ಕ್ರಿಕೆಟ್‌ ಸುದ್ದಿ | ಕ್ರಿಕೆಟಿಗರು | ಲೇಖನಗಳು | ಐಪಿಎಲ್ | ಕ್ರಿಕೆಟ್ ಟಿಕರ್ | ಅಂಕಿಅಂಶ | ಟಿ-20ವಿಶ್ವಕಪ್
ಮುಖ್ಯ ಪುಟ » ಕ್ರೀಡಾ ಜಗತ್ತು » ಕ್ರಿಕೆಟ್‌ » ಕ್ರಿಕೆಟ್‌ ಸುದ್ದಿ » ಆಸೀಸ್ ತಂಡ ಪ್ರಕಟ; ಕ್ಲಾರ್ಕ್, ಹಡ್ಡಿನ್ ಆಗಮನ (Australia | West Indies | Michael Clarke | Brad Haddin)
Feedback Print Bookmark and Share
 
ವೆಸ್ಟ್‌ಇಂಡೀಸ್ ವಿರುದ್ಧ ತವರಿನಲ್ಲಿ ನಡೆಯಲಿರುವ ಮೊದಲ ಟೆಸ್ಟ್‌ಗಾಗಿನ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಿದ್ದು, ಗಾಯದಿಂದ ಗುಣಮುಖರಾಗಿರುವ ಉಪನಾಯಕ ಮೈಕಲ್ ಕ್ಲಾರ್ಕ್ ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್‌ಮಾನ್ ಬ್ರಾಡ್ ಹಡ್ಡಿನ್‌ರನ್ನು ತಂಡಕ್ಕೆ ಸೇರಿಕೊಂಡಿದ್ದಾರೆ.

ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯ ಬ್ರಿಸ್ಪೆನ್‌ನಲ್ಲಿ ನವೆಂಬರ್ 26ರಂದು ಆರಂಭವಾಗಲಿದೆ.

ಬೆನ್ನು ನೋವಿಗೆ ಒಳಗಾಗಿದ್ದ ಕ್ಲಾರ್ಕ್ ಇತ್ತೀಚೆಗೆ ಭಾರತ ವಿರುದ್ಧ ನಡೆದ ಏಕದಿನ ಸರಣಿಗೆ ಅಲಭ್ಯರಾಗಿದ್ದರು. ಅದೇ ರೀತಿ ಇಂಗ್ಲೆಂಡ್ ವಿರುದ್ಧದ ಆಶ್ಯಸ್ ಸರಣಿಯ ವೇಳೆ ಕೈ ಬೆರಳಿಗೆ ಗಾಯಮಾಡಿಕೊಂಡಿದ್ದ
ವಿಕೆಟ್ ಕೀಪರ್ ಹಡ್ಡಿನ್ ಕೂಡಾ ಪೂರ್ಣ ಚೇತರಿಕೆಗೊಂಡಿದ್ದಾರೆ.

ಪ್ರಮುಖ ಆಟಗಾರರ ಅಭಾವದಲ್ಲೂ ಭಾರತದಲ್ಲಿ ನಡೆದ ಏಳು ಪಂದ್ಯಗಳ ಏಕದಿನ ಸರಣಿಯನ್ನು ಆಸ್ಟ್ರೇಲಿಯಾ 4-2ರಿಂದ ಗೆದ್ದುಕೊಂಡಿತ್ತು. ಮುಂಬೈಯಲ್ಲಿ ನಡೆಯಲಿದ್ದ ಅಂತಿಮ ಏಕದಿನವು ಮಳೆಯಿಂದಾಗಿ ರದ್ದಾಗಿತ್ತು.

ಬೊಲ್ಲಿಂಗರ್ ಆಗಮನ...
ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿದ 12ರ ಬಳಗದಲ್ಲಿ ಕೇವಲ ಒಂದೇ ಒಂದು ಬದಲಾವಣೆ ಕಂಡುಬಂದಿದೆ. ಭಾರತ ಪ್ರವಾಸದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಡೌಗ್ ಬೊಲ್ಲಿಂಗರ್ ಅವರಿಗೆ ಅನುಭವಿ ವೇಗದ ಬೌಲರ್ ಸ್ಟುವರ್ಟ್ ಕ್ಲಾರ್ಕ್ ಸ್ಥಾನ ಬಿಟ್ಟುಕೊಟ್ಟಿದ್ದಾರೆ. ಉಳಿದಂತೆ ಇಂಗ್ಲೆಂಡ್ ವಿರುದ್ಧ ಆಶ್ಯಸ್ ಸರಣಿಗೆ ಇದ್ದ ಅದೇ ತಂಡವನ್ನು ಉಳಿಸಿಕೊಳ್ಳಲಾಗಿದೆ.

ಆಸ್ಟ್ರೇಲಿಯಾ ತಂಡ ಇಂತಿದೆ:

ರಿಕಿ ಪಾಂಟಿಂಗ್ (ನಾಯಕ), ಮೈಕಲ್ ಕ್ಲಾರ್ಕ್ (ಉಪನಾಯಕ), ಬ್ರಾಡ್ ಹಡ್ಡಿನ್ (ವಿಕೆಟ್ ಕೀಪರ್), ಮೈಕಲ್ ಹಸ್ಸಿ, ಸೈಮನ್ ಕ್ಯಾಚಿಚ್, ಶೇನ್ ವಾಟ್ಸನ್, ಮಿಚ್ಚೆಲ್ ಜಾನ್ಸನ್, ಪೀಟರ್ ಸಿದ್ಲೆ, ನಥನ್ ಹೌರಿಟ್ಜ್, ಮಾರ್ಕಸ್ ನೋರ್ತ್, ಬೆನ್ ಹಿಲ್ಫನಾಸ್ ಮತ್ತು ಡೌಗ್ ಬೊಲ್ಲಿಂಗರ್.

ಸಂಬಂಧಿತ ಮಾಹಿತಿ ಹುಡುಕಿ