ಇಂಡಿಯನ್ ಪ್ರಿಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಎರಡನೆ ಅತ್ಯಂತ ದುಬಾರಿ ತಂಡವಾಗಿರುವ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಮಾಲೀಕರು ಆಗಿರುವ ವಿಜಯ್ ಮಲ್ಯ ಅವರಿಗೆ ಜ್ಞಾನೋದಯವಾಗಿದ್ದು, ರಾಹುಲ್ ದ್ರಾವಿಡ್ ಮತ್ತು ಚಾರು ಶರ್ಮಾ ಅವರನ್ನು ತಂಡದ ಆಯ್ಕೆಯಲ್ಲಿ ವಿಶ್ವಾಸ ಇಟ್ಟು ತಪ್ಪು ಮಾಡಿದೆ ಎಂದು ಅವಲತ್ತುಗೊಂಡಿದ್ದಾರೆ.
ಐಪಿಎಲ್ ಕ್ರಿಕೆಟಿಗರ ಹರಾಜು ನಡೆಯುತ್ತಿರುವ ಸಂದರ್ಭದಲ್ಲಿ ನಾನು ಅನುಪಸ್ಥಿತಿಯಾಗಿದ್ದು ಅತಿ ದೊಡ್ಡ ತಪ್ಪು. ನಾನು ಸಾಕಷ್ಟು ಕ್ರಿಕೆಟ್ ವೀಕ್ಷಿಸುತ್ತೇನೆ ಆದರೂ ನಾನೇನು ಕ್ರಿಕೆಟ್ ತಜ್ಞ ಅಲ್ಲ. ತಂಡದ ಖರೀದಿಗೆ ಮುನ್ನ ನಾನೇ ಸ್ವತಃ ಕೆಲವು ಕ್ರಿಕೆಟಿಗರ ಪಟ್ಟಿಯನ್ನು ಮಾಡಿದ್ದೆ. ದ್ರಾವಿಡ್ ಅವರಂತಹ ಶ್ರೇಷ್ಟ ಕ್ರಿಕೆಟಿಗನ ಮೇಲೆ ನಂಬಿಕೆ ಇತ್ತು. ಅಲ್ಲದೇ ಚಾರು ಶರ್ಮಾ ಕೂಡ ದ್ರಾವಿಡ್ ತೀರ್ಮಾನವನ್ನು ಬೆಂಬಲಿಸಿದರು. ಅಂತಿಮ ಪಟ್ಟಿಯನ್ನು ನೋಡಿದ ನಂತರವೇ ಕೆಲವು ದಿನಗಳ ಹಿಂದೆ ನನ್ನ ಸ್ನೇಹಿತರು ಇದು ಅತ್ತ್ಯುತ್ತಮ ಟೆಸ್ಟ್ ತಂಡ ಎನ್ನುವುದು ಈಗ ಮನವರಿಕೆಯಾಗಿದೆ. ಬೇರೆ ಕ್ರೀಡೆಗಳಂತೆ ಕ್ರಿಕೆಟ್ ಅಲ್ಲ. ಇಲ್ಲಿ ನಾಯಕನೇ ತಂಡದ ಮಾಲೀಕ ಎನ್ನುವುದು ಸುಳ್ಳಲ್ಲ ಎಂದು ಪ್ರಲಾಪಿಸುತ್ತಿದ್ದಾರೆ.
ಎರಡನೆ ಹರಾಜು ಪ್ರಕ್ರಿಯೆಯಲ್ಲಿ ದ್ರಾವಿಡ್ ಇರಲಿಲ್ಲ. ಆ ಸಮಯದಲ್ಲಿ ನಾನು ಇಷ್ಟಪಟ್ಟವರನ್ನು ಖರೀದಿ ಮಾಡುವುದಕ್ಕೆ ಬದ್ಧನಾಗಿದ್ದೆ. ಆದರೆ ಚಾರು ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಕೊನೆಗೂ ನನ್ನ ಪಟ್ಟಿಯಲ್ಲಿ ಇದ್ದ ಮಿಸ್ಬಾ ಉಲ್ ಹಕ್ ಅವರನ್ನು ಖರೀದಿ ಮಾಡುವಲ್ಲಿ ಸಫಲನಾದೆ. ನಂತರ ಅಭ್ಯಾಸಕ್ಕೆ ಮೂಲ ಸೌಕರ್ಯಗಳು ಕಾಡುತ್ತಿವೆ ಎಂದು ಹೇಳಿದ್ದು. ಕ್ರಿಕೆಟಿಗರು ಇನ್ನೂ ತಂಡವಾಗಿಲ್ಲ ಎಂದು ಹೇಳಿದರು ಆಗಲೂ ಸುಮ್ಮನೆ ಕುಳಿತೆ. ಚಾರು ಶರ್ಮಾ ಅವರ ಸ್ಥಾನಕ್ಕೆ ಬೃಜೇಷ್ ಪಟೇಲ್ ಅವರನ್ನು ನೇಮಕ ಮಾಡಿದೆ. ಈ ಮೂಲಕವಾದರೂ ಅವರಿಗೆ ಅತ್ತ್ಯುತ್ತಮ ಸೌಲಭ್ಯಗಳು ದೊರೆಯಲಿ ಎಂದು ಆದರೂ ಧನಾತ್ಮಕ ಫಲಿತಾಂಶ ಎನ್ನುವುದು ಇನ್ನೂ ಕನಸಿನ ಮಾತಾಗಿದೆ.
ಇಡೀ ಲೀಗ್ ಟೂರ್ನಿಯಲ್ಲಿ ದ್ರಾವಿಡ್ ಅವರಂತಹ ಕ್ರಿಕೆಟಿಗನ ತಂಡವು ಅತ್ಯಂತ ಕೆಳಮಟ್ಟದಲ್ಲಿ ಇರುವುದು ಅವರಿಗೂ ಸರಿ ಕಾಣುವುದಿಲ್ಲ ನನಗೂ ಸರಿ ಕಾಣುವುದಿಲ್ಲ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಚಾರು ಶರ್ಮಾ ಅವರು ಪ್ರತಿಕ್ರಿಯಿಸಿದ್ದು. ಇಡೀ ತಂಡದ ಆಯ್ಕೆಯು ರಾಹುಲ್ ಅವರ ಪ್ರಕಾರ ನಡೆದಿದೆ. ಯಾವುದೇ ಒಂದು ತಂಡ ಪರಿಪೂರ್ಣ ಸ್ವರೂಪದಲ್ಲಿ ಅಸ್ತಿತ್ವದಲ್ಲಿರದು. ಆದರೂ ನಮಗೆ ಬೇಕಾದ ತಂಡ ದೊರೆತಿಲ್ಲ ಎಂದು ಹೇಳಿದರು.
ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡವನ್ನು ವಿಜಯ್ ಮಲ್ಯ ಅವರು 111.6 ಶತಕೋಟಿ ಡಾಲರ್ ನೀಡಿ ಖರೀದಿ ಮಾಡಿದ್ದರು.
|