ನನ್ನ ಸಂತೋಷವನ್ನು ಯಾವ ತೆರನಾಗಿ ವ್ಯಕ್ತಪಡಿಸಬೇಕೆಂಬುದು ತಿಳಿಯುತ್ತಿಲ್ಲ'ಎಂದು ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ ತುಂಬಾ ಭಾವುಕರಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನನ್ನ ಜೀವಮಾನದ ಮರೆಯಲಾರದ ಕ್ಷಣ ಇದಾಗಿದೆ ಎಂದು ಹೇಳಿದರು.
ಒಲಿಂಪಿಕ್ ಕ್ರೀಡಾಕೂಟದಲ್ಲಿ 10ಮೀಟರ್ ಏರ್ ರೈಫಲ್ ಶೂಟಿಂಗ್‌ನ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಚಂಡೀಗಢದ ಹುಡುಗ ಅಭಿನವ್ ಬಿಂದ್ರಾ ಇದೀಗ ದೇಶದ ಪಾಲಿಗೆ ಕೀರ್ತಿಗೆ ಪತಾಕೆ ಹಾರಿಸಿದ 'ಹೀರೋ'.
ಗೇಮ್ಸ್‌ನಲ್ಲಿ ಚಿನ್ನದ ಪದಕ ಪಡೆದ ಬಳಿಕ ಸುದ್ದಿಗಾರರೊಂದಿಗೆ ಪದಕ ಗೆಲುವಿನ ಕ್ಷಣದ ಅನುಭವವನ್ನು ಹಂಚಿಕೊಳ್ಳಲು ಕರೆದ ಪತ್ರಿಕಾಗೋಷ್ಢಿಯಲ್ಲಿ ಬಿಂದ್ರಾ ಮಾತೇ ಹೊರಡದೆ,ಸಂತೋಷದ ಅಶ್ರುಧಾರೆ ಕೆನ್ನೆಯಿಂದ ಇಳಿಯುತ್ತಿತ್ತು.
ಶೂಟಿಂಗ್‌ನಲ್ಲಿ ನಾನು ಕೇವಲ ಗುರಿಯತ್ತ ಗಮನ ಕೇಂದ್ರೀಕರಿಸಿದ್ದೆ ವಿನಃ ನಾನು ಇತಿಹಾಸವನ್ನು ನಿರ್ಮಿಸುವ ಕುರಿತು ಚಿಂತಿಸಿಲ್ಲ. ನಾನು ಉತ್ತಮ ಗುರಿಗಾಗಿ ಪ್ರಯತ್ನಿಸಿದ್ದೆ,ಅದರಲ್ಲಿ ಉತ್ತಮವಾದ ಫಲಿತಾಂಶವೇ ನನಗೆ ಬಂತು ಎಂದು ಬಿಂದ್ರಾ ಅಭಿಪ್ರಾಯ ವ್ಯಕ್ತಪಡಿಸಿದರು.
|