ಕ್ರಿಕೆಟ್‌ ಸುದ್ದಿ | ಕ್ರಿಕೆಟಿಗರು | ಲೇಖನಗಳು | ವಿಶ್ವಕಪ್ | ಐಪಿಎಲ್ | ಕ್ರಿಕೆಟ್ ಟಿಕರ್ | ಅಂಕಿಅಂಶ | ಟಿ-20ವಿಶ್ವಕಪ್
ಮುಖ್ಯ ಪುಟ » ಕ್ರೀಡಾ ಜಗತ್ತು » ಕ್ರಿಕೆಟ್‌ » ಕ್ರಿಕೆಟ್‌ ಸುದ್ದಿ » ಏಷ್ಯಾ ಕಪ್‌ಗೆ ಸಚಿನ್ ಸೇರ್ಪಡೆ ಕ್ರಮ ಸಮರ್ಥಿಸಿಕೊಂಡ ಗಂಗೂಲಿ (Saurav Ganguly | Asia cup | Sachin Tendulkar | Sachin Retirement)
WD
ಕಳಪೆ ಫಾರ್ಮ ಹೊರತಾಗಿಯೂ ಮುಂಬರುವ ಏಷ್ಯಾ ಕಪ್‌ಗಾಗಿ ರನ್ನುಗಳ ಸರದಾರ ಸಚಿನ್ ತೆಂಡೂಲ್ಕರ್ ಅವರನ್ನು ಟೀಮ್ ಇಂಡಿಯಾಕ್ಕೆ ಆಯ್ಕೆ ಮಾಡಿರುವ ಕ್ರಮವನ್ನು ಮಾಜಿ ನಾಯಕ ಹಾಗೂ ದೀರ್ಘಕಾಲದ ಸಹ ಆಟಗಾರ ಸೌರವ್ ಗಂಗೂಲಿ ಸಮರ್ಥಿಸಿಕೊಂಡಿದ್ದಾರೆ.

ಸಚಿನ್ ಸೇರ್ಪಡೆಯಿಂದ ಭಾರತಕ್ಕೆ ನೆರವಾಗಲಿದೆಯೆಂಬ ಅಭಿಪ್ರಾಯವನ್ನು ದಾದಾ ವ್ಯಕ್ತಪಡಿಸಿದ್ದಾರೆ. ಏಷ್ಯಾ ಕಪ್ ಟೂರ್ನಮೆಂಟ್‌ಗೆ ಮಾರ್ಚ್ 12ರಂದು ಢಾಕಾದಲ್ಲಿ ಚಾಲನೆ ದೊರಕಲಿದೆ.

ಏಷ್ಯಾ
ಕಪ್‌ಗಾಗಿ ಸಚಿನ್ ಅವರನ್ನು ಸೇರ್ಪಡೆಗೊಳಿಸಿರುವುದು ಸರಿಯಾದ ನಿರ್ಧಾರವೇ ಆಗಿದೆ. ಅವರ ಅನುಭವ ದೊಡ್ಡ ಆಸ್ತಿಯಾಗಿದ್ದು, ಯುವ ಆಟಗಾರರು ಸಾಕಷ್ಟು ಕಲಿತುಕೊಳ್ಳಬಹುದಾಗಿದೆ ಎಂದು ದಾದಾ ವಿವರಿಸಿದ್ದಾರೆ.

ಸಚಿನ್ ಏಕದಿನಕ್ಕೆ ನಿವೃತ್ತಿ ಘೋಷಿಸುವ ಮೂಲಕ ಐದು ದಿನಗಳ ಆಟದತ್ತ ಮಾತ್ರ ಗಮನ ಹರಿಸಬೇಕು ಎಂಬುದಕ್ಕೆ ಗಂಗೂಲಿ, ಇದನ್ನು ಸ್ವತ: ಸಚಿನ್ ಅವರೇ ನಿರ್ಧರಿಸುತ್ತಾರೆ ಎಂದರು.
ಇವನ್ನೂ ಓದಿ
Webdunia Webdunia