ಬೀಜಿಂಗ್ ಒಲಿಂಪಿಕ್ ಕಣದಲ್ಲಿರುವ ಭಾರತದ ಏಕೈಕ ಪುರುಷ ಬ್ಯಾಡ್ಮಿಂಟನ್ ಆಟಗಾರ ಅನೂಪ್ ಶ್ರೀಧರ್ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನಿಂದ ಹೊರ ಬಿದ್ದಿದ್ದಾರೆ.
ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಭರವಸೆ ಇಟ್ಟುಕೊಳ್ಳಲಾಗಿದ್ದ ಅನೂಪ್ ಸೋಮವಾರದ ಪಂದ್ಯದಲ್ಲಿ ಎದುರಾಳಿ ಜಪಾನ್‌ನ ಸೊಜಿ ಸಾಟೋ ವಿರುದ್ಧ 13-21,17-21ರ ಅಂತರದಲ್ಲಿ ಸೋಲನ್ನನುಭವಿಸುವ ಮೂಲಕ ಎರಡನೇ ಸುತ್ತಿನಿಂದ ಹೊರ ನಡೆಯುವ ಮೂಲಕ ನಿರಾಸೆ ಮೂಡಿಸಿದ್ದಾರೆ.
ಇದಕ್ಕೂ ಮುನ್ನ ಅನುಪ್ ಶ್ರೀಧರ್ ಪ್ರಥಮ ಸುತ್ತಿನಲ್ಲಿ ಪೋರ್ಚುಗಲ್‌ನ ಮಾರ್ಕೊ ವಾಸ್ಕೊನ್ಸೆಲೋಸ್ ವಿರುದ್ಧ ಗೆಲುವು ಸಾಧಿಸಿ,ಎರಡನೇ ಸುತ್ತಿಗೆ ಪ್ರವೇಶ ಪಡೆದಿದ್ದರು.
ಅನೂಪ್ ತಮ್ಮ ಎದುರಾಳಿಯನ್ನು 21-16,21-14ರ ಅಂತರದಲ್ಲಿ ಸೋಲಿಸಲು ಕೇವಲ ಅರ್ಧ ತಾಸನ್ನು ತೆಗೆದುಕೊಂಡಿದ್ದರು.
|