ಮುಖ್ಯ ಪುಟ > ಕ್ರೀಡಾ ಜಗತ್ತು > ಕ್ರಿಕೆಟ್‌ > ಐಪಿಎಲ್ ಕಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವ್ಯಾಟ್ಸನ್ ಅಬ್ಬರಕ್ಕೆ ಡೆವಿಲ್ಸ್‌ಗಳು ಮೌನ
ಮೊದಲು ಜೈಪುರ್‌ ಪಿಚ್‌ನ ಅಡ್ಡಾದಿಡ್ಡಿ ಪುಟಿತವನ್ನು ಡೇರ್ ಡೆವಿಲ್‌ಗಳನ್ನು ಕಟ್ಟಿ ಹಾಕುವಲ್ಲಿ ಬಳಸಿಕೊಂಡ ಶೇನ್ ವ್ಯಾಟ್ಸ್‌ನ್ ಬ್ಯಾಟಿಂಗ್‌ ಮಾಡುತ್ತಿದ್ದ ಸಮಯದಲ್ಲಿ ಪಿಚ್ ಬ್ಯಾಟಿಂಗ್‌ ಮಾಡುವುದಕ್ಕೆ ಅನುಕೂಲಕರ ಎನ್ನುವುದನ್ನು 40 ಎಸೆತಗಳಲ್ಲಿ 74 ರನ್ ಮಾಡುವ ಮೂಲಕ ತೋರಿಸಿದರು. ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ರಾಯಲ್ಸ್ ತಂಡವು ಡೆಲ್ಲಿ ಡೇರ್ ಡೆವಿಲ್ಸ್ (156) ತಂಡವನ್ನು ಸುಲಭದ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಸಫಲವಾಯಿತು. ಸುಲಭ ಸಾಧ್ಯ ಗುರಿಯನ್ನು ಬೆನ್ನತ್ತಿ ಇನಿಂಗ್ಸ್ ಆರಂಭಿಸಿದ ವಾರ್ನಿ ತಂಡವು ಏಳು ವಿಕೆಟ್ ಕಳೆದುಕೊಂಡು 159 ರನ್ ಮಾಡಿ ಮೂರು ವಿಕೆಟ್‍‌ಗಳ ಅಂತರದ ಗೆಲುವು ಸಾಧಿಸಿತು.

ಅಲ್ಪ ಮೊತ್ತವನ್ನು ಸಂರಕ್ಷಿಸಿಕೊಳ್ಳುವುದಕ್ಕೆ ಡೆಲ್ಲಿ ಡೇವಿಲ್ಸ್‌ಗಳು ಕಠಿಣ ಪ್ರಯತ್ನ ಮಾಡಿದರು. ಒಂದು ರೀತಿಯಲ್ಲಿ ಪಂದ್ಯವು ಮೊದಲ ಇನಿಂಗ್ಸ್‌ನಲ್ಲಿ ಹೆಚ್ಚು ಕಡಿಮೆ ನಿರ್ಣಾಯಕವಾಗಿತ್ತು. ಡೆಲ್ಲಿ ತಂಡವು 18ನೇ ಓವರಿನಲ್ಲಿ ತನ್ನ ಮೊದಲ ಸಿಕ್ಸರ್ ದಾಖಲಿಸಿತು. ಶಾರ್ಟ್ ಬಾಲ್‍ಗಳನ್ನು ಪದೇ ಪದೇ ಬಳಸಿದ ಶೇನ್ ವ್ಯಾಟ್ಸನ್‌ನ್ ಪಿಚ್ ಅಡ್ಡಾದಿಡ್ಡಿ ಪುಟಿತ ನೀಡುವ ಹೆದರಿಕೆಯನ್ನು ಡೆಲ್ಲಿ ತಂಡದ ಆಗ್ರ ಬ್ಯಾಟ್ಸ್‌ಮನ್‌ಗಳ ಮನದಲ್ಲಿ ಬೇರೂರುವಂತೆ ಮಾಡಿದರು.

ಶೇನ್ ವ್ಯಾಟ್ಸನ್‌‌‌‌ ಮೊದಲ ಮೂರು ಓವರಿನಲ್ಲಿ ಕೇವಲ 15 ರನ್ ನೀಡಿದರೆ, ಬೌಲಿಂಗ್‌ನಲ್ಲಿ ವೈವಿಧ್ಯತೆಯನ್ನು ತೋರಿದ ಮುನಾಫ್ ಪಟೇಲ್ ಮತ್ತಷ್ಟು ಎದುರಾಳಿಯ ರನ್ ಗತಿಯ ಮೇಲೆ ನಿಯಂತ್ರಣ ಹಾಕಿದರು. ಡೆಲ್ಲಿ ತಂಡದ ಗೌತಮ್ ಗಂಭೀರ್ ಅವರನ್ನು ಸತತವಾಗಿ ಕಾಡಿದ ಸಿದ್ದಾರ್ಥ್ ತ್ರಿವೇದಿ ಕೊನೆಗೂ ಗಂಭೀರ್ ಅವರ ಸ್ಟಂಪ್ ಬೀಳಿಸುವಲ್ಲಿ ಯಶಸ್ವಿಯಾದರು. ಮೊದಲ ಸ್ಪೆಲ್‌ನಲ್ಲಿ 12 ರನ್ ನೀಡಿ ದುಬಾರಿಯಾಗಿದ್ದ ಡಿಮಿಟ್ರಿ ಮಸ್ಕರನ್ಹೇಸ್ ಅವರು ಎರಡನೆ ಸ್ಪೆಲ್‌ನಲ್ಲಿ ವಿ.ಬಿ. ಡಿ ವಿಲಿಯರ್ಸ್ ಮತ್ತು ದಿನೇಶ್ ಕಾರ್ತಿಕ್ ಅವರನ್ನು ಒಂದೇ ಓವರಿನಲ್ಲಿ ಕಿತ್ತರು. ನಾಲ್ಕು ಓವರುಗಳ ಬೌಲಿಂಗ್ ಮಾಡಿದ ಮಸ್ಕರನ್ಹೆಸ್ 29 ರನ್ ನೀಡಿ ಎರಡು ವಿಕೆಟ್ ಪಡೆದು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು.

ರಾಜಸ್ಥಾನ್ ರಾಯಲ್ಸ್‌ಗಳ ಬಿಗಿ ಬೌಲಿಂಗ್‌ಗೆ ಬೆಂಬಲವಾಗಿ ನಿಂತಿದ್ದು ಫೀಲ್ಡಿಂಗ್, ಭಾರತೀಯ ಕ್ರಿಕೆಟ್ ಆಟಗಾರರಲ್ಲಿ ಕಳಪೆ ಕ್ಷೇತ್ರ ರಕ್ಷಕ ಎಂದು ಹೆಸರು ಪಡೆದ ಮುನಾಫ್ ಪಟೇಲ್ ಅವರ ಫೀಲ್ಡಿಂಗ್ ಇಂದು ಉತ್ಕೃಷ್ಟವಾಗಿತ್ತು. ಬಿಗಿ ಬೌಲಿಂಗ್ ಮತ್ತು ಅದಕ್ಕೆ ಪೈಪೋಟಿ ನೀಡಿದ ಫೀಲ್ಡಿಂಗ್ ನಡುವೆ ಸಿಲುಕಿದ ಡೆಲ್ಲಿ ತಂಡವು 17 ಓವರುಗಳಲ್ಲಿ ಅರು ವಿಕೆಟ್‌ ಕಳೆದುಕೊಂಡು 109 ರನ್ ಮಾಡಿತ್ತು. ಅಂತಿಮ ಮೂರು ಓವರುಗಳಲ್ಲಿ ಫರ್ವೇಜ್ ಮಹರೂಫ್ ಮತ್ತು ತಿಲಕರತ್ನೆ ದಿಲಶಾನ್ 47 ರನ್ ಮಾಡುವ ಮೂಲಕ ತಂಡದ ಮೊತ್ತ ಸುಧಾರಿಸಿತು.

ಡೆಲ್ಲಿ ತಂಡ ನೀಡಿದ ಗುರಿಯನ್ನು ಬೆನ್ನತ್ತಿ ಇನಿಂಗ್ಸ್ ಆರಂಭಿಸಿದ ರಾಜಸ್ತಾನ್ ರಾಯಲ್ಸ್ ತಂಡವು ಮೊದಲ ಐದು ಓವರುಗಳನ್ನು ಅಳುಕಿನಿಂದಲೇ ಪ್ರಾರಂಭಿಸಿತು. ಮಹರೂಫ್ ಮತ್ತು ಗ್ಲೆನ್ ಮೆಗ್ರಾಥ್, ಪಿಚ್‌ನ ಪುಟಿತವನ್ನು ಬಳಸಿಕೊಂಡು ಕೇವಲ 15 ರನ್ ನೀಡಿದರು. ರನ್ ತೀರ್ಮಾನಿಸಿ ಮತ್ತೇ ಓಡಿ ಬರುವ ಯೂಸೂಫ್ ಪಠಾಣ್ ಅವರು ವಿಲಿಯರ್ಸ್‌ರ ಚುರುಕಿನ ಫೀಲ್ಡಿಂಗ್‍‌ಗೆ ಬಲಿಯಾಗಬೇಕಾಯಿತು. ನಂತರ ಬಂದಿದ್ದು ಮಹ್ಮದ್ ಕೈಫ್ ಕೂಡ ರನೌಟ್ ಆಗಿದ್ದು ರಾಯಲ್ಸ್‌ಗಳ ಪಾಲಿಗೆ ಕುತ್ತು ತಂದಿತು.

ಕೈಪ್ ನಿರ್ಗಮನವು ವ್ಯಾಟ್ಸನ್‌ ಆಗಮನಕ್ಕೆ ನಾಂದಿ ಹಾಡಿತು. ಗ್ರೇಮ್ ಸ್ಮಿಥ್ ಮತ್ತು ವ್ಯಾಟ್ಸನ್‌ಐನ ನಡುವಿನ 71 ರನ್‌ಗಳ ಜೊತೆಯಾಟವು ಪಂದ್ಯದ ಫಲಿತಾಂಶವನ್ನು ಡೆಲ್ಲಿಗಳ ಕೈಯಿಂದ ಸಂಪೂರ್ಣವಾಗಿ ತನ್ನ ವಶಮ ಮಾಡಿಕೊಂಡಿತು. ಇದಕ್ಕೂ ಮೊದಲು ಈರ್ವರು ಬ್ಯಾಟ್ಸ್‌ಮನ್‌ಗಳಿಗೆ ಜೀವದಾನವನ್ನು ಡೆಲ್ಲಿ ಡೇರ್ ಡೆವಿಲ್ಸ್ ತಂಡದವರು ನೀಡಿದ್ದರು.

ಡೆಲ್ಲಿ ತಂಡದ ಯೋ ಮಹೇಶ್ ಅವರನ್ನು ಗುರಿಯಾಗಿರಿಸಿದ ಸ್ಮಿಥ್ ಮತ್ತು ವ್ಯಾಟ್ಸನ್‌ ತಮ್ಮ ಆಟದುದ್ದಕ್ಕೂ ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಅವರ ಬೌಲಿಂಗ್‌ನಲ್ಲಿ ಪಡೆದರು. ವ್ಯಾಟ್ಸನ್‌ ಸ್ಕ್ವೇರ್ ಲೆಗ್‌ನಲ್ಲಿ ಸಿಕ್ಸರ್ ಬಾರಿಸಿದರೆ ಸ್ಮಿಥ್, ಪ್ರದೀಪ್ ಸಂಗ್ವಾನ್ ಅವರ ಎಸೆತದಲ್ಲಿ ಮಿಡ್‌ ವಿಕೆಟ್‌ನಲ್ಲಿ ಬಾರಿಸಿದ ಬೌಂಡರಿ ನೋಡಲು ಮೋಹಕವಾಗಿತ್ತು. ಸ್ಮಿತ್ ಮಾತ್ರ ಸಂಯಮದ ಆಟಕ್ಕೆ ಒತ್ತು ನೀಡಿ 27 ಎಸೆತಗಳಲ್ಲಿ 23 ರನ್ ಮಾಡಿ ವಿಲಿಯರ್ಸ್ ಅವರ ಫೀಲ್ಡಿಂಗ್‌ನಲ್ಲಿ ರನೌಟ್ ಆದರು. 40 ಎಸೆಗಳಲ್ಲಿ ಐದು ಸಿಕ್ಸರ್ ಮತ್ತು ಅಷ್ಟೇ ಬೌಂಡರಿ ಬಾರಿಸಿ 74 ರನ್ ಹೆಕ್ಕಿದ ವ್ಯಾಟ್ಸನ್ ವಿಕೆಟ್ ರನ್ ರೂಪದಲ್ಲಿ ಪತನಗೊಂಡಾಗ ತಂಡದ ಮೊತ್ತ 150ನ್ನು ದಾಟಿತ್ತು.

ಕ್ರೀಸಿನಲ್ಲಿ ಇದ್ದ ನೀರಜ್ ಪಟೇಲ್ ಮತ್ತು ಮಹೇಶ್ ರಾವತ್ ಅಜೇಯವಾಗಿ ಉಳಿದು ಕ್ರಮವಾಗಿ 4 ಮತ್ತು 5 ರನ್ ಮಾಡಿ ತಂಡದ ಜಯವನ್ನು ಅಧಿಕೃತವಾಗಿ ಘೋಷಿಸಿದರು. ಆಕರ್ಷಕ ಆಲ್ ರೌಂಡ್ ಆಟ ಪ್ರದರ್ಶಿಸಿದ ಶೇನ್ ವ್ಯಾಟ್ಸನ್ ಅವರಿಗೆ ಪಂದ್ಯ ಪುರುಷ ಪ್ರಶಸ್ತಿ ದಕ್ಕಿತು.
ಮತ್ತಷ್ಟು
ರೈಡರ್ಸ್ ಎದುರು ವ್ಯರ್ಥಗೊಂಡ ಶರ್ಮಾ ಆಟ
ಚಾರು ಪದಚ್ಯುತಿ ದುರಾದೃಷ್ಟಕರ: ಪ್ರಸಾದ್
ಐಪಿಎಲ್‌: ರಾಯಲ್ಸ್‌ಗಳಿಗೆ ರಾಜ ಗೆಲುವು
ಮತ್ತದೇ ಸೋಲಿನ ಮುಖ ನೋಡಿದ ಚಾಲೆಂಜರ್ಸ್
ಚೆನ್ನೈ ಕಿಂಗ್ಸ್ ತಂಡದ ಫೋಟೊ ಫಿನಿಷ್ ಆಟ
ನಾನಾವತಿ, ರಜಪೂತ್‌ರತ್ತ ಬಿಸಿಸಿಐ ಕೆಂಗಣ್ಣು