ಮುಖ್ಯ ಪುಟ > ಕ್ರೀಡಾ ಜಗತ್ತು > ಒಲಿಂಪಿಕ್ಸ್ > ಸುದ್ದಿ > ಬಿಂದ್ರಾಗೆ ನಗದು ಬಹುಮಾನದ ಮಹಾಪೂರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಂದ್ರಾಗೆ ನಗದು ಬಹುಮಾನದ ಮಹಾಪೂರ
PTIPTI
ಭಾರತದ ಕ್ರೀಡಾ ಇತಿಹಾಸದಲ್ಲಿಯೇ ನೂತನ ಮೈಲಿಗಲ್ಲೊಂದನ್ನು ನೆಟ್ಟ ಅಭಿನವ್ ಬಿಂದ್ರಾ ಅವರ ಸಾಧನೆಗಾಗಿ ದೇಶಾದ್ಯಂತ ಸಂಭ್ರಮೋಲ್ಲಾಸ, ಅಲ್ಲದೇ ರಾಷ್ಟ್ರಪತಿ, ಪ್ರಧಾನಿ, ಕ್ರೀಡಾಳುಗಳು ಸೇರಿದಂತೆ ಗಣ್ಯಾತೀಗಣ್ಯರೆಲ್ಲ ಶುಭಾಶಯದ ಸುರಿಮಳೆಯನ್ನೇ ಸುರಿಸಿದ್ದಾರೆ.

ಆದರೆ ಬಂಗಾರದ ಹುಡುಗ ಬಿಂದ್ರಾಗೆ ಬರೇ ಶುಭಾಶಯ ಮಾತ್ರವಲ್ಲ, ಬಿಸಿಸಿಐ ಈಗಾಗಲೇ 2.5 ಮಿಲಿಯನ್ ನಗದು ಹಣವನ್ನು ಘೋಷಿಸಿದೆ.

ನಾವು ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇವೆ. ಬಿಂದ್ರಾ ಸಾಧನೆ ಭಾರತೀಯ ಕ್ರೀಡಾ ಇತಿಹಾಸದಲ್ಲೇ ಮಹತ್ವವಾದದ್ದು ಎಂದು ಬಿಸಿಸಿಐ ಅಧ್ಯಕ್ಷ ಶರದ್ ಪವಾರ್ ತಿಳಿಸಿದರು.

ಬಿಂದ್ರಾ ಅವರಿಗೆ ಪಂಜಾಬ್ ಸರ್ಕಾರ ಕೂಡ 1ಕೋಟಿ ರೂ.,ಚಂಡೀಗಢ್ ಸರ್ಕಾರ 1ಲಕ್ಷ, ಮಹಾರಾಷ್ಟ್ರ ಸರ್ಕಾರ 10ಲಕ್ಷ ,ಬಿಹಾರ್ ಸರ್ಕಾರ 11ಲಕ್ಷ ರೂಪಾಯಿ ನಗದು ಘೋಷಿಸಿದೆ. ಕೇಂದ್ರ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ಅವರು ಬಿಂದ್ರಾ ಅವರಿಗೆ ರೈಲ್ವೆ ಗೋಲ್ಡನ್ ಪಾಸ್ ನೀಡುವುದಾಗಿ ಹೇಳಿದ್ದಾರೆ.
ಮತ್ತಷ್ಟು
ಜೀವನದ ಮರೆಯಲಾರದ ಕ್ಷಣ: ಬಿಂದ್ರಾ
ಗಾಯ: ಸಿಂಗಲ್ಸ್‌ ಕಣದಿಂದ ಸಾನಿಯಾ ನಿವೃತ್ತಿ
ಭಾರತದ ಕ್ರೀಡಾ ಇತಿಹಾಸದಲ್ಲೊಂದು ಮೈಲಿಗಲ್ಲು:ಕಲ್ಮಾಡಿ
ಒಲಿಂಪಿಕ್ಸ್: ಕ್ವಾಟರ್ ಫೈನಲ್‌ ತಲುಪಿದ ಸೈನಾ
ಒಲಿಂಪಿಕ್‌‌: 'ಪದಕ ಬೇಟೆ'ಯ ವಿವರ
ಬಿಂದ್ರಾಗೆ ರಾಷ್ಟ್ರಪತಿ-ಪ್ರಧಾನಿ ಅಭಿನಂದನೆ