ಪಾಕಿಸ್ತಾನದಲ್ಲಿ ಶ್ರೀಲಂಕಾ ತಂಡದ ಆಟಗಾರರ ಮೇಲೆ ನಡೆದ ಭಯೋತ್ಪಾದಕರ ದಾಳಿ ನಂತರ ಭಾರತ ಪ್ರವಾಸದ ಬಗ್ಗೆ ತೀವ್ರ ಕಾಳಜಿಗೊಂಡಿರುವ ಲಂಕಾ ತಂಡದ ಆಡಳಿತ ಮಂಡಳಿಯು ಭದ್ರತಾ ಸಮನ್ವಯಾಧಿಕಾರಿಗೆ ಬರೆದ ಪತ್ರದಲ್ಲಿ ಸುರಕ್ಷತೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ.
ಆದರೆ ಈ ಬಗ್ಗೆ ನಾಯಕ ಕುಮಾರ ಸಂಗಕ್ಕಾರ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಭಾರತದಲ್ಲಿ ಲಂಕಾ ತಂಡಕ್ಕೆ ಭಾರೀ ಭದ್ರತೆಯನ್ನು ಒದಗಿಸಲಾಗುತ್ತಿದ್ದರೂ ಈ ಬಗ್ಗೆ ಪ್ರವಾಸಿಗರು ಅತೃಪ್ತಿ ಹೊಂದಿರದ ಬಗ್ಗೆ ಅಚ್ಚರಿಯನ್ನುಂಟು ಮಾಡಿದೆ.
ಆದರೆ ಶ್ರೀಲಂಕಾ ಕ್ರಿಕೆಟ್ ಮಂಡಳಿ (ಎಸ್‌ಎಲ್‌ಸಿ) ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯಲ್ಲಿ ಇನ್ನಷ್ಟು ಭದ್ರತೆ ಬಿಗಿಗೊಳಿಸುವಂತೆ ಕೋರಿಕೊಂಡಿದ್ದಾರೆ.