ಮುಖ್ಯ ಪುಟ > ಕ್ರೀಡಾ ಜಗತ್ತು > ಕ್ರಿಕೆಟ್‌ > ಟ್ವೆಂಟಿ-20 > ಪಾಂಡೆ ಅಬ್ಬರ; ಡೆಕ್ಕನ್ ವಿರುದ್ಧ ಬೆಂಗಳೂರು ಜಯಭೇರಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಂಡೆ ಅಬ್ಬರ; ಡೆಕ್ಕನ್ ವಿರುದ್ಧ ಬೆಂಗಳೂರು ಜಯಭೇರಿ
ಮನೀಷ್ ಪಾಂಡೆ ಅಮೋಘ ಶತಕವನ್ನು (114*) ಬೆನ್ನಿಗೇರಿಸಿಕೊಂಡು ಹೊರಟ ಬೆಂಗಳೂರು ರಾಯಲ್ ಚಾಲೆಂಜರ್ಸ್ ಡೆಕ್ಕನ್ ಚಾರ್ಜರ್ಸ್ ವಿರುದ್ಧ 12 ರನ್‍‌ಗಳ ಅಂತರದಿಂದ ಜಯಭೇರಿ ಬಾರಿಸಿದ್ದು, ಸುಲಭವಾಗಿ ಸೆಮಿಫೈನಲ್ ಪ್ರವೇಶಿಸಿದೆ.

ಕೊನೆ ಪಂದ್ಯದಲ್ಲಿ ಸೋಲುಂಡರೂ ಹೈದರಾಬಾದ್ ಡೆಕ್ಕನ್ ಚಾರ್ಜರ್ಸ್ ಅಂಕಿ ಅಂಶಗಳ ಆಧಾರದಲ್ಲಿ ಸೆಮಿಫೈನಲ್ ಸೀಟು ಗಿಟ್ಟಿಸಿಕೊಂಡಿದೆ. ಅದು ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ಹಾಗೂ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಶುಕ್ರವಾರ ಮತ್ತು ಶನಿವಾರ ಫೈನಲ್ ಸ್ಥಾನಕ್ಕಾಗಿ ಹೋರಾಡಲಿವೆ.

ಸೂಪರ್‌ಸ್ಪೋರ್ಟ್ ಪಾರ್ಕ್‌ ಕ್ರೀಡಾಂಗಣದ ಮೂಲೆ ಮೂಲೆಗಳನ್ನು ಬ್ಯಾಟಿನಿಂದಲೇ ತಡಕಾಡಿದ ಮನೀಷ್ ಪಾಂಡೆ ವೇಗದ ಶತಕದ ದಾಖಲಿಸುವ ಮೂಲಕ ಭಾರತೀಯನೊಬ್ಬ ಐಪಿಎಲ್ ಇತಿಹಾಸದಲ್ಲಿಯೇ ಮೊತ್ತ ಮೊದಲ ಬಾರಿ ಶತಕ ದಾಖಲಿಸಿದ ಕೀರ್ತಿಗೆ ಪಾತ್ರರಾದರು.

ಮನೀಷ್ ಪಾಂಡೆ
PR
19ರ ಹರೆಯದ ಕನ್ನಡಿಗ ಕೇವಲ 73 ಎಸೆತಗಳಿಂದ ಅಜೇಯ 114 ರನ್ ದಾಖಲಿಸಿದ್ದರು. ಅವರ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರುಗಳು ಸೇರಿದ್ದವು. ಬಹುತೇಕ ಎಲ್ಲಾ ಬೌಲರುಗಳನ್ನು ನಿರ್ದಾಕ್ಷಿಣ್ಯವಾಗಿ ದಂಡಿಸಿದ ಪಾಂಡೆ ಅಟ್ಟಹಾಸಕ್ಕೆ ಕಡಿವಾಣ ಹಾಕುವವರೇ ಇರಲಿಲ್ಲ.

ರೊಲೊಫ್ ವಾನ್ ಡೆರ್ ಮೆರ್ವೆ (23), ಜಾಕ್ವಾಸ್ ಕ್ಯಾಲಿಸ್ (5), ರಾಹುಲ್ ದ್ರಾವಿಡ್ (6) ಮತ್ತು ರೋಸ್ ಟೇಲರ್ (1) ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದರೆ 19 ರನ್ ಗಳಿಸಿದ ವಿರಾಟ್ ಕೋಹ್ಲಿ ಅಜೇಯ.

ಒಟ್ಟಾರೆ 20 ಓವರುಗಳಲ್ಲಿ ಬೆಂಗಳೂರು 4 ವಿಕೆಟ್ ನಷ್ಟಕ್ಕೆ 170 ದಾಖಲಿಸಿತ್ತು. ಡೆಕ್ಕನ್ ಪರ ಪ್ರಗ್ಯಾನ್ ಓಜಾ 32ಕ್ಕೆ ಎರಡು, ಆಂಡ್ರ್ಯೂ ಸೈಮಂಡ್ಸ್ 15ಕ್ಕೆ ಒಂದು ಹಾಗೂ ಆರ್.ಪಿ. ಸಿಂಗ್ 47ಕ್ಕೆ ಒಂದು ವಿಕೆಟ್ ಪಡೆದಿದ್ದರು.

ದೊಡ್ಡ ಮೊತ್ತದ ಬೆನ್ನು ಬಿದ್ದ ಆಡಮ್ ಗಿಲ್‌ಕ್ರಿಸ್ಟ್ ಪಡೆ 20 ಓವರುಗಳಲ್ಲಿ 6 ವಿಕೆಟ್ ಕಳೆದುಕೊಂಡು 158 ರನ್ ಗಳಿಸಲಷ್ಟೇ ಶಕ್ತವಾಯಿತು.

ಹರ್ಷೆಲ್ ಗಿಬ್ಸ್ ಅಮೋಘ ಪ್ರದರ್ಶನ (60) ನೀಡಿದರಾದರೂ ಅದು ಪಾಂಡೆಯನ್ನು ಮೀರಿಸುವಂತಹುದ್ದಲ್ಲ. ಅವರು ತನ್ನ ಇನ್ನಿಂಗ್ಸ್‌ನಲ್ಲಿ 43 ಎಸೆತಗಳಿಂದ 3 ಬೌಂಡರಿ ಹಾಗೂ 4 ಸಿಕ್ಸರ್ ಚಚ್ಚಿದ್ದರು.

ಗಿಲ್‌ಕ್ರಿಸ್ಟ್ (15), ತಿರುಮಲಸೆತ್ತಿ ಸುಮನ್ (12), ಸೈಮಂಡ್ಸ್ (18), ರೋಹಿತ್ ಶರ್ಮಾ (12), ವೇಣುಗೋಪಾಲ ರಾವ್ (8) ಬೇಗನೆ ವಿಕೆಟ್ ಒಪ್ಪಿಸಿದ್ದರೆ ಅಜರ್ ಬಿಲಾಕಿಯಾ (16*) ಮತ್ತು ರಿಯಾನ್ ಹ್ಯಾರಿಸ್ (4*) ಅಜೇಯರಾಗುಳಿದಿದ್ದಾರೆ.

ಅನಿಲ್ ಕುಂಬ್ಳೆಯವರು 23ಕ್ಕೆ ಎರಡು, ಬಾಲಚಂದ್ರ ಅಖಿಲ್ 18ಕ್ಕೆ ಎರಡು ಹಾಗೂ ಮೆರ್ವೆ ಒಂದು ವಿಕೆಟ್ ಕಿತ್ತಿದ್ದರು. ಅರ್ಹವಾಗಿಯೇ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಾಂಡೆ ಪಾಲಾಯಿತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸೋಲಿನೊಂದಿಗೆ ನಿರ್ಗಮಿಸಿದ ಮುಂಬೈ
ಮುಂದೆ ವೈಯಕ್ತಿಕ ಪ್ರದರ್ಶನಗಳಿಗೇ ಹೆಚ್ಚು ಮಹತ್ವ: ಧೋನಿ
'ಐಪಿಎಲ್ ಗೆಲ್ಲುವ ನೆಚ್ಚಿನ ತಂಡ ಚೆನ್ನೈ, ದೆಹಲಿಯಲ್ಲ'
ಟೂರ್ನಮೆಂಟ್‌ವುದ್ದಕ್ಕೂ ನಮ್ಮದು ಅದ್ಭುತ ಆಟ: ವಾರ್ನೆ
ಪಂಜಾಬ್ ಸೆಮಿಫೈನಲ್ ಕನಸು ಭಗ್ನ: ಚೆನ್ನೈಗೆ ಗೆಲುವು
ರಾಜಸ್ತಾನದ ಸೆಮಿಫೈನಲ್ ಕಿಡಿಗೆ ಕೊಲ್ಕತ್ತಾ ಎಳ್ಳುನೀರು