ಬೀಜಿಂಗ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಪದಕ ಬೇಟೆಯನ್ನು ಮುಂದುವರಿಸಿದ್ದು,ಮಂಗಳವಾರ ನಡೆದ ಪುರುಷರ ಜಿಮ್ನಾಸ್ಟಿಕ್ ಸ್ಪರ್ಧೆಯಲ್ಲಿ ಬಂಗಾರದ ಪದಕವನ್ನು ಗಳಿಸುವ ಮೂಲಕ ಈವರೆಗೆ 9 ಚಿನ್ನ,3ಬೆಳ್ಳಿ,2ಕಂಚನ್ನು ತನ್ನ ಬಗಲಿಗೆ ಏರಿಸಿಕೊಂಡಿದೆ.
ಚೀನಾಗೆ ಸವಾಲೊಡ್ಡಿದ ಜಪಾನ್ ಬೆಳ್ಳಿ ಪದಕ ಮತ್ತು ಅಮೆರಿಕ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ. ಚೀನಾ ಈ ಸ್ಪರ್ಧೆಯಲ್ಲಿ ಒಟ್ಟು 286.125ಅಂಕಗಳನ್ನು ಪಡೆದಿದೆ.
ಜಪಾನ್ 278.875 ಅಂಕ ಗಳಿಸಿದರೆ, ಅಮೆರಿಕ 275.850 ಅಂಕ ಗಳಿಸಿ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಗಳಿಸಿದವು. ಜಿಮ್ನಾಸ್ಟಿಕ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ ಚೀನಾದ ಚೆನ್ ಹಿಬಿಂಗ್ ಮತ್ತು ಯಾಂಗ್ ರಿಂಗ್ಸ್ ರೌಂಡ್‌ನಲ್ಲಿ 16.300ಅಂಕ ಗಳಿಸಿದರು.
|