ಕ್ರಿಕೆಟ್ ದಂತಕಥೆ ಆಸ್ಟ್ರೇಲಿಯಾದ ಡಾನ್ ಬ್ರಾಡ್‌ಮಾನ್ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯ ಹಾಲ್ ಆಫ್ ಫೇಮ್ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ.
ಇದರಂತೆ ಮೆಲ್ಪರ್ನ್ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಬ್ರಾಡ್‌ಮಾನ್ ಮೊಮ್ಮಗ ಟಾಮ್, ಐಸಿಸಿ ನಿರ್ದೇಶಕ ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾ ಮುಖ್ಯಸ್ಥ ಜಾಕ್ ಕ್ಲಾರ್ಕ್ ಅವರಿಂದ ಕ್ಯಾಪ್ ಸ್ವೀಕರಿಸಿದರು.
ಸಮಾರಂಭದಲ್ಲಿ ಭಾರತದ ಮಾಜಿ ಕೋಚ್ ಗ್ರೆಗ್ ಚಾಪೆಲ್ ಹಾಗೂ ಐಸಿಸಿಯ ಇತರ ಮಾಜಿ ಹಾಲ್ ಆಫ್ ಫೇಮ್ ಕ್ರಿಕೆಟಿಗರು ಹಾಜರಿದ್ದರು.
ಬ್ರಾಡ್‌ಮಾನ್ ಪರ ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸಿದ ಟಾಮ್, ತಮ್ಮ ಹಾಗೂ ಕುಟುಂಬ ಪರ ಗೌರವ ವ್ಯಕ್ತಪಡಿಸಿದರು. ಅವರ ಸಾಧನೆಯೇ ಪ್ರಶಸ್ತಿಗೆ ಅರ್ಹರೆಂಬುದನ್ನು ಸಾಬೀತುಪಡಿಸುತ್ತದೆ ಎಂದು ಅವರು ಹೇಳಿದರು.