗಳ ದಾಖಲೆಯನ್ನು ಗುರಿಯಾಗಿರಿಸಿ ಆಡು ಎಂದು ಅವರು ನನಗೆ ಹೇಳುತ್ತಲೇ ಇದ್ದರು. ಕ್ರಾಸ್ ಮೈದಾನದಲ್ಲಿನ ಒಂದು ಬದಿಯ ಬೌಂಡರಿ ಗೆರೆ ಸಮೀಪದಲ್ಲೇ ಇದ್ದುದರಿಂದ ನನಗಿದು ಸಾಧ್ಯ ಎಂದನ್ನಿಸಿತ್ತು ಎಂದು 235 ರನ್ನುಗಳೊಂದಿಗೆ ಆ ದಿನದ ಆಟ ಆರಂಭಿಸಿದ್ದ ಖಾನ್ ಹೇಳಿದ್ದಾನೆ.

ಸ್ಥಳೀಯ ಮಾಧ್ಯಮಗಳೆಲ್ಲವೂ ಈಗಾಗಲೇ ಆತನನ್ನು ಅದ್ಭುತ ಪ್ರತಿಭಾವಂತ ಎಂದೆಲ್ಲಾ ಭಾರೀ ಪ್ರಚಾರ ನೀಡಿವೆ.

ಸುನಿಲ್ ಗವಾಸ್ಕರ್, ಸಚಿನ್ ತೆಂಡುಲ್ಕರ್, ವಿನೋದ್ ಕಾಂಬ್ಳಿಯಂತಹಾ ಮಹಾನ್ ಕ್ರಿಕೆಟಿಗರನ್ನು ನೀಡಿದ ಮುಂಬೈಯಿಂದ ಮತ್ತೊಂದು ಕೊಡುಗೆ ಕಾದಿದೆಯೇ?
ಸಂಬಂಧಿತ ಮಾಹಿತಿ ಹುಡುಕಿ