ಒಲಿಂಪಿಕ್ಸ್ ಕ್ರೀಡಾಕೂಟದ 200 ಮೀಟರ್ ಫ್ರೀಸ್ಟೈಲ್ ವಿಭಾಗದಲ್ಲಿ ಚಿನ್ನ ಗೆದ್ದಿರುವ ಅಮೆರಿಕದ ಈಜುಪಟು ಮೈಕೆಲ್ ಪೆಲಿಪ್ಸ್, ತನ್ನದೆ ದಾಖಲೆ ಮುರಿದಿದ್ದಾರೆ. ಈ ಬಾರಿ ಮೂರು ಚಿನ್ನ ಗೆದ್ದ ಪೆಲಿಪ್ಸ್, ಒಟ್ಟು ಒಂಭತ್ತು ಚಿನ್ನ ಗೆದ್ದಿದ್ದಾರೆ.
ಒಂದು ನಿಮಿಷ 42.96 ಸೆಕುಂಡುಗಳಲ್ಲಿ ಗುರಿ ಮುಟ್ಟಿರುವ ಅವರು ತನ್ನದೇ ಆದ, ಈ ಹಿಂದೆ ಆಸ್ಟ್ರೇಲಿಯಾ ಚಾಂಪಿಯನ್‌ಶಿಫ್ ಪಂದ್ಯಾವಳಿ ವೇಳೆಗೆ ಮೂಡಿಸಿದ್ದ 1:43.86ರ ದಾಖಲೆಯನ್ನು ಮುರಿದಿದ್ದಾರೆ.
ಬೆಳ್ಳಿಪದಕ ಗೆದ್ದ ದಕ್ಷಿಣ ಕೊರಿಯಾದ ಪಾರ್ಕ್ ತಾಯ್ ಹ್ವಾನ್‌ರಿಂದ ಎರಡು ಸೆಕುಂಡುಗಳ ಮುಂಚಿತವಾಗಿ ಅವರು ಗುರಿ ಸೇರಿದ್ದಾರೆ. ಹ್ವಾನ್ 1:44.85 ಅವಧಿಯಲ್ಲಿ ಗುರಿ ತಲುಪಿದ್ದರೆ, ಕಂಚು ಗೆದ್ದ ಇನ್ನೊರ್ವ ಅಮೆರಿಕದ ಈಜುಪಟು ಅಮೆರಿಕದ ವಂಡೆರ್‌ಕಾಯ್ 1:45.14 ಸೆಕುಂಡು ತೆಗೆದುಕೊಂಡಿದ್ದಾರೆ.
ಇದರಿಂದಾಗಿ ಒಲಿಂಪಿಕ್ಸ್‌ನಲ್ಲಿ ಅತಿಹೆಚ್ಚು ಚಿನ್ನಪಡೆದ ಇತರ ನಾಲ್ವರ ಪಟ್ಟಿಗೆ ಪೆಲಿಪ್ಸ್ ಸೇರಿದರು. ಮಾರ್ಕ್ ಸ್ಪಿಟ್ಝ್ ಹಾಗೂ ಅಥ್ಲೆಟ್ ಕಾರ್ಲ್ ಲೂಯಿಸ್ ಇದರಲ್ಲಿ ಸೇರಿದ್ದಾರೆ.
|