ಎಲ್ಲ ಕಡೆನೂ ಋಣಾತ್ಮಕ ಅಂಶಗಳಿವೆ: ಕಾಂಬ್ಳಿ ಆರೋಪಕ್ಕೆ ಕಪಿಲ್

ಮುಂಬೈ, ಶನಿವಾರ, 19 ನವೆಂಬರ್ 2011 (11:33 IST)

1996ರ ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ನಡಿದಿದೆಯೆಂಬ ವಿನೋದ್ ಕಾಂಬ್ಳಿ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿರುವ ಚೊಚ್ಚಲ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್, ಎಲ್ಲ ಕಡೆನೂ ಋಣಾತ್ಮಕ ಅಂಶಗಳಿವೆ ಎಂದಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಈ ಬಗ್ಗೆ ಹಿಂದೆ ಎಂದೂ ಬಾಯಿ ಬಿಡದ ಕಾಂಬ್ಳಿ ಸುದೀರ್ಘ 15 ವರ್ಷಗಳ ನಂತರ ಭಾರತ ಮತ್ತು ಶ್ರೀಲಂಕಾ ನಡುವಣ 1996ರ ವಿಶ್ವಕಪ್ ಸೆಮಿಫೈನಲ್ ಫಿಕ್ಸಿಂಗ್ ನಡೆದಿದಿತ್ತು ಎಂದು ನವೆಂಬರ್ 17ರಂದು ಶಂಕೆ ವ್ಯಕ್ತಪಡಿಸಿದ್ದರು.

ಎಲ್ಲ ಕಡೆಯೂ ಋಣಾತ್ಮಕ ವ್ಯಕ್ತಿಗಳಿರುತ್ತಾರೆ. ಆದರೆ ನಾವು ಸರಿಯಾದ ಜನರೊಂದಿಗೆ ಇರಬೇಕಾಗಿದೆ. ಕಾಂಬ್ಳಿ ಆರೋಪಕ್ಕೆ ಪ್ರತಿಕ್ರಿಯಿಸಲು ಆಗ್ರಹಿಸುತ್ತಿಲ್ಲ ಎಂದು ಮಹೇಂದ್ರ ಸಿಂಗ್ ಧೋನಿ ಅವರ ವಿಶ್ವಕಪ್ ವಿಜೇತ ಬ್ಯಾಟ್ 72 ಲಕ್ಷಕ್ಕೆ ಹರಾಜುಗೊಂಡ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾ ಕಪಿಲ್ ದೇವ್ ತಿಳಿಸಿದರು.

ದೇಶದ ಪರ 17 ಟೆಸ್ಟ್ ಹಾಗೂ 104 ಏಕದಿನ ಪಂದ್ಯಗಳನ್ನು ಆಡಿರುವ ಕಾಂಬ್ಳಿ ಅನುಕ್ರಮವಾಗಿ 1084 ಹಾಗೂ 2477 ರನ್ನುಗಳನ್ನು ಗಳಿಸಿದ್ದಾರೆ. ಆದರೆ 1996ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ನಾಯಕ ಮೊಹಮ್ಮದ್ ಅಜರುದ್ದೀನ್ ಫೀಲ್ಡಿಂಗ್ ತೆಗೆದುಕೊಂಡ ನಿರ್ಧಾರವು ಆಘಾತ ತಂದಿತ್ತು. ಇದರಿಂದಾಗಿ ನನ್ನ ಕೆರಿಯರೇ ಹಾಳಾಗಿತ್ತು ಎಂದು ಆಪಾದಿಸಿತ್ತು.

1996ರ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಫಿಕ್ಸಿಂಗ್ ನಡೆದಿದೆ ಎಂದು ನೇರವಾಗಿ ಬೊಟ್ಟು ಮಾಡಿದ್ದ ಕಾಂಬ್ಳಿ ಖಾಸಗಿ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತುಂಬಾನೇ ಭಾವುಕರಾಗಿದ್ದರು. ಯಾಕೆಂದರೆ ವಿಶ್ವಕಪ್ ಗೆಲ್ಲುವುದು ನನ್ನ ಕೂಡಾ ಕನಸಾಗಿತ್ತು ಎಂದಿದ್ದರು. ಆದರೆ ಕಾಂಬ್ಳಿ ಆಪಾದನೆಗಳೆನ್ನೆಲ್ಲ ಅಜರುದ್ದೀನ್ ಸಹಿತ ಅನೇಕ ಸಹ ಆಟಗಾರರು ಈಗಾಗಲೇ ನಿರಾಕರಿಸಿದ್ದಾರೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

ಭಾರತೀಯ ಹಾಕಿ ತಂಡ ಯೂರೋಪ್‌‌ಗೆ ತೆರಳಲು ಸಜ್ಜಾಗಿದೆ

ನವದೆಹಲಿ :ಮುಂದಿ ದಿನಗಳಲ್ಲಿ ನಡೆಯಲಿರುವ ಹಾಕಿ ವಿಶ್ವ ಕಪ್‌‌ಗಾಗಿ ಸಿದ್ದತೆ ನಡೆಸುತ್ತಿರುವ ಇಂಡಿಯನ್‌ ...

ಧೋನಿ ಹೇಳಿಕೆ ಪರಿಶೀಲಿಸಲು ಅವಕಾಶ ಕೋರಿ ಸುಪ್ರೀಂಕೋರ್ಟ್‌ಗೆ ಬಿಸಿಸಿಐ ಅರ್ಜಿ

ನವದೆಹಲಿ: ಐಪಿಎಲ್ ಬೆಟ್ಟಿಂಗ್ ಮತ್ತು ಫಿಕ್ಸಿಂಗ್ ಹಗರಣದ ತನಿಖೆ ನಡೆಸುತ್ತಿರುವ ಮುದ್ಗಲ್ ಸಮಿತಿಯ ಮುಂದೆ ...

ಟೆನಿಸ್‌‌‌ ಶ್ರೇಯಾಂಕ: ಭಾರತೀಯರ ಶ್ರೇಯಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ

ನವದೆಹಲಿ : ಭಾರತದ ಡೆವಿಸ್‌‌‌‌ಕಪ್‌ನಲ್ಲಿ ಸೋಮದೇವ್ ದೇವವರ್ಮನ್ ಕೊರಿಯಾ ವಿರುದ್ದ ಗೆಲುವನ್ನು ಸಾಧಿಸುವುದರ ...

ಯುವಿಯನ್ನು ಸಮರ್ಥಿಸಿಕೊಂಡು ಸಚಿನ್ ಬ್ಯಾಟಿಂಗ್

ನವದೆಹಲಿ: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಅವರನ್ನು ಸಮರ್ಥಿಸಿಕೊಂಡು ಸಚಿನ್ ತೆಂಡೂಲ್ಕರ್ ...

Widgets Magazine