ಮುಖ್ಯ ಪುಟ > ಕ್ರೀಡಾ ಜಗತ್ತು > ಒಲಿಂಪಿಕ್ಸ್ > ಸುದ್ದಿ > ಆರ್ಚರಿ ಪ್ರೀ ಕ್ವಾರ್ಟರ್: ಸೋಲು ಕಂಡ ಪ್ರಣೀತಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ್ಚರಿ ಪ್ರೀ ಕ್ವಾರ್ಟರ್: ಸೋಲು ಕಂಡ ಪ್ರಣೀತಾ
ಒಲಿಂಪಿಕ್ ಗೇಮ್ಸ್‌ನ ಆರ್ಚರಿ ವಿಭಾಗದಲ್ಲಿ ಭಾರತದ ಪ್ರಣೀತಾ ವರ್ಧನೇನಿ ಮಹಿಳಾ ವೈಯಕ್ತಿಕ ಸ್ಪರ್ಧೆಯಲ್ಲಿ ಸೋಲನ್ನನುಭವಿಸುವ ಮೂಲಕ, ಆರ್ಚರಿಯಲ್ಲಿ ಭಾರತದ ಸೋಲಿನ ಯಾತ್ರೆ ಮುಂದುವರಿದಿದೆ.

ಪ್ರಣೀತಾ ಪ್ರೀ ಕ್ವಾಟರ್‌ಫೈನಲಿನಲ್ಲಿ ಎದುರಾಳಿ ಉತ್ತರ ಕೊರಿಯಾದ ಸಿಲ್‌ ಉನ್ ಕ್ವಾಲ್ ವಿರುದ್ಧ 99-106ರಲ್ಲಿ ಪರಾಜಯ ಹೊಂದಿದ್ದಾರೆ. ಆರ್ಚರಿ ವಿಭಾಗದಲ್ಲಿ ಭಾರತದ ಪ್ರಣೀತಾ ಮತ್ತೊಂದು ಪದಕವನ್ನು ಗಳಿಸಲಿದ್ದಾರೆ ಎಂಬ ನಿರೀಕ್ಷೆ ಹೊಂದಲಾಗಿತ್ತಾದರೂ ಅದೀಗ ಹುಸಿಯಾಗಿದೆ.

ಪ್ರಣೀತಾ ಇದಕ್ಕೂ ಮುನ್ನ, ಪ್ರಥಮ ಸುತ್ತಿನಲ್ಲಿ ಆಸ್ಟ್ರೇಲಿಯಾದ ಜಾನೆ ವಾಲ್ಲೆರ್‌ ಅವರನ್ನು ಸೋಲಿಸಿ, ಪ್ರಿ ಕ್ವಾರ್ಟರ್‌ಗೆ ಪ್ರವೇಶ ಪಡೆಯುವ ಮೂಲಕ ಪದಕದ ಭರವಸೆ ಮೂಡಿಸಿದ್ದರು.

ಆರ್ಚರಿಯಲ್ಲಿ ಭಾರತದ ದೋಲಾ ಬ್ಯಾನರ್ಜಿ ಹಾಗೂ ಬೊಂಬಾಯಾಲಾ ದೇವಿ ಕೂಡ ಸೋಲಿನ ಹಾದಿ ಹಿಡಿದಿದ್ದು, ಇದೀಗ ಆ ಸ್ಥಾನದಲ್ಲಿ ಪ್ರಣೀತಾ ಕೂಡ ಸೇರ್ಪಡೆಗೊಂಡಂ ತಾಗಿದೆ.
ಮತ್ತಷ್ಟು
ಬೀಜಿಂಗ್: ಬಾಕ್ಸಿಂಗ್-ಜಿತೇಂದ್ರ ಪ್ರೀ ಕ್ವಾರ್ಟರ್ ಫೈನಲ್‌ಗೆ
ಒಲಿಂಪಿಕ್: ಬಂಗಾರದ ಬೇಟೆಯತ್ತ ಸೆರೆನಾ..
ಆರ್ಚರಿ ವೈಯಕ್ತಿಕ: ದೋಲಾ-ಬೊಂಬಾಯಾಲಾ ಹೊರಕ್ಕೆ
ಶೂಟಿಂಗ್: 'ಗುರಿ' ತಪ್ಪಿದ ರಾಥೋಡ್
ಮನದ ಮಾತುಗಳನ್ನು ಬರಹಕ್ಕಿಳಿಸಿದ ಚಿನ್ನದ ಹುಡುಗ
ಅರ್ಹತಾ ಸುತ್ತಿನಿಂದ ಹೊರಬಿದ್ದ ಸಮರೇಶ್