ಭಾರತದ ದೂರ ಓಟಗಾರ ಸುರೇಂದ್ರ ಸಿಂಗ್ ಬೀಜಿಂಗ್ ಒಲಿಂಪಿಕ್ಸ್‌ನ 10,000ಮೀ ಓಟದ ವಿಭಾಗದಲ್ಲಿ 26ನೇ ಸ್ಥಾನ ಪಡೆಯುವುದರೊಂದಿಗೆ ಮೊದಲ 10ರೊಳಗೆ ಸ್ಥಾನ ಗಿಟ್ಟಿಸುವ ಅವರ ಕನಸು ಧೂಳೀಪಟವಾಗಿದೆ.
ಟಾಪ್ 10ರೊಳಗಿನ ಸ್ಥಾನದ ಮೇಲೆ ದೃಷ್ಠಿ ನೆಟ್ಟಿದ್ದ ಸುರೇಂದ್ರ, ಓಟ ಮುಗಿಸಿದ 35 ಜನರ ಪೈಕಿ, 28:13:97 ಸಮಯದಲ್ಲಿ ಗುರಿ ತಲುಪಿ 26ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.
ಕಳೆದ ತಿಂಗಳು ಸ್ಪೇನ್‌ನಲ್ಲಿ, ರಾಷ್ಟ್ರೀಯ ದಾಖಲೆ ಸೃಷ್ಟಿಸಿ 28:02:89ಸಮಯದಲ್ಲಿ ಓಟ ಮುಗಿಸಿ ಬೀಜಿಂಗ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದ ಸುರೇಂದ್ರ, ಈ ಬಾರಿ ಕಳೆದ ಬಾರಿಗಿಂತಲೂ 11 ಸೆಕೆಂಡ್ ಹೆಚ್ಚಿನ ಸಮಯ ಬಳಸಿ ನಿರಾಶದಾಯಕ ಪ್ರದರ್ಶನ ತೋರಿದ್ದಾರೆ.
|