ಮುಖ್ಯ ಪುಟ > ಕ್ರೀಡಾ ಜಗತ್ತು > ಕ್ರಿಕೆಟ್‌ > ಐಪಿಎಲ್ ಕಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮತ್ತದೇ ಸೋಲಿನ ಮುಖ ನೋಡಿದ ಚಾಲೆಂಜರ್ಸ್
ಸತತ ಸೋಲುಗಳನ್ನು ಅನುಭವಿಸುತ್ತಿದ್ದ ಎರಡು ತಂಡಗಳು ಎದುರಾದ ಸಂದರ್ಭದಲ್ಲಿ ಏನಾಗಬೇಕು? ಲೀಗ್ ಟೂರ್ನಿಯಲ್ಲಿ ಶ್ರೇಷ್ಟ ತಂಡಗಳು ಎಂದು ಗುರುತಿಸಿಕೊಂಡಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಬೆಂಗಳೂರು ರಾಯಲ್ಸ್ ಚಾಲೆಂಜರ್ಸ್ ನಡುವಿನ ಪೈಪೋಟಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಐದು ರನ್‌ಗಳ ರೋಚಕ ವಿಜಯವನ್ನು ದಾಖಲಿಸಿತು. ಬೆಂಗಳೂರಿನಲ್ಲಿ ಅತ್ಯಂತ ಕಡಿಮೆ ಮೊತ್ತವನ್ನು ಕಲೆಹಾಕಿದ ಚಾಲೆಂಜರ್ಸ್‌ಗಳನ್ನು ಸೋಲಿಸಿದ್ದ ತಂಡವು, ತನ್ನ ತಾಯ್ನೆಲದಲ್ಲಿ ಮಳೆಯ ನಡುವೆಯೂ ಊಹೆಗೂ ನಿಲುಕದ ಫೀಲ್ಡಿಂಗ್ ಮತ್ತು ಬಿಗಿ ಬೌಲಿಂಗ್ ಪ್ರದರ್ಶಿಸಿತು. ಸ್ವತಃ ನಾಯಕ ಸೌರವ್ ಗಂಗೂಲಿ ಬೌಲಿಂಗ್ ವಿಭಾಗದಲ್ಲಿ ಮಿಂಚಿದರು,

ಸತತವಾಗಿ ನಾಲ್ಕು ಪಂದ್ಯಗಳನ್ನು ಸೋತ ನೈಟ್ ರೈಡರ್ಸ್ ತಂಡವು ಬೆಂಗಳೂರು ರಾಯಲ್ಸ್ ವಿರುದ್ಧ ತನ್ನ ಎರಡನೆ ಗೆಲುವನ್ನು ಈಡನ್ ಗಾರ್ಡನ್ ಅಂಗಳದಲ್ಲಿ ಬರೆಯಿತು. 20 ಎಸೆತಗಳಲ್ಲಿ 20 ರನ್ ಮಾಡಬೇಕಾದ ಚಾಲೆಂಜರ್ಸ್ ತಂಡದ ಅನಿವಾರ್ಯತೆಯನ್ನು ಸೌರವ್ ಗಂಗೂಲಿ ತನ್ನ ಮದ್ಯಮ ಬೌಲಿಂಗ್‌ನಲ್ಲಿ ಸಮರ್ಥವಾಗಿ ಬಳಸಿಕೊಂಡರು. ಮೂರು ಓವರುಗಳ ಬೌಲಿಂಗ್‌ನಲ್ಲಿ ಕೇವಲ ಏಳು ರನ್ ನೀಡಿದ ಸೌರವ್, ರಾಹುಲ್ ದ್ರಾವಿಡ್ ಬಳಗವನ್ನು ಇನ್ನಿಲ್ಲದ ಒತ್ತಡಕ್ಕೆ ಸಿಲುಕಿಸಿದರು. ಚಾಲೆಂಜರ್ಸ್ ತಂಡದ ಮಾರ್ಕ್ ಬೌಷರ್ ಅವರು ಗುರಿಯನ್ನು ಬೆನ್ನತ್ತುವ ಸತತ ಪ್ರಯತ್ನ ಮಾಡಿದರಾದರೂ ಇನಿಂಗ್ಸ ಅಂತ್ಯದವರೆಗೂ ಎಂಟು ರನ್‌ಗಳ ಹಿನ್ನಡೆ ಉಳಿದುಕೊಂಡಿಬಿಟ್ಟಿತು. ಮತ್ತು ಇದೇ ಚಾಲೆಂಜರ್ಸ್ ತಂಡದ ಮತ್ತೊಂದು ಸೋಲಿಗೆ ಕಾರಣವಾಯಿತು.

ಎಂಟು ಪಂದ್ಯಗಳನ್ನು ಆಡಿ ಆರು ಪಂದ್ಯಗಳಲ್ಲಿ ಸೋಲು ಅನುಭವಿಸಿರುವ ರಾಹುಲ ನಾಯಕತ್ವದ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡವು ಆತಿಥೇಯ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಕೇವಲ 129 ರನ್‌ಗಳಿಗೆ ನಿಯಂತ್ರಿಸುವಲ್ಲಿ ಸಫಲರಾದರು. ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ತಂಡವು ಸಾಧಾರಣ ಮೊತ್ತವನ್ನು ಬೆನ್ನತ್ತಲಾಗದೇ ಸೋಲು ಅನುಭವಿಸಿದರು. ರಾಯಲ್ ಚಾಲೆಂಜರ್ಸ್ ತಂಡದ ಅಗ್ರ ಪಂಕ್ತಿಯ ಬ್ಯಾಟಿಂಗ್ ಕ್ರಮಾಂಕ ವಿಫಲವಾದ ಕಾರಣ ಮತ್ತದೇ ಸೋಲಿನ ಮುಖವನ್ನು ತಂಡ ನೋಡಬೇಕಾಯಿತು.

ಗುರಿ ಬೆನ್ನತ್ತಿ ಇನಿಂಗ್ಸ್ ಆರಂಭಿಸಿದ ರಾಯಲ್ ಚಾಲೆಂಜರ್ಸ್ ತಂಡವು ನಾಲ್ಕನೆ ಓವರಿನಲ್ಲಿ ಚಂದ್ರಪಾಲ್ (7) ವಿಕೆಟ್‌ನ್ನು ಇಶಾಂತ್ ಶರ್ಮಾ ಅವರ ಬೌಲಿಂಗ್‌ನಲ್ಲಿ ಕಳೆದುಕೊಂಡಿತು. ಕರ್ನಾಟಕ ರಣಜಿ ತಂಡದ ಕ್ರಿಕೆಟಿಗ ಜೆ ಅರುಣಕುಮಾರ್ ಅವರು ಉಮರ್ ಗುಲ್ ರನ್ ಸುರಿಮಳೆ ಮಾಡಲು ಪ್ರಾರಂಭಿಸಿದರು. ಮೊದಲು ಮಿಡ್ ವಿಕೆಟ್, ಮತ್ತೆರಡು ಬೌಂಡರಿಗಳನ್ನ ಆಫ್ ಸೈಡ್‌‌ನಲ್ಲಿ ತೆಗೆದುಕೊಳ್ಳುವ ಮೂಲಕ ಎದುರಾಳಿ ತಂಡದ ಎದೆಯಲ್ಲಿ ಆತಂಕದ ಸುರಿಮಳೆ ಮಾಡಿದರು. ಅಪಾಯಕಾರಿಯಾಗಿ ಬೆಳೆಯುವ ಎಲ್ಲ ಲಕ್ಷಣ ತೋರಿದ ಅರುಣ್ ಕುಮಾರ್ ಅವರು ಬ್ರಾಡ್ ಹಾಗ್ ‌ಅವರ ಮಿಂಚಿನ ಫೀಲ್ಡಿಂಗ್‌ ಬಲಿ ತೆಗೆದುಕೊಂಡಿತು. ಬ್ಯಾಕ್ ವರ್ಡ್ ಪಾಯಿಂಟ್‌ನಲ್ಲಿ ಮೊದಲು ಎಡಗೈನಿಂದ ಚೆಂಡು ಹೆಕ್ಕಿ ಬಲಗೈನಿಂದ ಸ್ಟಂಪನ್ನು ಗುರಿಯಾಗಿರಿಸಿ ಎಸೆದ ಚೆಂಡು ಅರುಣ್ ಕುಮಾರ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿತು.

17 ಎಸೆತಗಳನ್ನು ಎದುರಿಸಿದ ಅರುಣ್ ಕುಮಾರ್ ಐದು ಬೌಂಡರಿ ಚಚ್ಚಿ 22 ರನ್ ಮಾಡಿ ಪೆವಿಲಿಯನ್‌‌ಗೆ ಮರಳಿದಾಗ ತಂಡದ ಮೊತ್ತ 32 ಮಾತ್ರ. ಇಲ್ಲಿಂದ ನಾಯಕರಿಬ್ಬರ ನಡುವೆ ಕದನ ಪ್ರಾರಂಭವಾಯಿತು, ಅತ್ತ ಅರುಣ್ ಪೆವಿಲಿಯನ್‌ಗೆ ಮರಳುತ್ತಿದ್ದಂತೆ ಇತ್ತ ಕ್ರೀಸಿಗೆ ಬಂದ ನಾಯಕ ರಾಹುಲ್ ದ್ರಾವಿಡ್ ಅವರನ್ನು ಸ್ವಾಗತಿಸಿದ್ದು ದಾದಾ. ತಂಡದ ಗೆಲುವಿನ ಹಾದಿ ತಪ್ಪುತ್ತಿದೆ ಅನಿಸಿದ ಕಾರಣ ಬೌಲಿಂಗ್ ದಾಳಿಗೆ ತಾನೇ ಇಳಿದ ಸೌರವ್ ಗಂಗೂಲಿ, ಕೇವಲ ಹನ್ನೊಂದು ಎಸೆತಗಳನ್ನು ಆಡಲು ದ್ರಾವಿಡ್ (5) ಅವರಿಗೆ ಅವಕಾಶ ಮಾಡಿಕೊಟ್ಟು ಬೌಲ್ಡ್ ಔಟ್ ಮಾಡಿದ್ದು ಪಂದ್ಯದ ಫಲಿತಾಂಶದ ತಿರುವಿಗೆ ನೆರವಾಯಿತು.

ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಅಗ್ರ ಕ್ರಮಾಂಕ ಏನೂ ಮಾಡಲಿಕ್ಕಾಗದೇ ವಿಫಲವಾಗಿದ್ದು, ತಂಡವನ್ನು ಹಳಿಗೆ ತರಲು ಮಾರ್ಕ್ ಬೌಷರ್ ಮತ್ತು ಕ್ಯಾಮರೂನ್ ವೈಟ್‌ಗೆ ಅವಕಾಶವೇ ಇರಲಿಲ್ಲ. ಒಂದು ಕಡೆ ರನ್ ಗತಿ ಏರುತ್ತಿದ್ದರೆ ಇನ್ನೊಂದು ಕಡೆ ವಿಕೆಟ್ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಇಬ್ಬರಿಗೂ ಕಾಡುತ್ತಿತ್ತು. 11 ನೇ ಓವರ್ ಬೌಲಿಂಗ್ ಮಾಡಿದ ಲಕ್ಷ್ಮೀ ರತನ್ ಶುಕ್ಲಾ, ಕ್ಯಾಮರೂನ್ ವೈಟ್‌ಗೆ15 ರನ್ ನೀಡಿದರು. ಮರು ಓವರ್‌ ಬೌಲಿಂಗ್ ಮಾಡಿದ ಅಶೋಕ್ ದಿಂಡಾ ಎಂಟು ರನ್ ಮತ್ತು ಉಮರ್ ಗುಲ್ ಮಾಡಿದ 13ನೇ ಓವರ್ ಬೌಲಿಂಗ್‍‌ನಲ್ಲಿ 15 ರನ್ ತಂಡದ ಮೊತ್ತವನ್ನು ಸೇರುವ ಮೂಲಕ ಬೆಂಗಳೂರು ರನ್ ಬೇಡಿಕ ಒಂದು ಸ್ಥಿಮಿತಕ್ಕೆ ಬಂದಿತು.

14ನೇ ಓವರ್ ಬೌಲಿಂಗ್‌ನಲ್ಲಿ ಪಂದ್ಯ ಪುನಃ ನೈಟ್ ರೈಡರ್ಸ್ ಪರ ವಾಲಿತು. ಇಶಾಂತ್ ಶರ್ಮಾ ಕೇವಲ ಐದು ರನ್ ನೀಡಿದ್ದು, ಮತ್ತು ಕ್ಯಾಮರೂನ್ ವೈಟ್ ರನೌಟ್ ಆಗಿದ್ದು ಪಂದ್ಯದ ದಿಕ್ಕನ್ನು ಬದಲಿಸಿತು. ಅಲ್ಲಿಯವರೆಗೆ 30 ಎಸೆತಗಳಲ್ಲಿ 26 ರನ್ ಮಾಡಿದ್ದ ಬೌಷರ್ ಮತ್ತೆ 10 ಎಸೆತಗಳನ್ನು ಎದುರಿಸಿ 24 ರನ್ ಮಾಡುವ ಮೂಲಕ ಭರ್ತಿ ಐವತ್ತು ರನ್ ಕಲೆ ಹಾಕಿದರು.

ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಇಳಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಆಗಾಗ ಮುಗ್ಗರಿಸಿ, ಚೇತರಿಸಿಕೊಳ್ಳುತ್ತ ಸಾಗಿ ಮಳೆಯ ಕಾರಣ ಹದಿನಾರು ಓವರುಗಳಿಗೆ ಸಿಮೀತಗೊಂಡ ಪಂದ್ಯದಲ್ಲಿ ಏಳು ವಿಕೆಟ್ ಕಳೆದುಕೊಂಡು 129 ರನ್ ಮಾಡಿತು. ಡೆಲ್ ಸ್ಟೇಯ್ನ್, ಜಹೀರ್ ಖಾನ್ ಬೌಲಿಂಗ್ ದಾಳಿಯಲ್ಲಿ ನಲುಗಿದ ನೈಟ್ ರೈಡರ್ಸ್ ತಂಡದ ಬ್ಯಾಟ್ಸ್‌ಮನ್‌ಗಳು 10, 20 ಆರೋಹಣ ಕ್ರಮಾಂಕದಲ್ಲಿ ವೈಯಕ್ತಿಕವಾಗಿ ರನ್ ಮಾಡಿದರು. ರನ್ ಔಟ್ ಆಗುವ ಮುನ್ನ ಡೆವಿಡ್ ಹಸ್ಸಿ 12 ಎಸೆತಗಳಲ್ಲಿ 26 ರನ್ ಮಾಡಿದ್ದು ತಂಡದ ಗರಿಷ್ಟ ಮೊತ್ತ, ನಾಯಕ ಸೌರವ್ ಗಂಗೂಲಿ ಬೌಲಿಂಗ್‌ನಲ್ಲಿ ಮಿಂಚಿದ ಹಾಗೆ ಬ್ಯಾಟಿಂಗ್‌ನಲ್ಲಿ ಮಿಂಚಲಿಕ್ಕಾಗದೇ 20 ರನ್ ಮಾಡಿ ತೃಪ್ತರಾದರು.
ಮತ್ತಷ್ಟು
ಚೆನ್ನೈ ಕಿಂಗ್ಸ್ ತಂಡದ ಫೋಟೊ ಫಿನಿಷ್ ಆಟ
ನಾನಾವತಿ, ರಜಪೂತ್‌ರತ್ತ ಬಿಸಿಸಿಐ ಕೆಂಗಣ್ಣು
ರಾಜೀನಾಮೆ ನೀಡಿಲ್ಲ ಇದು ಪದಚ್ಯುತಿ: ಚಾರು ಶರ್ಮಾ
ಟಿ20 ಕೇವಲ ಬ್ಯಾಟ್ಸ್‌ಮನ್‌ಗಳದ್ದಲ್ಲ: ಮೆಗ್ರಾಥ್
ರಾಯಲ್ಸ್‌ಗಳ ರಭಸಕ್ಕೆ ಮುಂಬೈ ತಡೆ
ಇನ್ನೊಂದು ತಪರಾಕಿಗೆ ಸಿದ್ದವಾಗಿದ್ದ ಭಜ್ಜಿ