ಮುಖ್ಯ ಪುಟ > ಕ್ರೀಡಾ ಜಗತ್ತು > ಕ್ರಿಕೆಟ್‌ > ಟ್ವೆಂಟಿ-20 > ಐಪಿಎಲ್‌ನಲ್ಲಿ ಶತಕ ದಾಖಲಿಸಿದ ಮೊದಲ ಭಾರತೀಯ ಪಾಂಡೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಐಪಿಎಲ್‌ನಲ್ಲಿ ಶತಕ ದಾಖಲಿಸಿದ ಮೊದಲ ಭಾರತೀಯ ಪಾಂಡೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಹೈದರಾಬಾದ್ ಡೆಕ್ಕನ್ ಚಾರ್ಜರ್ಸ್ ನಡುವಿನ ಇಂಡಿಯನ್ ಪ್ರೀಮಿಯರ್ ಲೀಗ್ 56ನೇ ಪಂದ್ಯದಲ್ಲಿ ದಾಖಲಾದ ಕೆಲವು ಅಂಕಿ ಅಂಶಗಳು ಹೀಗಿವೆ.

- ಹೈದರಾಬಾದ್ ಡೆಕ್ಕನ್ ಚಾರ್ಜರ್ಸ್ ವಿರುದ್ಧ ಬೆಂಗಳೂರು ರಾಯಲ್ ಚಾಲೆಂಜರ್ಸ್ ಆಡಿದ ನಾಲ್ಕು ಐಪಿಎಲ್ ಪಂದ್ಯಗಳಲ್ಲಿ ಮೂರನ್ನು ಗೆದ್ದುಕೊಂಡಂತಾಗಿದೆ.

- ಐಪಿಎಲ್ ದ್ವಿತೀಯ ಆವೃತ್ತಿಯಲ್ಲಿ ಬೆಂಗಳೂರು ಆಡಿದ 14 ಪಂದ್ಯಗಳಲ್ಲಿ ಎಂಟನ್ನು ಗೆದ್ದುಕೊಂಡಿದೆ. 14 ಪಂದ್ಯಗಳಿಂದ 16 ಅಂಕ ಗಳಿಸಿರುವ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಡೆಲ್ಲಿ ಡೇರ್‌ಡೆವಿಲ್ಸ್ (20) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (17) ನಂತರದ ಸ್ಥಾನದಲ್ಲಿದೆ.

- ಡೆಕ್ಕನ್ ಚಾರ್ಜರ್ಸ್ ನೆಟ್ ರನ್ ರೇಟ್ ಕಾರಣದಿಂದ ಐಪಿಎಲ್ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡು ಸೆಮಿಫೈನಲ್ ಪ್ರವೇಶಿಸಿತು.

- ಈ ಪಂದ್ಯದಲ್ಲಿ ಮನೀಷ್ ಪಾಂಡೆ 73 ಎಸೆತಗಳಿಂದ 114 ರನ್ ದಾಖಲಿಸಿದ್ದು ಅವರ ಟ್ವೆಂಟಿ-20 ಕ್ರಿಕೆಟ್ ಜೀವನದಲ್ಲೇ ಶ್ರೇಷ್ಠ ಪ್ರದರ್ಶನ. ಅವರ ಮೊದಲ ಶತಕ ಮತ್ತು ಇಡೀ ಐಪಿಎಲ್‌ನಲ್ಲಿ ಭಾರತೀಯ ಆಟಗಾರನಿಂದ ದಾಖಲಾದ ಮೊದಲ ಶತಕವೂ ಹೌದು.

- ಐಪಿಎಲ್‌ನಲ್ಲಿ ಶತಕ ಬಾರಿಸಿದ ಬೆಂಗಳೂರು ತಂಡದ ಮೊದಲ ಆಟಗಾರ ಮತ್ತು ಒಟ್ಟಾರೆ ಐಪಿಎಲ್‌ನಲ್ಲಿ ಶತಕ ದಾಖಲಿಸಿದ ಎಂಟನೇ ಕ್ರಿಕೆಟಿಗ.

- ಸನತ್ ಜಯಸೂರ್ಯ, ಆಡಮ್ ಗಿಲ್‌ಕ್ರಿಸ್ಟ್, ಬ್ರೆಂಡನ್ ಮೆಕಲಮ್, ಆಂಡ್ರ್ಯೂ ಸೈಮಂಡ್ಸ್, ಮೈಕೆಲ್ ಹಸ್ಸಿ ಮತ್ತು ಶಾನ್ ಮಾರ್ಷ್ ಐಪಿಎಲ್ ಉದ್ಘಾಟನಾ ಆವೃತ್ತಿಯಲ್ಲಿ ಶತಕ ದಾಖಲಿಸಿದ್ದರೆ, ಅಬ್ರಹಾಂ ಡೇ ವಿಲ್ಲರ್ಸ್ ಮತ್ತು ಮನೀಷ್ ಪಾಂಡೆ ಐಪಿಎಲ್ 2009ರಲ್ಲಿ ಶತಕ ಮಾಡಿದ್ದಾರೆ.

- ಈ ಪಂದ್ಯದಲ್ಲಿ ಅದ್ಭುತ ಅರ್ಧಶತಕದ (60) ಮೂಲಕ ಹರ್ಷೆಲ್ ಗಿಬ್ಸ್ 300 ರನ್ ಪೂರೈಸಿದ್ದಾರೆ. ಅವರು ಇದುವರೆಗೆ ಐಪಿಎಲ್ ದ್ವಿತೀಯ ಆವೃತ್ತಿಯಲ್ಲಿ 12 ಪಂದ್ಯಗಳಿಂದ ಮೂರು ಅರ್ಧಶತಕಗಳ ಸಹಿತ 31.80ರ ಸರಾಸರಿಯಲ್ಲಿ 318 ರನ್ ಪೇರಿಸಿದ್ದಾರೆ.

- ಐಪಿಎಲ್‌ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಆಡಮ್ ಗಿಲ್‌ಕ್ರಿಸ್ಟ್. ಅವರು 31.33ರ ಸರಾಸರಿಯಲ್ಲಿ 846 ರನ್ ದಾಖಲಿಸುವ ಮೂಲಕ ಸುರೇಶ್ ರೈನಾರ 835 ರನ್ನುಗಳನ್ನು ಮೀರಿ ನಿಂತಿದ್ದಾರೆ.

- ಐಪಿಎಲ್‌ನಲ್ಲಿ 20 ವಿಕೆಟ್ ಪಡೆದ ಮೊದಲ ಬೌಲರ್ ರುದ್ರ ಪ್ರತಾಪ್ ಸಿಂಗ್. ಅವರು 14 ಪಂದ್ಯಗಳಿಂದ 18.40ರ ಸರಾಸರಿಯಲ್ಲಿ ಈ ಸಾಧನೆ ಮಾಡಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸೆಮಿಫೈನಲ್ ಸಂಪೂರ್ಣ ಭಿನ್ನ: ಕುಂಬ್ಳೆ ವಿಶ್ಲೇಷಣೆ
ನುಡಿದಂತೆ ನಡೆಯದ 'ಐಪಿಎಲ್ ಫೇಕ್ ಪ್ಲೇಯರ್'
ಲಯ ಮರಳಿರುವುದು ಸಮಾಧಾನ ತಂದಿದೆ: ಸೆಹ್ವಾಗ್
ಐಪಿಎಲ್ 2009ರಲ್ಲಿದು ಸೆಹ್ವಾಗ್ ಮೊದಲ ಅರ್ಧಶತಕ..!
ಪಾಂಡೆ ಅಬ್ಬರ; ಡೆಕ್ಕನ್ ವಿರುದ್ಧ ಬೆಂಗಳೂರು ಜಯಭೇರಿ
ಸೋಲಿನೊಂದಿಗೆ ನಿರ್ಗಮಿಸಿದ ಮುಂಬೈ