ಮುಖ್ಯ ಪುಟ > ಕ್ರೀಡಾ ಜಗತ್ತು > ಒಲಿಂಪಿಕ್ಸ್ > ಸುದ್ದಿ > ವಾಲಿಬಾಲ್: ಕ್ಯೂಬಾವನ್ನು ಮಣಿಸಿದ ಅಮೆರಿಕ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಾಲಿಬಾಲ್: ಕ್ಯೂಬಾವನ್ನು ಮಣಿಸಿದ ಅಮೆರಿಕ
ಒಲಿಂಪಿಕ್ ಗೇಮ್ಸ್‌ನಲ್ಲಿ ಗುರುವಾರ ನಡೆದ ಮಹಿಳೆಯರ ವಾಲಿಬಾಲ್ ಸ್ಪರ್ಧೆಯಲ್ಲಿ ಅಮೆರಿಕ ತಂಡ ಕ್ಯೂಬಾವನ್ನು ಮಣಿಸುವ ಮೂಲಕ ಚಿನ್ನದ ಪದಕ ಪಡೆಯುತ್ತ ದೃಷ್ಟಿ ನೆಟ್ಟಿದೆ.

ಮಹಿಳೆಯರ ವಾಲಿಬಾಲ್ ಸ್ಪರ್ಧೆಯ ಮೂರು ಸೆಟ್‌ಗಳಲ್ಲಿ ಕ್ಯೂಬಾ ಅಮೆರಿಕ ತಂಡಕ್ಕೆ ಶರಣಾಗುವ ಮೂಲಕ ಸೋಲನ್ನನುಭವಿಸಿ, ಪಂದ್ಯ ದಿಂದ ಹೊರಬಿದ್ದಿದೆ.

ಇದೀಗ ಬ್ರೆಜಿಲ್ ಮತ್ತು ಚೀನಾದ ನಡುವಿನ ಸೆಮಿಫೈನಲ್ ಹಣಾಹಣಿಯಲ್ಲಿ ಯಾವ ತಂಡ ಗೆಲುವು ಸಾಧಿಸಲಿದೆಯೋ ಆ ತಂಡದೊಂದಿಗೆ ಶನಿವಾರದಂದು ಅಮೆರಿಕ ತಂಡ ಹೋರಾಟಬೇಕಿದೆ.

ಇಂದಿನ ಪಂದ್ಯದ ಸೋಲಿನಿಂದ ಕ್ಯೂಬಾ ಮಹಿಳಾ ವಾಲಿಬಾಲ್ ತಂಡಕ್ಕೆ ಆಘಾತವಾಗಿದೆ. ಯಾಕೆಂದರೆ ಕ್ಯೂಬಾ ಮಹಿಳೆಯರ ವಾಲಿಬಾಲ್ ತಂಡ ಮೂರು ಬಾರಿ ಒಲಿಂಪಿಕ್ ಕ್ರೀಡಾಕೂಟದಲ್ಲಿ ಬಂಗಾರದ ಪದಕವನ್ನು ಜಯಿಸಿತ್ತು.

ಅಮೆರಿಕ ಮಹಿಳೆಯರ ವಾಲಿಬಾಲ್ ತಂಡ ಉತ್ತಮ ಪ್ರದರ್ಶನದೊಂದಿಗೆ ಕ್ಯೂಬಾವನ್ನು 25-20,25-16,25-17ರ ಅಂತರಲ್ಲಿ ಪರಾಭವಗೊಳಿಸುವ ಮೂಲಕ ಗೆಲುವು ಸಾಧಿಸಿದೆ.
ಮತ್ತಷ್ಟು
ಕುಸ್ತಿ: ತೋಮರ್‌ಗೆ ಪ್ರಥಮ ಸುತ್ತಿನಲ್ಲಿ ಸೋಲು
ಬಾಕ್ಸರ್ ವಿಜಯೇಂದರ್‌ಗೆ ಬಡ್ತಿ, 50ಲಕ್ಷ ಪುರಸ್ಕಾರ
ಪದಕದ ಅವಕಾಶವಿತ್ತೆಂದು ತಿಳಿದಿತ್ತು: ಸುಶೀಲ್
ಮ್ಯಾರಥಾನ್‌‌ ಈಜು ಸ್ಪರ್ಧೆಯಲ್ಲಿ ರಷ್ಯಾಕ್ಕೆ ಸ್ವರ್ಣ
ಸುಶೀಲ್‌ಗೆ ಶುಭಾಶಯ-ನಗದು ಬಹುಮಾನದ ಮಹಾಪೂರ
ಒಲಿಂಪಿಕ್: ಬೋಲ್ಟ್ ಮತ್ತೊಂದು 'ವಿಶ್ವದಾಖಲೆ'