ಮುಖ್ಯ ಪುಟ > ಕ್ರೀಡಾ ಜಗತ್ತು > ಕ್ರಿಕೆಟ್‌ > ಟ್ವೆಂಟಿ-20 > ಗಿಲ್ಲಿ ಎದುರು ಏನೂ ಮಾಡಲಾರದೆ ಹೋದೆವು: ಸೆಹ್ವಾಗ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗಿಲ್ಲಿ ಎದುರು ಏನೂ ಮಾಡಲಾರದೆ ಹೋದೆವು: ಸೆಹ್ವಾಗ್
PTI
ಶುಕ್ರವಾರದ ಸೆಮಿಫೈನಲ್‌ ನಮ್ಮ ದಿನವಾಗಿರಲಿಲ್ಲ. ಅದು ಏಕಮಾತ್ರ ಗಿಲ್‌ಕ್ರಿಸ್ಟ್ ಅವರ ದಿನವಾಗಿ ಹೊರಹೊಮ್ಮಿತು ಎಂದು ಡೆಕ್ಕನ್ ಚಾರ್ಜರ್ಸ್ ತಂಡದ ನಾಯಕ ಆಡಮ್ ಗಿಲ್‌ಕ್ರಿಸ್ಟ್‌ ಅವರ ಬಿರುಗಾಳಿಯ ಹೊಡೆತಕ್ಕೆ ತತ್ತರಿಸಿ ಹೋದ ಡೆಲ್ಲಿ ಪಡೆಯ ನಾಯಕ ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.

ಗಿಲ್ ಕೇವಲ 35 ಎಸೆತಗಳಿಂದ 85 ರನ್ ಚಚ್ಚಿದರು. 10 ಬೌಂಡರಿಗಳು ಹಾಗೂ ಐದು ಸಿಕ್ಸರ್‌‌ಗಳನ್ನು ಲೀಲಾಜಾಲವಾಗಿ ಸಿಡಿಸಿದ ಅವರನ್ನು ಕಟ್ಟಿಹಾಕುವುದು ನಮ್ಮಿಂದ ಸಾಧ್ಯವಾಗಲೇ ಇಲ್ಲ. ನಾವು ಅವರ ಬ್ಯಾಟಿಂಗ್‌ ಎದುರು ಏನೂ ಮಾಡಲಾರದೆ ಹೋದೆವು. ಅದು ಅಕ್ಷರಶಃ ಗಿಲ್‌ಕ್ರಿಸ್ಟ್ ಅವರ ದಿನವಾಗಿ ರೂಪುಗೊಂಡಿತು ಎಂದು ಸೆಹ್ವಾಗ್ ಬಣ್ಣಿಸಿದರು.

ನಾವು ಮೊದಲು ಬ್ಯಾಟಿಂಗ್‌ಗೆ ಇಳಿದು 153ರ ಸವಾಲನ್ನು ಚಾರ್ಜರ್ಸ್‌ಗೆ ನೀಡಿದಾಗ ಅದು ಉತ್ತಮ ಮೊತ್ತವೆಂದೇ ಅಂದುಕೊಂಡಿದ್ದೆ. ಅದೇನೂ ಸುಲಭದ ಗುರಿಯಾಗಿರಲಿಲ್ಲ. ಆದರೆ ಗಿಲ್‌ಕ್ರಿಸ್ಟ್ ತಮ್ಮ ಬಿರುಗಾಳಿಯ ಬ್ಯಾಟಿಂಗ್ ಆರಂಭಿಸಿದಾಗ ಇಂದು ನಮ್ಮ ದಿನವಲ್ಲ ಅಂದುಕೊಂಡೆ ಎಂದು ಸೆಹ್ವಾಗ್ ವಿವರಿಸಿದರು.

ಆದರೆ ಈ ಐಪಿಎಲ್‌ಗಿಂತ ಮೊದಲು ಸುಮಾರು ಒಂದು ವರ್ಷಗಳ ಕಾಲ ಕ್ರಿಕೆಟ್‌ನಲ್ಲಿ ಕಾಣದೆ ಇದ್ದ ಗಿಲ್‌ಕ್ರಿಸ್ಟ್ ಸುದೀರ್ಘ ದಿನಗಳ ನಂತರ ಮತ್ತೆ ಬಂದರೂ ತಮ್ಮ ಹಳೆಯ ಶೈಲಿಗೆ ತುಕ್ಕು ಹಿಡಿದಿಲ್ಲ ಎಂದು ಈ ಮೂಲಕ ತೋರಿಸಿಕೊಟ್ಟಿದ್ದಾರೆ.

ಗಿಲ್‌ಕ್ರಿಸ್ಟ್ ತಮ್ಮ ಅಮೋಘ ಆಟಕ್ಕೆ ಸಂತೋಷಗೊಂಡಿದ್ದು, ಇದು ನನಗೆ ಮರುಜೀವ ತಂದುಕೊಟ್ಟ ಪಂದ್ಯ. ಒಂದು ವರ್ಷದ ನಂತರ ಮರಳಿ ಬಂದುದಕ್ಕೆ ನನಗೆ ತುಂಬ ಖುಷಿಯೆನಿಸುತ್ತಿದೆ ಎಂದು ವಿವರಿಸಿದರು.

ಡೆಲ್ಲಿ ತಂಡ ಉತ್ತಮ ಮೊತ್ತ ಕಲೆ ಹಾಕಿತ್ತು. ಹಾಗಾಗಿ ಅವರ ರನ್‌ರೇಟ್‌ಗೆ ನಮ್ಮ ರನ್‌ರೇಟನ್ನೂ ಹೊಂದಿಸಿಕೊಳ್ಳುವ ಒತ್ತಡ ನಮ್ಮ ತಂಡಕ್ಕಿತ್ತು. ಗೆಲ್ಲಲೇ ಬೇಕೆಂಬ ಒತ್ತಡದಿಂದಲೇ ಆಟವಾಡಿದೆ. ಇದರಿಂದ ಗೆಲುವು ಸಾಧ್ಯವಾಯಿತು ಎಂದು ಗಿಲ್ ಗೆಲುವಿನ ಸಂತಸ ಹಂಚಿಕೊಂಡರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗಿಲ್ಲಿ' ಆರ್ಭಟಕ್ಕೆ ಡೆಲ್ಲಿ ಧೂಳೀಪಟ
ಐಪಿಎಲ್‌ನಲ್ಲಿ ಶತಕ ದಾಖಲಿಸಿದ ಮೊದಲ ಭಾರತೀಯ ಪಾಂಡೆ
ಸೆಮಿಫೈನಲ್ ಸಂಪೂರ್ಣ ಭಿನ್ನ: ಕುಂಬ್ಳೆ ವಿಶ್ಲೇಷಣೆ
ನುಡಿದಂತೆ ನಡೆಯದ 'ಐಪಿಎಲ್ ಫೇಕ್ ಪ್ಲೇಯರ್'
ಲಯ ಮರಳಿರುವುದು ಸಮಾಧಾನ ತಂದಿದೆ: ಸೆಹ್ವಾಗ್
ಐಪಿಎಲ್ 2009ರಲ್ಲಿದು ಸೆಹ್ವಾಗ್ ಮೊದಲ ಅರ್ಧಶತಕ..!