ಮುಖ್ಯ ಪುಟ > ಕ್ರೀಡಾ ಜಗತ್ತು > ಇತರ ಕ್ರೀಡೆಗಳು > ಲೇಖನಗಳು > ಈ ಬಾರಿ ಭಾರತೀಯರಿಗೆ ವಿಂಬಲ್ಡನ್‌ ಒಲಿಯಬಹುದೇ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಈ ಬಾರಿ ಭಾರತೀಯರಿಗೆ ವಿಂಬಲ್ಡನ್‌ ಒಲಿಯಬಹುದೇ?
Sania Mirza
PTI
ಈ ಬಾರಿ ಪ್ರತಿಷ್ಠಿತ ಗ್ರಾಂಡ್ ಸ್ಲಾಮ್ ವಿಂಬಲ್ಡನ್‌ನಲ್ಲಿ ಭಾರತೀಯರಾದ ಸಾನಿಯಾ ಮಿರ್ಜಾ, ಲಿಯಾಂಡರ್ ಪೇಸ್, ಮಹೇಶ್ ಭೂಪತಿ, ಸೋಮದೇವ್ ದೇವರ್ಮನ್, ಪ್ರಕಾಶ್ ಅಮೃತರಾಜ್ ಪಾಲ್ಗೊಳ್ಳುತ್ತಿದ್ದು ಯಾವ ಮಟ್ಟದ ಪ್ರದರ್ಶನ ನೀಡಲಿದ್ದಾರೆ ಎಂಬುದು ಟೆನಿಸ್ ಪ್ರಿಯರ ಕುತೂಹಲ ಕೆರಳಿಸಿದೆ.

ಸಿಂಗಲ್ಸ್ ವಿಭಾಗದಿಂದ ಭಾರತೀಯರಾಗಿ ಪ್ರವೇಶ ಪಡೆದಿದ್ದು ಸಾನಿಯಾ ಮಿರ್ಜಾ ಮಾತ್ರ. ಈ ಟೂರ್ನಮೆಂಟ್‌ನ ಸಿಂಗಲ್ಸ್ ವಿಭಾಗದಲ್ಲಿ ಆಕೆಯ ಅಗ್ರ ಸಾಧನೆ ಕಳೆದ ವರ್ಷ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದು.

ಸಾನಿಯಾ ಈಗಾಗಲೇ ಮೊದಲ ಸುತ್ತಿನಲ್ಲಿ ಜರ್ಮನಿಯ ಅನ್ನಾ-ಲೆನಾ ಗ್ರೋಯೆನ್‌ಫೆಲ್ಡ್ ವಿರುದ್ಧ 6-2 2-6 6-2ರ ಜಯ ದಾಖಲಿಸಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ. ಎರಡನೇ ಸುತ್ತಿನಲ್ಲಿ 22ರ ಈ ಹೈದರಾಬಾದ್ ಆಟಗಾರ್ತಿ ರೊಮೇನಿಯಾದ 28ನೇ ಶ್ರೇಯಾಂಕಿತೆ ಸೊರಾನಾ ಇರ್ಸ್ಟಿಯಾ ವಿರುದ್ಧ ಮುಖಾಮುಖಿಯಾಗಬೇಕಿದೆ. ಸಾನಿಯಾ ಸಿಂಗಲ್ಸ್ ಓಟ ಎಲ್ಲಿಯವರೆಗೆ ಎಂಬುದು ಕಾದು ನೋಡಬೇಕಾಗಿದೆ.
Paes
PTI

ಈಕೆ ಡಬಲ್ಸ್‌ನಲ್ಲೂ ಸ್ಪರ್ಧಿಸುತ್ತಿದ್ದಾರೆ. ಈ ವಿಭಾಗದಲ್ಲಿ 15ನೇ ಶ್ರೇಯಾಂಕಿತ ಜೋಡಿಯಾಗಿರುವ ಸಾನಿಯಾ ಮತ್ತು ಚೈನೀಸ್ ತೈಪೈ‌ನ ಚಿಯಾ-ಜಂಗ್-ಚುವಾಂಗ್ ಆರಂಭಿಕ ಸುತ್ತಿನಲ್ಲಿ ಅಮೆರಿಕಾದ ಶ್ರೇಯಾಂಕರಹಿತರಾದ ಜಿಲ್ ಕ್ರೇಬಾಸ್ - ಕಾರ್ಲಿ ಗುಲಿಕ್ಸನ್ ವಿರುದ್ಧ ಹೋರಾಡಲಿದ್ದಾರೆ.

ವಿಂಬಲ್ಡನ್ ಡಬಲ್ಸ್‌ನಲ್ಲಿ ಸಾನಿಯಾ 2006ರಲ್ಲಿ ಎರಡನೇ, 2007ರಲ್ಲಿ ಮೂರನೇ ಸುತ್ತು ಹಾಗೂ 2008ರಲ್ಲಿ ಕ್ವಾರ್ಟರ್ ಫೈನಲ್ ತಲುಪಿದ ಸಾಧನೆ ಮಾಡಿದ್ದಾರೆ. ಮಹೇಶ್ ಭೂಪತಿ ಜತೆ ಸೇರಿ ಆಸ್ಟ್ರೇಲಿಯನ್ ಓಪನ್ ಮಿಶ್ರ ಡಬಲ್ಸ್ ಗೆಲ್ಲುವ ಮೂಲಕ ಮೊತ್ತ ಮೊದಲ ಬಾರಿಗೆ ಗ್ರಾಂಡ್ ಸ್ಲಾಮ್ ಗೆದ್ದ ಭಾರತೀಯ ಮಹಿಳೆ ಎಂಬ ಕೀರ್ತಿಯನ್ನೂ ಪಡೆದಿರುವ ಸಾನಿಯಾ ಡಬಲ್ಸ್‌ನಲ್ಲೂ ಅದೇ ಕರಾಮತ್ತು ತೋರಿಸುವರೇ?

ಈ ವರ್ಷ ಝೆಕ್ ಜತೆಗಾರ ಲುಕಾಸ್ ದ್ಲೋಹಿ ಜತೆ ಫ್ರೆಂಚ್ ಓಪನ್‌ ಗೆದ್ದಿರುವ ಲಿಯಾಂಡರ್ ಪೇಸ್ ತನ್ನ 10ನೇ ಗ್ರಾಂಡ್ ಸ್ಲಾಮ್ ಪ್ರಶಸ್ತಿಗಾಗಿ ವಿಂಬಲ್ಡನ್‌ನಲ್ಲಿ ಅಮೆರಿಕಾದ ಶ್ರೇಯಾಂಕರಹಿತ ಜೋಡಿ ಜೇಮ್ಸ್ ಬ್ಲಾಕೆ - ಮಾರ್ಡಿ ಫಿಶ್ ವಿರುದ್ಧ ಮೂರನೇ ಶ್ರೇಯಾಂಕಿತರಾಗಿ ಹೋರಾಡಬೇಕಿದೆ.
Bhupathi
PTI

ಐದು ಡಬಲ್ಸ್ ಹಾಗೂ ನಾಲ್ಕು ಮಿಶ್ರ ಡಬಲ್ಸ್ ಕಿರೀಟ ಪೇಸ್ ಹೆಸರಿಗೆ ಇದುವರೆಗೆ ಬರೆಯಲ್ಪಟ್ಟಿದೆ. ಪೇಸ್ ವಿಂಬಲ್ಡನ್ ಡಬಲ್ಸ್ ಪ್ರಶಸ್ತಿ ಗೆದ್ದು 10 ವರ್ಷಗಳೇ ಕಳೆದು ಹೋಗಿರುವುದು ಗಮನಾರ್ಹ.

ಮತ್ತೊಬ್ಬ ಮುಂಚೂಣಿ ಡಬಲ್ಸ್ ಆಟಗಾರ ಮಹೇಶ್ ಭೂಪತಿಯವರು ಬಹಾಮಸ್ ಜತೆಗಾರ ಮಾರ್ಕ್ ನೋವ್ಲ್ಸ್ ಜತೆ ವಿಂಬಲ್ಡನ್ ಮೊದಲ ಸುತ್ತಿನಲ್ಲಿ ಭಾರತದ ಸೋಮದೇವ್ ದೇವರ್ಮನ್ - ದಕ್ಷಿಣ ಆಫ್ರಿಗಾದ ಕೆವಿನ್ ಆಂಡರ್ಸನ್ ವಿರುದ್ಧ ಆಡಲಿದ್ದಾರೆ. ಸೋಮದೇವ್‌ಗಿದು ಚೊಚ್ಚಲ ಗ್ರಾಂಡ್ ಸ್ಲಾಮ್. ನಾಲ್ಕನೇ ಶ್ರೇಯಾಂಕಿತ ಭೂಪತಿ ಜೋಡಿಗೆ ಸುಲಭ ತುತ್ತಾಗುವ ಸಾಧ್ಯತೆಗಳೇ ಹೆಚ್ಚು ಎನ್ನಲಾಗುತ್ತಿದೆ.

ಭೂಪತಿ ಡಬಲ್ಸ್‌ನಲ್ಲಿ ನಾಲ್ಕು ಪ್ರಶಸ್ತಿ ಸೇರಿದಂತೆ ಒಟ್ಟು 11 ಗ್ರಾಂಡ್ ಸ್ಲಾಮ್‌ಗಳನ್ನು ಗೆದ್ದ ಇತಿಹಾಸ ಹೊಂದಿದ್ದಾರೆ. ವಿಂಬಲ್ಡನ್ ಕೊನೆಯ ಬಾರಿ ಗೆದ್ದಿರುವುದು ಪೇಸ್ ಜತೆಗೆ 1999ರಲ್ಲಿ. ಪೇಸ್-ಭೂಪತಿ ಬೇರ್ಪಟ್ಟ ನಂತರ ಇಬ್ಬರಿಗೂ ಪ್ರಶಸ್ತಿ ಜಯಿಸಲಾಗಿಲ್ಲ.
Somdev
PTI

ಭಾರತದ ಮತ್ತೊಬ್ಬ ಆಟಗಾರ ಪ್ರಕಾಶ್ ಅಮೃತರಾಜ್ ಕೂಡ ಡಬಲ್ಸ್‌ನಲ್ಲಿ ಈ ಬಾರಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ಪಾಕಿಸ್ತಾನದ ತನ್ನ ಜತೆಗಾರ ಆಸಿಮ್-ಉಲ್-ಹಕ್ ಖುರೇಷಿ ಜತೆ ಆಟ ಆರಂಭಿಸಲಿದ್ದು, ಮೊದಲ ಸುತ್ತಿನಲ್ಲಿ 16ನೇ ಶ್ರೇಯಾಂಕಿತರಾದ ಆಸ್ಟ್ರೇಲಿಯಾ-ಬ್ರಿಟನ್ ಜೋಡಿ ಸ್ಟೀಫನ್ ಹಸ್ - ರೋಸ್ ಹಚ್ಕಿನ್ಸ್ ವಿರುದ್ಧ ಹೋರಾಡಲಿದ್ದಾರೆ.

ಅರ್ಹತಾ ಪಂದ್ಯದ ಕೊನೆಯ ಹಂತ ತಲುಪಿದ್ದ ಪ್ರಕಾಶ್ ಸ್ವಲ್ಪದರಲ್ಲೇ ಸಿಂಗಲ್ಸ್ ಪ್ರಧಾನ ಸುತ್ತು ಪ್ರವೇಶಿಸುವ ಅವಕಾಶವನ್ನು ಕಳೆದುಕೊಂಡಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬೇಕಾಗಿದ್ದಾರೆ: ಪ್ರತಿಭಾವಂತ ಸಿಂಗಲ್ಸ್ ಪುರುಷ ಆಟಗಾರರು
ಭಾರತದ ಕ್ರೀಡೆ ಮತ್ತು ಕೊಳಕು ರಾಜಕೀಯ...
ಆ ಏಷ್ಯಾಕಪ್‌ ಹೀರೋ ಪ್ರಭ್ಜೋತ್ - ಜ್ಯೂ. ಏಷ್ಯಾ ಕಪ್ ಹೀರೋ ದಿವಾಕರ್
44 ವರ್ಷಗಳ ಪ್ರಶಸ್ತಿ ಬರ ನೀಗಿಸಿಕೊಂಡ ಸ್ಪೇನ್
ಹೆನಿನ್ ಉತ್ತರಾಧಿಕಾರಿಯ ಶೋಧದಲ್ಲಿ...
ಅಡ್ಡಿಗಳ ನಡುವೆಯೂ ಪಯಣ ಬೆಳೆಸಿದ ಮಹಿಳಾ ಹಾಕಿ ತಂಡ