| | ನವದೆಹಲಿ: ಇದು ಆಶ್ಚರ್ಯವಾದರೂ ಸತ್ಯ. ಐಪಿಎಲ್ ಟೂರ್ನಿಯ ಭವ್ಯ ಯಶಸ್ಸಿನಿಂದ ಕೊನೆಯ ಸ್ಥಾನದಲ್ಲಿರುವ ತಂಡಗಳೂ ಸೇರಿದಂತೆ ಎಲ್ಲ ತಂಡಗಳೂ ಭರ್ಜರಿ ಲಾಭವನ್ನೇ ಜೇಬಿಗಿಳಿಸಿವೆ. ಅಲ್ಲದೆ, ಕಳೆದ ವರ್ಷಕ್ಕಿಂತ ಈ ಬಾರಿ ಪ್ರತಿ ತಂಡದ ಲಾಭ 40 ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚಾಗಿದೆ!
ಕಳೆದ ವರ್ಷದ ದಾಖಲೆಗಳ ಪ್ರಕಾರ, ಪ್ರತಿ ತಂಡವೂ ತಲಾ 25 ಕೋಟಿ ರೂಪಾಯಿಗಳ ಲಾಭವನ್ನು ಪಂದ್ಯ ಪ್ರಸಾರದಿಂದ ಪಡೆದುಕೊಂಡಿದ್ದವು. ಆದರೆ ಈ ಬಾರಿ ಅದು 67.50 ಕೋಟಿಗೇರಿದೆ!
ಬಿಸಿಸಿಐ ಲಾಭವೂ ಕಳೆದ ವರ್ಷಕ್ಕಿಂತ ಬರೋಬ್ಬರಿ ಏರಿಕೆ ಕಂಡಿದೆ. ಕಳೆದ ವರ್ಷ ಬಿಸಿಸಿಐ 350 ಕೋಟಿ ರೂಪಾಯಿಗಳ ಲಾಭವನ್ನು ಖಜಾನೆಗೆ ತುಂಬಿದ್ದರೆ ಈ ಬಾರಿ 477 ಕೋಟಿ ರೂಪಾಯಿಗಳ ಲಾಭ ಜೇಬಿಗಿಳಿಸಿದೆ. |