ಕ್ರಿಕೆಟ್‌ ಸುದ್ದಿ | ಕ್ರಿಕೆಟಿಗರು | ಲೇಖನಗಳು | ಐಪಿಎಲ್ | ಕ್ರಿಕೆಟ್ ಟಿಕರ್ | ಅಂಕಿಅಂಶ | ಟಿ-20ವಿಶ್ವಕಪ್
ಮುಖ್ಯ ಪುಟ » ಕ್ರೀಡಾ ಜಗತ್ತು » ಕ್ರಿಕೆಟ್‌ » ಕ್ರಿಕೆಟ್‌ ಸುದ್ದಿ » ದ್ರಾವಿಡ್ ಶತಕ; ಭಾರತ 642ಕ್ಕೆ ಆಲೌಟ್; ಲಂಕಾ 66/1 (India | Srilanka | Test Series | Cricket)
Bookmark and Share Feedback Print
 
ರಾಹುಲ್ ದ್ರಾವಿಡ್
PTI
PTI
ಕಲಾತ್ಮಕ ಆಟಗಾರ ರಾಹುಲ್ ದ್ರಾವಿಡ್ ಬಾರಿಸಿದ ಅವೋಘ ಶತಕ (144) ಹಾಗೂ ವಿ.ವಿ.ಎಸ್. ಲಕ್ಷ್ಮಣ್ (63) ಮತ್ತು ಯುವರಾಜ್ ಸಿಂಗ್ (67) ಬಾರಿಸಿದ ಅರ್ಧಶತಕಗಳ ನೆರವಿನಿಂದ ಆತಿಥೇಯ ಭಾರತ ತಂಡವು ಶ್ರೀಲಂಕಾ ವಿರುದ್ಧ ಇಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನ ಮೊದಲ ಇನ್ನಿಂಗ್ಸ್‌ನಲ್ಲಿ 642ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಪ್ರತ್ಯುತ್ತರವಾಗಿ ಶ್ರೀಲಂಕಾ ದಿನದಂತ್ಯಕ್ಕೆ 24 ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 66ರನ್ ಗಳಿಸಿದ್ದು, 576ರನ್‌ಗಳ ಭಾರೀ ಹಿನ್ನಡೆಯಲ್ಲಿದೆ.

ಈ ಮೊದಲು ಭಾರತಕ್ಕೆ ಮೊದಲ ದಿನದಲ್ಲಿ ವೀರೇಂದ್ರ ಸೆಹ್ವಾಗ್ (131) ಮತ್ತು ಗೌತಮ್ ಗಂಭೀರ್ (167) ಭದ್ರ ಅಡಿಪಾಯ ಹಾಕಿಕೊಟ್ಟಿದ್ದರು.

417/2 ಎಂಬ ಸ್ಥಿತಿಯಲ್ಲಿಂದ ದಿನದಾಟ ಆರಂಭಿಸಿದ ಆತಿಥೇಯರಿಗೆ ದ್ರಾವಿಡ್-ಸಚಿನ್ ಉತ್ತಮ ಆರಂಭವನ್ನೇ ಒದಗಿಸಿದರು. ಇವರಿಬ್ಬರು ಮೂರನೇ ವಿಕೆಟ್ 94ರನ್ ಒಟ್ಟು ಸೇರಿಸಿದರು.

ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ನೀಡಿದ 'ವಾಲ್' 226 ಎಸೆತಗಳಲ್ಲಿ 144ರನ್ ಬಾರಿಸಿದರು. ಅವರ ಈ ಇನ್ನಿಂಗ್ಸ್‌ನಲ್ಲಿ 15 ಬೌಂಡರಿ ಹಾಗೂ ಒಂದು ಭರ್ಜರಿ ಸಿಕ್ಸರ್ ಸೇರಿದ್ದವು. ದ್ರಾವಿಡ್ ರನೌಟ್‌ಗೆ ಬಲಿಯಾಗುವ ವೇಳೆ ನಾಲ್ಕನೇ ವಿಕೆಟ್‌ಗೆ ಲಕ್ಷ್ಮಣ್ ಜೊತೆ 47ರನ್ ಜತೆಯಾಟ ನೀಡಿದ್ದರು.

ಅದೇ ರೀತಿ ಸಚಿನ್ ತೆಂಡುಲ್ಕರ್ 91 ಎಸೆತದಲ್ಲಿ ಒಂದು ಸಿಕ್ಸರ್ ನೆರವಿನಿಂದ 40ರನ್ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ ಸಚಿನ್ ಒಂದೇ ಒಂದು ಬೌಂಡರಿ ಬಾರಿಸಲಿಲ್ಲ.

ನಂತರ ಬಂದ ಲಕ್ಷ್ಮಣ್ ಕೂಡಾ 121 ಎಸೆತಗಳಲ್ಲಿ ಐದು ಬೌಂಡರಿ ನೆರವಿನಿಂದ 63ರನ್ ಗಳಿಸಿದರು. ಲಕ್ಷ್ಮಣ್‌ಗೆ ಉತ್ತಮ ಸಾಥ್ ನೀಡಿದ ಯುವರಾಜ್ ಸಿಂಗ್ 67ರನ್ ಗಳಿಸಿದರು. ಅವರ ಈ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳೂ ಸೇರಿದ್ದವು.

ಭೋಜನ ವಿರಾಮಕ್ಕೆ 535ಕ್ಕೆ ನಾಲ್ಕು ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿದ್ದ ಭಾರತ ಟೀ ವಿರಾಮ ಕಳೆದ ಕೆಲವೇ 154 ಓವರ್‌ಗಳಲ್ಲಿ 642ರನ್‌ಗಳಿಗೆ ಸರ್ವಪತನಗೊಂಡಿತ್ತು. ಆ ಮೂಲಕ ಆತಿಥೇಯರು ಕೊನೆಯ ಆರು ವಿಕೆಟ್‌ಗಳನ್ನು 29ರನ್‌ಗಳಿಗೆ ಕಳೆದುಕೊಂಡಿತ್ತು.

ಅಂತಿಮವಾಗಿಯೂ ಲಂಕನ್ ಸ್ಪಿನ್ನರ್‌ಗಳು ಇಲ್ಲಿನ ಗ್ರೀನ್ ಪಾರ್ಕ್ ಮೈದಾನದಲ್ಲಿ ಮೋಡಿ ಪ್ರದರ್ಶಿಸಿದರು. ಭೋಜನ ವಿರಾಮದ ನಂತರ ಭಾರತಕ್ಕೆ ವಿ.ವಿ.ಎಸ್ ಲಕ್ಷ್ಮಣ್ (66), ಯುವರಾಜ್ ಸಿಂಗ್ (67) ನಾಯಕ ಮಹೇಂದ್ರ ಸಿಂಗ್ ಧೋನಿ (4), ಹರಭಜನ್ ಸಿಂಗ್ (5), ಜಹೀರ್ ಖಾನ್ (0), ಶ್ರೀಶಾಂತ್ (0) ವಿಕೆಟ್ ನಷ್ಟವಾಯಿತು.

33 ಓವರ್‌ಗಳನ್ನು ಎಸೆದ ರಂಗನ ಹೇರಾತ್ ಐದು ವಿಕೆಟ್ ಪಡೆಯುವ ಮೂಲಕ ಮಿಂಚಿದರು. ಮುತ್ತಯ್ಯ ಮುರಳೀಧರ್ ಹಾಗೂ ಅಂಜತಾ ಮೆಂಡೀಸ್ ತಲಾ ಎರಡು ವಿಕೆಟ್ ಪಡೆದರು. ಇದು ಪಂದ್ಯದ ಅವಧಿ ಸಾಗಿದಂತೆ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡಲಿದೆಯೆಂಬ ಕ್ಯೂರೆಟರ್‌ಗಳ ಅಭಿಮತವನ್ನು ಸಾಬೀತುಪಡಿಸಿದೆ.

ಪ್ರವಾಸಿಗರಿಗೆ ಮೊದಲ ಆಘಾತ...
ಎಡಗೈ ವೇಗಿ ಜಹೀರ್ ಖಾನ್ ಎಸೆದ ಪ್ರಥಮ ಎಸೆತದಲ್ಲೇ ತಿಲಕರತ್ನೆ ದಿಲ್‌ಶಾನ್ ಔಟ್!. ಈ ಮೂಲಕ ಲಂಕಾ ಓಪನರ್ ಪ್ರಥಮ ಎಸೆತದಲ್ಲೇ ಖಾತೆ ತೆರೆಯದೇ ಪೆವಿಲಿಯನ್‌ಗೆ ಮರಳಿದರು.

ಆದರೆ ನಂತರ ಚೇತರಿಕೆಯ ಆಟವಾಡಿದ ಲಂಕಾ ನಾಯಕ ಕುಮಾರ ಸಂಗಕ್ಕರ (30*) ಹಾಗೂ ಪರನವಿತನಾ (30*) ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. 80 ಎಸೆತ ಎದುರಿಸಿರುವ ಸಂಗಕ್ಕರ ಮೂರು ಬೌಂಡರಿ ಬಾರಿಸಿದ್ದರು.

ಬಾರ್ಡರ್ ದಾಖಲೆ ಮುರಿದ ದ್ರಾವಿಡ್...
ದ್ರಾವಿಡ್ ಟೆಸ್ಟ್ ಕ್ರಿಕೆಟ್‌ನಲ್ಲಿ 11,175ಗಳಿಸುವ ಮೂಲಕ ಆಸ್ಟ್ರೇಲಿಯಾ ಮಾಜಿ ಕಪ್ತಾನ ಅಲನ್ ಬಾರ್ಡರ್ ದಾಖಲೆಯನ್ನು ಮುರಿದರು. ಬಾರ್ಡರ್ ಟೆಸ್ಟ್‌ನಲ್ಲಿ 11174ರನ್ ಗಳಿಸಿದ್ದಾರೆ. ಇದು ದ್ರಾವಿಡ್ ಗಳಿಸಿದ 28ನೇ ಟೆಸ್ಟ್ ಶತವಾಗಿದೆ.

ದ್ರಾವಿಡ್ ದಾಖಲೆ ಪುಟಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ...

ಭಾರತ-ಶ್ರೀಲಂಕಾ ಸ್ಕೋರ್ ಬೋರ್ಡ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ...

ಸೆಹ್ವಾಗ್ 'ಗಂಭೀರ' ಶತಕ, ದ್ರಾವಿಡ್ ಅರ್ಧಶತಕ; ಭಾರತ 417/2





ಸಂಬಂಧಿತ ಮಾಹಿತಿ ಹುಡುಕಿ