ಕ್ರಿಕೆಟ್‌ ಸುದ್ದಿ | ಕ್ರಿಕೆಟಿಗರು | ಲೇಖನಗಳು | ವಿಶ್ವಕಪ್ | ಐಪಿಎಲ್ | ಕ್ರಿಕೆಟ್ ಟಿಕರ್ | ಅಂಕಿಅಂಶ | ಟಿ-20ವಿಶ್ವಕಪ್
ಮುಖ್ಯ ಪುಟ » ಕ್ರೀಡಾ ಜಗತ್ತು » ಕ್ರಿಕೆಟ್‌ » ಕ್ರಿಕೆಟ್‌ ಸುದ್ದಿ » ಸಚಿನ್ ಮಹಾಶತಕವನ್ನು ಮಿಸ್ ಮಾಡಿಕೊಂಡೆ: ವೀರೇಂದ್ರ ಸೆಹ್ವಾಗ್ (Virender Sehwag | Sachin Tendulkar | Asia cup | 100Th International ton)
WD
ಕಳೆದ ವಾರವಷ್ಟೇ ಬಾಂಗ್ಲಾದೇಶ ವಿರುದ್ಧದ ಏಷ್ಯಾ ಕಪ್ ಪಂದ್ಯದಲ್ಲಿ ಬಹುನಿರೀಕ್ಷಿತ 100ನೇ ಅಂತರಾಷ್ಟ್ರೀಯ ಶತಕದ ಸಾಧನೆ ಮಾಡಿದ್ದ ಸಚಿನ್ ತೆಂಡೂಲ್ಕರ್ ಅವರ ಮಹಾ ಸಾಧನೆ ವೇಳೆ ಡ್ರೆಸ್ಸಿಂಗ್ ಕೊಠಡಿಯಲ್ಲಿರುವ ಅವಕಾಶವನ್ನು ಮಿಸ್ ಮಾಡಿಕೊಂಡೆ ಎಂದು ದೀರ್ಘ ಕಾಲದ ಸಹ ಆಟಗಾರನಾಗಿರುವ ವೀರೇಂದ್ರ ಸೆಹ್ವಾಗ್ ತಿಳಿಸಿದ್ದಾರೆ.

ಅದೇ ಹೊತ್ತಿಗೆ ತನ್ನ ವಿಶ್ರಾಂತಿ ಕಾಲಘಟ್ಟ ಮುಕ್ತಾಯವಾಗಿದೆ ಎಂದು ಸಂಪೂರ್ಣ ಫಿಟ್‌ನೆಸನ್ನು ಬಹಿರಂಗಪಡಿಸಿರುವ ಸೆಹ್ವಾಗ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಲು ಸಿದ್ಧವಾಗಿದ್ದೇನೆ ಎಂದಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಸಾಗಿದ ಸಿಬಿ ಸಿರೀಸ್‌ನಲ್ಲಿ ಕಳಪೆ ನಿರ್ವಹಣೆಯ ಹಿನ್ನಲೆಯಲ್ಲಿ ಏಷ್ಯಾ ಕಪ್‌ಗಾಗಿನ ಭಾರತ ತಂಡದಿಂದ ಸೆಹ್ವಾಗ್ ಅವರನ್ನು ಕಡೆಗಣಿಸಲಾಗಿತ್ತು. ಆದರೆ ಇದಕ್ಕೆ ಕೃಷ್ಣಮಾಚಾರಿ ಶ್ರೀಕಾಂತ್ ನೇತೃತ್ವದ ಆಯ್ಕೆ ಸಮಿತಿಯು ಸ್ಪಷ್ಟ ಕಾರಣ ನೀಡಲು ವಿಫಲವಾಗಿದ್ದರೂ ವೀರುಗೆ ವಿಶ್ರಾಂತಿ ಸೂಚಿಸಲಾಗಿತ್ತು ಎಂದಷ್ಟೇ ಉತ್ತರಿಸಿದ್ದರು.

ಇದೇ ಸಂದರ್ಭದಲ್ಲಿ ಯಾವನೇ ಕ್ರಿಕೆಟಿನಗ ಮೇಲೆ ನಿವೃತ್ತಿಯಾಗುವಂತೆ ಯಾರೂ ಸಹ ಒತ್ತಡ ಹೇರುವಂತಿಲ್ಲ ಎಂದು 33ರ ಹರೆಯದ ಹಿರಿಯ ಆಟಗಾರ ಸೆಹ್ವಾಗ್ ತಿಳಿಸಿದ್ದಾರೆ.

ನನ್ನ ಆಟವನ್ನು ಆನಂದಿಸುವ ವರೆಗೂ, ದೇಶಕ್ಕಾಗಿ ಜಯ ಒದಗಿಸಿಕೊಡುವ ವರೆಗೂ ನಾನು ಕ್ರಿಕೆಟ್‌ನಲ್ಲಿ ಮುಂದುವರಿಯಲಿದ್ದೇನೆ. ಆದರೆ ನಿವೃತ್ತಿಯಾಗುವಂತೆ ಯಾರೂ ಸಹ ಒತ್ತಡ ಹೇರುವಂತಿಲ್ಲ ಎಂದು ವೀರು ವಿವರಿಸಿದರು.
ಇವನ್ನೂ ಓದಿ
Feedback Print