ಮುಖ್ಯ ಪುಟ > ಕ್ರೀಡಾ ಜಗತ್ತು > ಕ್ರಿಕೆಟ್‌ > ಟ್ವೆಂಟಿ-20 > ಫ್ರ್ಯಾಂಚೈಸಿಗಳ ಜೇಬು ತುಂಬಿಸಿದ ಐಪಿಎಲ್‌ಗೆ ಭಾರೀ ಲಾಭ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಫ್ರ್ಯಾಂಚೈಸಿಗಳ ಜೇಬು ತುಂಬಿಸಿದ ಐಪಿಎಲ್‌ಗೆ ಭಾರೀ ಲಾಭ!
PTI
ಇದು ಆಶ್ಚರ್ಯವಾದರೂ ಸತ್ಯ. ಐಪಿಎಲ್ ಟೂರ್ನಿಯ ಭವ್ಯ ಯಶಸ್ಸಿನಿಂದ ಕೊನೆಯ ಸ್ಥಾನದಲ್ಲಿರುವ ತಂಡಗಳೂ ಸೇರಿದಂತೆ ಎಲ್ಲ ತಂಡಗಳೂ ಭರ್ಜರಿ ಲಾಭವನ್ನೇ ಜೇಬಿಗಿಳಿಸಿವೆ. ಅಲ್ಲದೆ, ಕಳೆದ ವರ್ಷಕ್ಕಿಂತ ಈ ಬಾರಿ ಪ್ರತಿ ತಂಡದ ಲಾಭ 40 ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚಾಗಿದೆ!

ಕಳೆದ ವರ್ಷದ ದಾಖಲೆಗಳ ಪ್ರಕಾರ, ಪ್ರತಿ ತಂಡವೂ ತಲಾ 25 ಕೋಟಿ ರೂಪಾಯಿಗಳ ಲಾಭವನ್ನು ಪಂದ್ಯ ಪ್ರಸಾರದಿಂದ ಪಡೆದುಕೊಂಡಿದ್ದವು. ಆದರೆ ಈ ಬಾರಿ ಅದು 67.50 ಕೋಟಿಗೇರಿದೆ!

ಬಿಸಿಸಿಐ ಲಾಭವೂ ಕಳೆದ ವರ್ಷಕ್ಕಿಂತ ಬರೋಬ್ಬರಿ ಏರಿಕೆ ಕಂಡಿದೆ. ಕಳೆದ ವರ್ಷ ಬಿಸಿಸಿಐ 350 ಕೋಟಿ ರೂಪಾಯಿಗಳ ಲಾಭವನ್ನು ಖಜಾನೆಗೆ ತುಂಬಿದ್ದರೆ ಈ ಬಾರಿ 477 ಕೋಟಿ ರೂಪಾಯಿಗಳ ಲಾಭ ಜೇಬಿಗಿಳಿಸಿದೆ.

PTI
ಅಂದು ಐಪಿಎಲ್ ಫ್ರ್ಯಾಂಚೈಸಿಗಳು ಭಾರತದಿಂದ ದಕ್ಷಿಣ ಆಫ್ರಿಕಾಕ್ಕೆ ಐಪಿಎಲ್ ಟೂರ್ನಿಯನ್ನು ವರ್ಗಾಯಿಸಿರುವುದಕ್ಕೆ ತಗಾದೆ ತೆಗೆದಿದ್ದರು. ಈ ಸ್ಥಳ ಬದಲಾವಣೆಯಿಂದ ಲಾಭ ಕಡಿಮೆಯಾಗಬಹುದು ಎಂಬುದು ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಆದರೆ ಕಳೆದ ವರ್ಷಕ್ಕಿಂತಲೂ ಭರ್ಜರಿ ಯಶಸ್ಸು ಈ ಬಾರಿ ಹೆಚ್ಚು ಲಾಭ ಗಳಿಸುವಂತೆ ಮಾಡಿದೆ. ಆದರೂ, ಭಾರತದಲ್ಲೇ ಈ ಬಾರಿಯೂ ಐಪಿಎಲ್ ನಡೆಯುತ್ತಿದ್ದರೆ, ಲಾಭದ ಮಟ್ಟದಲ್ಲಿ ಇನ್ನೂ ಏರಿಕೆಯಾಗುವ ಸಂಭವವಿತ್ತು ಎಂದೂ ಅಂದಾಜಿಸಲಾಗಿದೆ. ಯಾಕೆಂದರೆ, ಐಪಿಎಲ್‌ ಟಿಕೆಟ್ ಮಾರಾಟ ಹಾಗೂ ಇತರ ಮಾರಾಟಗಳಿಂದ ಭಾರತದಲ್ಲಿ ದಕ್ಷಿಣ ಆಫ್ರಿಕಾಕ್ಕಿಂತ ಹೆಚ್ಚು ಬೇಡಿಕೆ ಇರುವುದು ಸಾಮಾನ್ಯ ಕೂಡಾ.

ಕಳೆದ ವರ್ಷ ಅಂದರೆ, 2008ರಲ್ಲಿ ನೈಟ್ ರೈಡರ್ಸ್, ಮುಂಬೈ ಇಂಡಿಯನ್ಸ್, ಹಾಗೂ ಡೆಲ್ಲಿ ಡೇರ್‌ಡೆವಿಲ್ಸ್ ತಂಡಗಳು ಕೇವಲ ತಮ್ಮ ಪಂದ್ಯಗಳ ಟಿಕೆಟ್‌ ಮಾರಾಟದಿಂದ ಪ್ರತಿಯೊಂದು ತಂಡವೂ ತಲಾ ಬರೋಬ್ಬರಿ 20 ಕೋಟಿ ರೂಪಾಯಿಗಳ ಲಾಭ ಪಡೆದಿದ್ದವು.

ಈ ಬಾರಿ, ಟೂರ್ನಿಯ ಎರಡನೇ ಭಾಗದ ಪಂದ್ಯಗಳಲ್ಲಿ ಒಟ್ಟು 35.1 ಕೋಟಿ ರೂಪಾಯಿಗಳ ಲಾಭ ಮಾಡಲಿರುವ ಬಾಲಿವುಡ್ ಸುಂದರಿ ಶಿಲ್ಪಾ ಶೆಟ್ಟಿ ಒಡೆತನದ ರಾಜಸ್ತಾನ ರಾಯಲ್ಸ್ ಹೆಚ್ಚು ಲಾಭ ಗಳಿಸಲಿದೆ. 2008ರಲ್ಲಿ ಇದು ಲಾಭ ಗಳಿಸುವಿಕೆಯಲ್ಲಿ ಎರಡನೇ ಸ್ಥಾನದಲ್ಲಿದ್ದು, 25.8 ಕೋಟಿ ರೂಪಾಯಿಗಳನ್ನು ತನ್ನ ಬೊಕ್ಕಸಕ್ಕೆ ತುಂಬಿತ್ತು. ಇದರಲ್ಲಿ 4.50 ಕೋಟಿ ರೂಪಾಯಿಗಳ ಬಹುಮಾನವೂ ಸೇರಿತ್ತು.

PTI
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಬಾಲಿವುಡ್ ಕಿಂಗ್ ಶಾರುಖ್ ಖಾನ್ ಒಡೆತನದ ನೈಟ್ ರೈಡರ್ಸ್ ತಂಡ ಲಾಭ ಗಳಿಕೆಯಲ್ಲಿ ಮಾತ್ರ ಕೊನೆಯ ಸ್ಥಾನದ್ಲಲಿಲ್ಲ. ಅದು ಈ ಬಾರಿ ಕೇವಲ ಎರಡನೇ ಭಾಗದ ಪಂದ್ಯಗಳಲ್ಲಿ 25.8 ಕೋಟಿ ರೂಪಾಯಿಗಳ ಲಾಭ ಪಡೆಯುವ ಮೂಲಕ ರಾಜಸ್ಥಾನದ ನಂತರದ ಸ್ಥಾನ ಅಂದರೆ ಎರಡನೇ ಸ್ಥಾನದಲ್ಲಿದೆ. ಸೆಮಿಫೈನಲ್‌ಗೇರಿದ ಡೆಲ್ಲಿ ಡೆವಿಲ್ಸ್ 20 ಕೋಟಿ ರೂಪಾಯಿ ಲಾಭ ಮಾಡಿಕೊಂಡಿದೆ.

ಇದಲ್ಲದೆ, ಟೂರ್ನಿಯ ಬಹುಮಾನದಿಂದಲೂ ಲಾಭಕ್ಕೆ ಇನ್ನಷ್ಟು ಮೊತ್ತ ಸೇರ್ಪಡೆಯಾಗಿದೆ. ಐಪಿಎಲ್ ಟೂರ್ನಿಯಲ್ಲಿ ವಿಜೇತವಾದ ತಂಡಕ್ಕೆ (ಡೆಕ್ಕನ್ ಚಾರ್ಜರ್ಸ್) 4.8 ಕೋಟಿ ರೂಪಾಯಿಗಳ ಬಹುಮಾನವಾದರೆ, ರನ್ನರ್ ಅಪ್ ತಂಡಕ್ಕೆ (ಬೆಂಗಳೂರು ರಾಯಲ್ ಚಾಲೆಂಜರ್ಸ್) 2.4 ಕೋಟಿ ರೂಪಾಯಿಗಳ ಬಹುಮಾನ ದಕ್ಕಿದೆ. ಉಳಿದಂತೆ ಸೆಮಿಫೈನಲ್‌ವರೆಗೇರಿ ಸೋತ ತಂಡಗಳಿಗೆ (ಡೆಲ್ಲಿ ಡೇರ್‌ಡೆವಿಲ್ಸ್ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್) ತಲಾ 1.2 ಕೋಟಿ ರೂಪಾಯಿಗಳ ಬಹುಮಾನವೂ ದಕ್ಕಿದೆ. ಸೆಮಿಫೈನಲ್‌ಗೂ ಏರದೆ ಹೊರಗುಳಿದ ತಂಡಗಳಿಗೂ ಸಣ್ಣ ಮೊತ್ತದ ಬಹುಮಾನವಿತ್ತು. ಐದನೇ ಸ್ಥಾನದಲ್ಲಿ ನಿಂತು ಸೆಮಿಫೈನಲ್‌ನಿಂದ ಹೊರಗುಳಿದ ಬಾಲಿವುಡ್‌ನ ಗುಳಿ ಕೆನ್ನೆಯ ನಟಿ ಪ್ರೀತಿ ಝಿಂಟಾ ಒಡೆತನದ ಕಿಂಗ್ಸ್ ಲೆವೆನ್ ಪಂಜಾಬ್‌ಗೆ 80 ಲಕ್ಷ ರೂ, ಆರನೇ ಸ್ಥಾನಿ ರಾಜಸ್ಥಾನ್ ರಾಯಲ್ಸ್‌ಗೆ 70 ಲಕ್ಷ ರೂ, ಏಳನೇ ಸ್ಥಾನಕ್ಕೆ ತೃಪ್ತಿ ಪಡೆದ ಮುಂಬೈ ಇಂಡಿಯನ್ಸ್‌ಗೆ 50 ಲಕ್ಷ ರೂ, ಹಾಗೂ ಕೊನೆಯ ಸ್ಥಾನದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ 40 ಲಕ್ಷ ರೂಪಾಯಿಗಳ ಬಹುಮಾನ ದಕ್ಕಿದೆ.

8,200 ಕೋಟಿ ರೂಪಾಯಿಗಳಿಗೆ ಒಂಭತ್ತು ವರ್ಷಗಳಿಗೆ ಮಾಡಿಕೊಂಡ ಪ್ರಸರಣ ಹಕ್ಕಿನಲ್ಲಿ ಮತ್ತೆ ಈ ವರ್ಷ ಬದಲಾವಣೆ ಮಾಡಿಕೊಂಡಿದ್ದರಿಂದ ಐಪಿಎಲ್ ಹಾಗೂ ಫ್ರ್ಯಾಂಚೈಸಿಗಳ ಲಾಭಕ್ಕೆ ಸಹಕಾರಿಯಾಯಿತು ಎಂದೂ ಹೇಳಲಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
2011ರಲ್ಲಿ 10 ತಂಡಗಳ ಐಪಿಎಲ್: ಮೋದಿ
ಬೆಂಗಳೂರುಗೆ ಸೋಲುಣಿಸಿದ ಹೈದರಾಬಾದ್ ಚಾಂಪಿಯನ್
ಯುವ ಪ್ರತಿಭೆಗಳಿಗೆ ಐಪಿಎಲ್ ಅನುಭವ ಮಂಟಪ: ಧೋನಿ
ಚಾಲೆಂಜರ್ಸ್- ಡೆಕ್ಕನ್ ಜಿದ್ದಾಜಿದ್ದಿ: ಯಾರಿಗೆ ವಿಜಯಮಾಲೆ?
ಚೆನ್ನೈ ಬಗ್ಗುಬಡಿದು ಫೈನಲ್‌ಗೇರಿದ ಬೆಂಗಳೂರು
ಮೆಕ್‌ಗ್ರಾತ್ ಡೆಲ್ಲಿಗೆ ಆಸ್ತಿಯಾಗಲೇ ಇಲ್ಲ: ಸೆಹ್ವಾಗ್