ಮುಖ್ಯ ಪುಟ > ಕ್ರೀಡಾ ಜಗತ್ತು > ಕ್ರಿಕೆಟ್‌ > ಟ್ವೆಂಟಿ-20 > ಸೋಲಿನಿಂದ ಬೇಸರ, ಫೈನಲ್‌ಗೇರಿದ್ದು ಸೋಜಿಗ: ಕುಂಬ್ಳೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೋಲಿನಿಂದ ಬೇಸರ, ಫೈನಲ್‌ಗೇರಿದ್ದು ಸೋಜಿಗ: ಕುಂಬ್ಳೆ
PTI
ಐಪಿಎಲ್ ಟ್ರೋಫಿ ಕೂದಲೆಳೆಯಷ್ಟರಲ್ಲಿ ಕೈತಪ್ಪಿರುವುದಕ್ಕೆ ಸಹಜವಾಗಿಯೇ ಬೇಸರವಾಗಿದೆ. ಆದರೆ ಚಾರ್ಜರ್ಸ್ ತಂಡದ ಅವಳಿ ದಾಳಿ ನಮಗೆ ಟ್ರೋಫಿ ಕೈತಪ್ಪಲು ಪ್ರಮುಖ ಕಾರಣವಾಯ್ತು ಎಂದು ಐಪಿಎಲ್ ರನ್ನರ್ ಅಪ್ ತಂಡ ಬೆಂಗಳೂರು ರಾಯಲ್ ಚಾಲೆಂಜರ್ಸ್ ನಾಯಕ ಅನಿಲ್ ಕುಂಬ್ಳೆ ಹೇಳಿದ್ದಾರೆ.

ಫೈನಲ್‌ನಲ್ಲಿ ಡೆಕ್ಕನ್ ಚಾರ್ಜರ್ಸ್ ಎದುರು ಕೇವಲ ಆರೇ ರನ್‌ಗಳ ಅಂತರದಲ್ಲಿ ಸೋತ ನಂತರ ಮಾತನಾಡಿದ ಬೆಂಗಳೂರು ತಂಡದ ನಾಯಕ ಅನಿಲ್ ಕುಂಬ್ಳೆ, ಫೈನಲ್ ಏರದಿದ್ದುದು ಬೇಸರವಾದರೂ, ವಿಸ್ಮಯಕರ ರೀತಿಯಲ್ಲಿ ಕೆಳಗಿದ್ದ ನಾವು ಪುಟಿದೆದ್ದು ಫೈನಲ್‌ವರೆಗೂ ತಲುಪಿದ್ದು ನನಗೇ ನಂಬಲಾಗದ ಸ್ಥಿತಿ ಎಂದು ವಿವರಿಸಿದರು.

144ರ ಗಡಿಯನ್ನು ಬೆನ್ನತ್ತುವುದುದು ಕಷ್ಟದ ಕೆಲಸವೇನಲ್ಲ. ನಮಮ್ ಬೆಂಗಳೂರು ತಂಡ ಉತ್ತಮ ಆರಂಭವನ್ನೇ ಪಡೆದಿತ್ತು. ಆದರೆ ಆಸ್ಟ್ರೇಲಿಯಾದ ಆಲ್‌ರೌಂಡರ್ ಆಂಡ್ರ್ಯೂ ಸೈಮಂಡ್ಸ್ ನಡೆಸಿದ ಮಾರಕ ದಾಳಿಗೆ ನಾವು ಭಾರೀ ಬೆಲೆತೆರಬೇಕಾಯಿತು. ತಂಡವನ್ನು ಬ್ಯಾಲೆನ್ಸ್ ಸ್ಥಿತಿಗೆ ತರಲು ಯತ್ನಿಸುತ್ತಿದ್ದ ವಿರಾಟ್ ಹಾಗೂ ಟೇಲರ್‌ ಸೈಮಂಡ್ಸ್‌ಗೆ ಆಹುತಿಯಾಗಿದ್ದೇ ತಂಡಕ್ಕೆ ದೊಡ್ಡ ನಷ್ಟವಾಯಿತು. ಇಲ್ಲವಾದಲ್ಲಿ ನಮಗೆ ವಿಜಯ ಕಷ್ಟದ ತುತ್ತೇನೂ ಆಗಿರಲೇ ಇಲ್ಲ ಎಂದು ಕುಂಬ್ಳೆ ಅಭಿಪ್ರಾಯಪಟ್ಟರು.

ಫೈನಲ್‌ವರೆಗೂ ತಲುಪಿ ಚಾಂಪಿಯನ್ ಪಟ್ಟ ಕೈತಪ್ಪಿರುವುದು ಸಹಜವಾಗಿಯೇ ಬೇಸರ ಮೂಡಿಸಿದೆ. ನಾವು ಒಂದು ಹಂತದಲ್ಲಿ ಉತ್ತಮ ಜತೆಯಾಟ ಪ್ರದರ್ಶಿಸಿದ್ದರೆ ಗೆಲುವು ಖಂಡಿತ ಸಾಧ್ಯವಾಗುತ್ತಿತ್ತು. ಆದರೂ ಇಡಿಯ ಐಪಿಎಲ್ ಟೂರ್ನಿಯ ದೃಷ್ಟಿಯಿಂದ ನೋಡುವುದಾದರೆ, ಕೆಳಗಿದ್ದ ನಾವು ಪುಟಿದೆದ್ದಿದ್ದೇವೆ. ಹೀನಾಯ ಸ್ಥಿತಿಯಲ್ಲಿದ್ದ ನಾವು ಪುಟಿದೆದ್ದು, ಫೈನಲ್‌ವರೆಗೂ ತಲುಪಿದ್ದು ಅವಿಸ್ಮರಣೀಯ ಹಾಗೂ ವಿಸ್ಮಯವಾದುದು ಎಂದು ಕುಂಬ್ಳೆ ನುಡಿದರು.

ಕುಂಭ್ಲೆ ಈ ಬಾರಿ ತನ್ನ ನಾಯಕತ್ವದಲ್ಲಷ್ಟೇ ಅಲ್ಲ ಬೌಲಿಂಗ್‌ನಲ್ಲೂ ಐಪಿಎಲ್ ಟೂರ್ನಿಯುದ್ದಕ್ಕೂ ಮಿಂಚಿದ್ದಾರೆ. ಇಡೀ ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸಿದ ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೂ ಅನಿಲ್ ಕುಂಬ್ಳೆ ಪಾತ್ರರಾಗಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಫ್ರ್ಯಾಂಚೈಸಿಗಳ ಜೇಬು ತುಂಬಿಸಿದ ಐಪಿಎಲ್‌ಗೆ ಭಾರೀ ಲಾಭ!
2011ರಲ್ಲಿ 10 ತಂಡಗಳ ಐಪಿಎಲ್: ಮೋದಿ
ಬೆಂಗಳೂರುಗೆ ಸೋಲುಣಿಸಿದ ಹೈದರಾಬಾದ್ ಚಾಂಪಿಯನ್
ಯುವ ಪ್ರತಿಭೆಗಳಿಗೆ ಐಪಿಎಲ್ ಅನುಭವ ಮಂಟಪ: ಧೋನಿ
ಚಾಲೆಂಜರ್ಸ್- ಡೆಕ್ಕನ್ ಜಿದ್ದಾಜಿದ್ದಿ: ಯಾರಿಗೆ ವಿಜಯಮಾಲೆ?
ಚೆನ್ನೈ ಬಗ್ಗುಬಡಿದು ಫೈನಲ್‌ಗೇರಿದ ಬೆಂಗಳೂರು