ಮುಖ್ಯ ಪುಟ > ಕ್ರೀಡಾ ಜಗತ್ತು > ಕ್ರಿಕೆಟ್‌ > ಟ್ವೆಂಟಿ-20 > ಮೆಕ್‌ಗ್ರಾತ್ ಡೆಲ್ಲಿಗೆ ಆಸ್ತಿಯಾಗಲೇ ಇಲ್ಲ: ಸೆಹ್ವಾಗ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೆಕ್‌ಗ್ರಾತ್ ಡೆಲ್ಲಿಗೆ ಆಸ್ತಿಯಾಗಲೇ ಇಲ್ಲ: ಸೆಹ್ವಾಗ್
PTI
ಗ್ಲೆನ್ ಮೆಕ್‌ಗ್ರಾತ್ ಒಬ್ಬ ಭಾರೀ ಆಟಗಾರನಿರಬಹುದು. ಆದರೆ ಡೆಲ್ಲಿ ಪಡೆಗೆ ಆತ ಭಾರೀ ಆಸ್ತಿ ಆಗಲೇ ಇಲ್ಲ ಎಂದು ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ನಾಯಕ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

ತನ್ನನ್ನು ಡೆಲ್ಲಿ ತಂಡ ಅಲಕ್ಷಿಸಿದ್ದಕ್ಕೆ ಮುನಿಸಿಕೊಂಡಿದ್ದ ಮೆಕ್‌ಗ್ರಾತ್ ಮುಂದಿನ ವರ್ಷ ನಾನು ಐಪಿಎಲ್ ಆಡುವುದಿಲ್ಲ ಎಂದು ಹೇಳಿ ಆಮೇಲೆ ನಾನು ಹಾಗೆ ಹೇಳಿಯೇ ಇಲ್ಲ ಎಂದು ಪರೋಕ್ಷವಾಗಿ ಅಸಮಾಧಾನವನ್ನು ಪರೋಕ್ಷವಾಗಿ ಹೊರಹಾಕಿದ್ದಕ್ಕೆ ಸೆಹ್ವಾಗ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಸೆಮಿಫೈನಲ್ ವಂಚಿತರಾದ ಮೇಲೆ ಮಾತನಾಡಿದ ಸೆಹ್ವಾಗ್, ಕಳೆದ ಒಂದು ವರ್ಷದಿಂದ ಮೆಕ್‌ಗ್ರಾತ್ ಸರಿಯಾಗಿ ಆಡಿಯೇ ಇಲ್ಲ. ಈ ಬಾರಿಯೂ ಮೊದಲಿನ ಫಾರ್ಮ್‌ಗೆ ಅವರು ಮರಳಲೇ ಇಲ್ಲ. ಆದರೆ ಡಿರ್ಕ್ ನ್ಯಾನೇಜ್ ಪಂದ್ಯಗಳುದ್ದಕ್ಕೂ ಅತ್ಯುತ್ತಮ ಪ್ರದರ್ಶನ ತೋರಿದರು ಎಂದು ಸೆಹ್ವಾಗ್ ವಿವರಿಸಿದರು.

ಕೊನೆಯ ಪಂದ್ಯದಲ್ಲಿ 35 ಎಸೆತಗಳಲ್ಲಿ 85 ರನ್ ಚಚ್ಚಿದ ಡೆಕ್ಕನ್ ಚಾರ್ಜರ್ಸ್ ಪರ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಗಿಲ್‌ಕ್ರಿಸ್ಟ್, ಮೆಕ್‌ಗ್ರಾತ್ ಅವರಿಗೆ ಇಡೀ ಟೂರ್ನಮೆಂಟ್‌ನಲ್ಲೇ ಬೌಲಿಂಗ್‌ಗೆ ಅವಕಾಶ ನೀಡದಿದ್ದುದು ನೋಡಿ ನನಗೆ ಆಶ್ಚರ್ಯವಾಯಿತು. ಆದರೂ, ಡಿರ್ಕ್ ನ್ಯಾನೇಸ್ ಹಾಗೂ ಇತರರು ತುಂಬ ಚೆನ್ನಾಗಿ ಆಡಿದರು ಎಂದಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರತೀಯ ಸಂಸ್ಕೃತಿಗೆ ಬೌಲ್ಡ್ ಆದ ವಾರ್ನೆ
ವರ್ಷಕ್ಕೆರಡು ಐಪಿಎಲ್ ಟೂರ್ನಿ: ಮೋದಿ ಸುಳಿವು
ಸೆಮಿ: ಕುತೂಹಲ ಕೆರಳಿಸಿರುವ ಬೆಂಗಳೂರು- ಚೆನ್ನೈ ಹಣಾಹಣಿ
ನನಗಿನ್ನು ಸೇನಾ ವೃತ್ತಿ ಬೇಡ, ಕ್ರಿಕೆಟ್ ಬೇಕು: ಮನೀಷ್ ಪಾಂಡೆ
ಗಿಲ್ಲಿ ಎದುರು ಏನೂ ಮಾಡಲಾರದೆ ಹೋದೆವು: ಸೆಹ್ವಾಗ್
ಗಿಲ್ಲಿ' ಆರ್ಭಟಕ್ಕೆ ಡೆಲ್ಲಿ ಧೂಳೀಪಟ