ಕ್ರಿಕೆಟ್‌ ಸುದ್ದಿ | ಕ್ರಿಕೆಟಿಗರು | ಲೇಖನಗಳು | ಐಪಿಎಲ್ | ಕ್ರಿಕೆಟ್ ಟಿಕರ್ | ಅಂಕಿಅಂಶ | ಟಿ-20ವಿಶ್ವಕಪ್
ಮುಖ್ಯ ಪುಟ » ಕ್ರೀಡಾ ಜಗತ್ತು » ಕ್ರಿಕೆಟ್‌ » ಕ್ರಿಕೆಟ್‌ ಸುದ್ದಿ » ಆಸೀಸ್ ಟ್ವೆಂಟಿ-20ಯಲ್ಲಿ ಆಡಲಿರುವ ವಾರ್ನ್, ಗಿಲ್‌ಕ್ರಿಸ್ಟ್, ಹೇಡನ್..! (Twenty20 | Shane Warne | Michael Clarke | Cricket)
Feedback Print Bookmark and Share
 
ಭಾನುವಾರ ಮೆಲ್ಬೋರ್ನ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಟ್ವೆಂಟಿ-20 ಕ್ರಿಕೆಟ್‌ ಪಂದ್ಯದಲ್ಲಿ ಮೈಕಲ್ ಕ್ಲಾರ್ಕ್ ನೇತೃತ್ವದ ಆಸ್ಟ್ರೇಲಿಯಾ ತಂಡ ಮಾಜಿ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ನಾಯಕತ್ವದ ಆಲ್ ಸ್ಟಾರ್ ಇಲೆವೆನ್ ತಂಡವನ್ನು ಎದುರಿಸಲಿದೆ.

ಆಸ್ಟ್ರೇಲಿಯನ್ ಕ್ರಿಕೆಟರ್ಸ್ ಅಸೋಸಿಯೇಷನ್ ಆಲ್ ಸ್ಟಾರ್ ಇಲೆವೆನ್ ತಂಡದ ನಾಯಕರಾಗಿ ಶೇನ್ ವಾರ್ನ್ ಆಯ್ಕೆಯಾಗಿದ್ದಾರೆ. ಈ ತಂಡದಲ್ಲಿ ಮಾಜಿ ಆಟಗಾರದ ಆಡಂ ಗಿಲ್‌ಕ್ರಿಸ್ಟ್, ಗ್ಲೆನ್ ಮೆಕ್‌ಗ್ರಾಥ್ ಮತ್ತು ಮಾಥ್ಯೂ ಹೇಡನ್‌ರಂತಹ ವಿಶ್ವ ವಿಖ್ಯಾತ ಆಟಗಾರರು ಸ್ಥಾನ ಪಡೆದಿದ್ದಾರೆ.

ಅದೇ ವೇಳೆ ಆಸ್ಟ್ರೇಲಿಯಾದ ಟ್ವೆಂಟಿ-20 ನಾಯಕನಾಗಿ ಆಯ್ಕೆಗೊಂಡಿರುವ ಮೈಕಲ್ ಕ್ಲಾರ್ಕ್ ಕೆಎಫ್‌ಸಿ ಪ್ರಾಯೋಜಿತ ಪ್ರಸಕ್ತ ಆಸೀಸ್ ತಂಡವನ್ನು ಮುನ್ನಡೆಸಲಿದ್ದಾರೆ.

ಆಸ್ಟ್ರೇಲಿಯಾ ತಂಡ: ಮೈಕಲ್ ಕ್ಲಾರ್ಕ್ (ನಾಯಕ), ಕೆಮರೂನ್ ವೈಟ್ (ಉಪನಾಯಕ), ಜಾರ್ಜ್ ಬೈಲಿ, ಬ್ರಾಡ್ ಹಡ್ಡಿನ್, ಡೇವಿಡ್ ಹಸ್ಸಿ, ಆಂಡ್ರ್ಯೂ ಮೆಕ್‌ಡೋನಾಲ್ಡ್, ಕ್ಲಿಂಟ್ ಮೆಂಕ್‌ಗೇ, ಪೀಟರ್ ಸಿದ್ಲೇ, ಸ್ಟೀವನ್ ಸ್ಮಿತ್, ಶಾನ್ ಟೇಟ್, ಆಡಂ ವೋಜ್ಸ್ ಮತ್ತು ಡೇವಿಡ್ ವಾರ್ನರ್.

ಎಸಿಎ ಆಲ್ ಸ್ಟಾರ್ ತಂಡ: ಶೇನ್ ವಾರ್ನ್ (ನಾಯಕ), ಟ್ರಾವಿಸ್ ಬ್ರಿಟ್, ಲೀ ಕರ್ಸೆಲ್ದೀನ್, ಆಡಂ ಗಿಲ್‌ಕ್ರಿಸ್ಟ್, ಡಾನಿಯಲ್ ಹ್ಯಾರಿಸ್, ಮಾಥ್ಯೂ ಹೇಡನ್, ಜಾಸನ್ ಕ್ರೇಜಾ, ರೆಟ್ ಲಾಕ್ಯಾರ್, ಗ್ರಾಹಂ ಮಾನವೂ, ಗ್ಲೆನ್ ಮೆಕ್‌ಗ್ರಾಥ್, ನಥನ್ ಬ್ರಾಕನ್, ನಥನ್ ರಿಮ್ಮಿಂಗ್‌ಗ್ಟಂನ್.


ಸಂಬಂಧಿತ ಮಾಹಿತಿ ಹುಡುಕಿ