ಮುಖ್ಯ ಪುಟ > ಕ್ರೀಡಾ ಜಗತ್ತು > ಒಲಿಂಪಿಕ್ಸ್ > ಸುದ್ದಿ > ಒಲಿಂಪಿಕ್:ಪಂದ್ಯದಿಂದ ಹಿಂದೆ ಸರಿದ ಇವಾನೊವಿಕ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒಲಿಂಪಿಕ್:ಪಂದ್ಯದಿಂದ ಹಿಂದೆ ಸರಿದ ಇವಾನೊವಿಕ್
ಮಹಿಳಾ ಅಗ್ರ ಶ್ರೇಯಾಂಕದ ಸೆರ್ಬಿಯಾದ ಅನಾ ಇವಾನೊವಿಕ್ ಒಲಿಂಪಿಕ್ ಕ್ರೀಡಾಕೂಟದ ಟೆನ್ನಿಸ್ ಟೂರ್ನಮೆಂಟ್‌ನಿಂದ ಹಿಂದೆ ಸರಿದಿದ್ದಾರೆ.

ಫ್ರೆಂಚ್ ಓಪನ್ ಚಾಂಪಿಯನ್ ಅನಾ ಇವಾನೊವಿಕ್ ಬಲ ಹೆಬ್ಬೆರಳು ಗಾಯದಿಂದ ಚೇತರಿಸಿಕೊಳ್ಳಲು ವಿಫಲರಾಗಿದ್ದು, ಈ ನಿಟ್ಟಿನಲ್ಲಿ ಮಾರಿಯಾ ಶರಪೋವಾ,ಟಟಿಯಾನ್ ಗೊಲೊವಿನ್ ಮತ್ತು ಆಮೆಲೀ ಮೌರೆಸ್ಮೋ ಅವರನ್ನು ಸೇರಿಕೊಂಡರು.

ಅಲ್ಲದೇ ಅಟ್ಲಾಂಟಾ ಗೇಮ್ಸ್ 1996ರ ಚಾಂಪಿಯನ್ ಲಿಂಡ್ಸೇ ಡೆವ್‌ಪೋರ್ಟ್ ಕೂಡ ಸಿಂಗಲ್ಸ್‌ನಲ್ಲಿ ಆಡದಿರಲು ನಿರ್ಧರಿಸಿದ್ದಾರೆ.

ಇದು ತನ್ನ ಜೀವನದ ಅತಿ ಕೆಟ್ಟ ಗಳಿಗೆಯಾಗಿದೆ ಎಂದು ಹೇಳಿರುವ 20ರ ಹರೆಯದ ಇವಾನೊವಿಕ್,ಕಳೆದ ತಿಂಗಳು ತಾನು ಅತಿ ಹೆಚ್ಚು ವೇದನೆ ಹೊಂದಿದ್ದು,10ದಿನಗಳ ಕಾಲ ಅಭ್ಯಾಸ ನಡೆಸಲು ಸಾಧ್ಯವಾಗಿಲ್ಲ ಎಂದು ಹೇಳಿದರು.

ಆಟದ ಸೆಡ್ಯೂಲ್ ಪ್ರಕಾರ ಇವಾನೊವಿಕ್ ಅವರು ಪ್ರಥಮ ಸುತ್ತಿನಲ್ಲಿ ಮರಿಯಾ ಕೊರಿಟ್ಟ್‌ಸೆವ್ ಅವರನ್ನು ಎದುರಿಸಬೇಕಾಗಿತ್ತು. ಆದರೆ ಇದೀಗ ತಾನು ಪಂದ್ಯದಿಂದ ಹಿಂದೆ ಸರಿದಿರುವುದಾಗಿ ತಿಳಿಸಿದ್ದಾರೆ.
ಮತ್ತಷ್ಟು
ಒಲಿಂಪಿಕ್:2ನೆ ಸುತ್ತಿನಿಂದ ಹೊರಬಿದ್ದ ಅನೂಪ್
ಬೀಜಿಂಗ್:ನಡಾಲ್-ಸೆರೆನಾಗೆ ಮುನ್ನಡೆ
ಬಿಂದ್ರಾಗೆ ನಗದು ಬಹುಮಾನದ ಮಹಾಪೂರ
ಜೀವನದ ಮರೆಯಲಾರದ ಕ್ಷಣ: ಬಿಂದ್ರಾ
ಗಾಯ: ಸಿಂಗಲ್ಸ್‌ ಕಣದಿಂದ ಸಾನಿಯಾ ನಿವೃತ್ತಿ
ಭಾರತದ ಕ್ರೀಡಾ ಇತಿಹಾಸದಲ್ಲೊಂದು ಮೈಲಿಗಲ್ಲು:ಕಲ್ಮಾಡಿ