ಭಾರತದ ಭರವಸೆಯ ರೋಯಿಂಗ್ ಜೋಡಿ ದೇವೇಂದರ್ ಕುಮಾರ್ ಖಾಂಡವಾಲ್ ಮತ್ತು ಮನ್‌ಜೀತ್ ಸಿಂಗ್ ಬೀಜಿಂಗ್ ಒಲಿಂಪಿಕ್ ಕ್ರೀಡಾಕೂಟದಿಂದ ಸೋತು ಹೊರಬಿದ್ದಿದ್ದಾರೆ.
ರೋಯಿಂಗ್‌ನಲ್ಲಿ ಭರವಸೆ ಮೂಡಿಸಿದ್ದ ಈ ಜೋಡಿ 13-24 ವಿಭಾಗದಲ್ಲಿ ನಡೆದ ಡಬಲ್ಸ್ ಕಲ್ಸ್‌ನಲ್ಲೇ ಪರಾಭವಗೊಂಡು ನಿರಾಸೆ ಮೂಡಿಸಿದರು.
ಈ ಭಾರತೀಯ ಜೋಡಿ 7:02.06ಸೆಕೆಂಡ್‌ಗಳ ಅಂತರದಿಂದ ಸೋಲನ್ನನುಭವಿಸಿದರು. ಪೋರ್ಚುಗಲ್‌ನ ಪೆಡ್ರೋ ಫ್ರಾಗ್ ಮತ್ತು ನೂನೋ ಮೆಂಡಸ್ ಜೋಡಿ ಅಲ್ಪಾವಧಿಯಲ್ಲೇ ಜಯ ನಗು ಬೀರಿತು.
ದೇವೇಂದರ್ ಮತ್ತು ಮನ್‌ಜೀತ್ ಸಿಂಗ್ ಇನ್ನು ಹೆಚ್ಚಿನ ಶ್ರಮವಹಿಸಲು ನೋಡಿದರಾದರೂ, ಅವರ ಪ್ರಯತ್ನಕ್ಕೆ ಪೋರ್ಚುಗಲ್ ಅಡ್ಡಗಾಲು ಹಾಕಿತು.
|