ಜಲಂಧರ್: ಕರ್ತವ್ಯಕ್ಕೆ ಅನಿಯಮಿತವಾಗಿ ಗೈರು ಹಾಜರಾಗಿದ್ದ ಡಬ್ಲ್ಯೂಡಬ್ಲ್ಯೂಇ ಭಾರತೀಯ ರೆಸ್ಲರ್ 'ಗ್ರೇಟ್ ಕಲಿ'ಯವರನ್ನು ಪಂಜಾಬ್ ಪೊಲೀಸ್ ಸಹಾಯಕ ಸಬ್-ಇನ್ಸ್‌ಪೆಕ್ಟರ್ ಹುದ್ದೆಯಿಂದ ಅಮಾನತು ಮಾಡಲಾಗಿದೆ.
2006ರ ಏಪ್ರಿಲ್‌ನಲ್ಲಿ ಡಬ್ಲ್ಯೂಡಬ್ಲ್ಯೂಇಗೆ ಪದಾರ್ಪಣೆಗೈದಿದ್ದ ಕಲಿ ವಿಶ್ವ ಹೆವಿವೈಟ್ ಚಾಂಪಿಯನ್‌ಶಿಪ್ ಪಟ್ಟವನ್ನು ಏರಿದ ಸಾಧನೆ ಮಾಡಿದ್ದು, ಕಳೆದ ಹಲವು ಸಮಯದಿಂದ ಪಂಜಾಬ್ ಪೊಲೀಸ್ ಇಲಾಖೆಯ ಅನುಮತಿಯಿಲ್ಲದೆ ಕರ್ತವ್ಯಕ್ಕೆ ಗೈರು ಹಾಜರಾಗಿದ್ದರು.