ಮುಖ್ಯ ಪುಟ > ಕ್ರೀಡಾ ಜಗತ್ತು > ಒಲಿಂಪಿಕ್ಸ್ > ಸುದ್ದಿ > ಒಲಿಂಪಿಕ್ : ಬಾಕ್ಸಿಂಗ್‌ನಲ್ಲಿ ಸೋಲುಂಡ ಜಿತೇಂದರ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒಲಿಂಪಿಕ್ : ಬಾಕ್ಸಿಂಗ್‌ನಲ್ಲಿ ಸೋಲುಂಡ ಜಿತೇಂದರ್
ಒಲಿಂಪಿಕ್ ಕ್ರೀಡಾಕೂಟದಲ್ಲಿ ಬುಧವಾರ ಸಂಜೆ ನಡೆದ 51ಕೆಜಿ ಬಾಕ್ಸಿಂಗ್ ಸ್ಪರ್ಧೆಯ ಕ್ವಾರ್ಟರ್ ಫೈನಲ್‌ನಲ್ಲಿ ಜಿತೇಂದರ್ ಕುಮಾರ್ ಅವರು ಎದುರಾಳಿ ವಿಶ್ವ ಚಾಂಪಿಯನ್ ರ ಷ್ಯಾದ ಜಾರ್ಜಿ ಬಾಲಾಕ್ಸಿನ್ ವಿರುದ್ಧ ಪರಾಜಯಗೊಳ್ಳುವ ಭಾರತದ ಪದಕದ ನಿರೀಕ್ಷೆ ಹುಸಿಯಾಗಿದೆ.

ಬುಧವಾರ ಸಂಜೆ 4.45ಕ್ಕೆ ಆರಂಭಗೊಂಡ ಬಾಕ್ಸಿಂಗ್ ಸ್ಪರ್ಧೆಯ ಆರಂಭದ ಸುತ್ತಿನಲ್ಲಿ ಭಾರತದ ಜಿತೇಂದರ್ ಕುಮಾರ್ ಎದುರಾಳಿ ಜಾರ್ಜಿಗೆ ಪ್ರಬಲ ಹೋರಾಟವನ್ನು ನೀಡುವ ಮೂಲಕ 7-6ರ ಅಂತರವನ್ನು ಕಾಯ್ದುಕೊಂಡಿದ್ದರು.

ಆದರೆ ಎರಡನೇ ಹಂತದಲ್ಲಿ ಮಾಜಿ ವಿಶ್ವ ಚಾಂಪಿಯನ್ ರಷ್ಯಾದ ಬಾಲಾಕ್ಸಿನ್ ಅವರು ಜಿತೇಂದರ್ ಕುಮಾರ್ ಅವರ ಬೆವರಿಳಿಸುವ ಮೂಲಕ 13-8ರ ಅಂತದಲ್ಲಿ ಸೋಲಿಸಿದರು.

ಅಂತಿಮ ಸುತ್ತಿನಲ್ಲಿಯೂ ಜಿತೇಂದರ್ ಅವರು ಪ್ರಬಲ ಸ್ಪರ್ಧೆಯನ್ನು ಒಡ್ಡುತ್ತಾರೆಂಬ ನಿರೀಕ್ಷೆಯೂ ಹುಸಿಯಾಗಿದ್ದು,15-11ರ ಅಂತರದೊಂದಿಗೆ ಸೋಲುವ ಮೂಲಕ ಬಾಕ್ಸಿಂಗ್‌ನಲ್ಲಿನ ಪದಕದ ನಿರೀಕ್ಷೆಗೆ ತಣ್ಣೀರೆರಚಿದಂತಾಗಿದೆ.
ಮತ್ತಷ್ಟು
ಸುಶೀಲ್ ಸೋತರೂ ಕಂಚು ಗೆದ್ದದ್ದು ಹೀಗೆ...!
ಕುಸ್ತಿಯಲ್ಲಿ ಕಂಚು ಗೆದ್ದ 'ಸುಶೀಲ್'
ಪದಕದ ನಿರೀಕ್ಷೆಯಲ್ಲಿ 'ಕುಮಾರ' ದ್ವಯರು
ಲಂಡನ್ ಒಲಿಂಪಿಕ್ಸ್‌ನತ್ತ ಸೈನಾ ಚಿತ್ತ
ಒಲಿಂಪಿಕ್: 2ನೇ ಸುತ್ತಿನಿಂದ ಶರತ್ ಔಟ್
ಕುಸ್ತಿ: ಪ್ರಥಮ ಸುತ್ತಿನಲ್ಲಿ ಸುಶೀಲ್‌ಗೆ ಸೋಲು