ಮುಖ್ಯ ಪುಟ  ಕ್ರೀಡಾ ಜಗತ್ತು > ಇತರ ಕ್ರೀಡೆಗಳು > ಕ್ರೀಡಾಸುದ್ದಿ
 
ಮತ್ತೆ ಸೋತ ಸಾನಿಯಾ
ಕ್ರೆಮ್ಲಿನ್ ಒಪನ್ ಟೆನಿಸ್ ಟೂರ್ನಿಯ ಪ್ರಥಮ ಸುತ್ತಿನ ಪಂದ್ಯದಲ್ಲಿ ಸಾನಿಯಾ ಮಿರ್ಜಾ ಅವರು, ಅರ್ಜೇಂಟಿನದ ಗಿಸೆಲಾ ಡಲ್ಕೊ ವಿರುದ್ಧ ನಡೆದ ಪಂದ್ಯದಲ್ಲಿ ನೇರ ಸೆಟ್‌ಗಳಿಂದ ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ.

2.34 ಕೋಟಿ ರೂಗಳ ಬಹುಮಾನದ ಮೊತ್ತ ಇರುವ ಕ್ರೆಮ್ಲಿನ್ ಕಪ್ ಟೂರ್ನಿಯಲ್ಲಿ 29 ನೇ ಶ್ರೇಯಾಂಕಿತೆ ಸಾನಿಯಾ ಮಿರ್ಜಾ, ಒಂದೂಕಾಲು ಗಂಟೆ ಕಾಲ ನಡೆದ ಪಂದ್ಯದಲ್ಲಿ 6-3, ಮತ್ತು 6-4ರ ನೇರ ಸೆಟ್‌ಗಳ ಅಂತರದಲ್ಲಿ ಸೋತಿದ್ದಾರೆ.

ಜಪಾನ್ ಓಪನ್ ಟೆನಿಸ್ ಟೂರ್ನಿಯ ಕ್ವಾರ್ಟರ್ ಫೈನಲ್ ಹಂತದವರೆಗೆ ತಲುಪಿದ್ದ, ಸಾನಿಯಾ ಮಿರ್ಜಾ ಅಲ್ಲಿ ತೋರಿದ್ದ ಉತ್ತಮ ಆಟವನ್ನು ಇಲ್ಲಿ ಪ್ರದರ್ಶಿಸಲಾಗದೆ ಮುಗ್ಗರಿಸಿದರು.

ಸಾನಿಯಾ ಮಿರ್ಜಾ ಅವರ ಇಂದಿನ ಸೋಲಿಗೆ ಮತ್ತೆ ಸರ್ವ್ ಕಾರಣವಾಯಿತು. ಒಟ್ಟು 9 ಬಾರಿ ಡಬಲ್ ಫಾಲ್ಟ್ ಎಸಗಿದ್ದು ಅಲ್ಲದೇ, ಸರ್ವ್ ಮೂಲಕ ಕೇವಲ ಪ್ರತಿಶತ 48 ಅಂಕ ಮಾತ್ರ ಅಂಕಗಳಿಸಿದರು.

ಡಲ್ಕೊ ವಿರುದ್ಧ ನಡೆದ ಪಂದ್ಯದಲ್ಲಿ ಸಾನಿಯಾ ಅವರ ರಿಟರ್ನ್ ಆಟ ಪ್ರಬಲವಾಗಿತ್ತು. ಎದುರಾಳಿಯ ಸರ್ವ್‌ಗಳನ್ನು ಐದು ಬಾರಿ ಮುರಿದು, ಪಂದ್ಯದ ಮೇಲೆ ಪ್ರಭುತ್ವ ಸಾಧಿಸುವ ಪ್ರಯತ್ನ ಮಾಡಿದರು.

ಅರ್ಜೆಂಟಿನಾದ ಟೆನಿಸ್ ಆಟಗಾರ್ತಿ ಡಲ್ಕೊ ಸತತವಾಗಿ ಮೂರು ಬಾರಿ ಸಾನಿಯ ವಿರುದ್ಧ ಗೆಲುವು ಸಾಧಿಸಿದ್ದಾರೆ. 2005ರ ಪ್ರೆಂಚ್ ಓಪನ್, ಪಟಾಯಾದಲ್ಲಿ ನಡೆದ ಮೂರನೆ ಹಂತದ ಟೆನಿಸ್ ಟೂರ್ನಿ. ಮತ್ತು ಈ ಬಾರಿ ಕ್ರೆಮ್ಲಿನ್ ಕಪ್ ಟೆನಿಸ್ ಟೂರ್ನಿಯಲ್ಲಿ ಅವರನ್ನು ಸೋಲಿಸಿದ್ದಾರೆ.
ಮತ್ತಷ್ಟು
ಟೆನಿಸ್: ಬಾರ್ತೋಲಿ, ಶಿಂಡರ್ಸ್ ಮುನ್ನಡೆ
ಪದಕ ಮರಳಿಸಿದ ಜೋನ್ಸ್
ಅ.10ರಿಂದ ಸಬ್ ಜ್ಯೂ. ನ್ಯಾ. ಚಾಂಪಿಯನ್‌ಷಿಪ್
ಜಪಾನ್ ಓಪನ್: ವಿನಸ್‌ಗೆ ಗೆಲುವು
ಮಹಾಮೋಸಗಾರ್ತಿ ಮರಿಯಾನ್ ಜೋನ್ಸ್
ರಾಷ್ಟ್ರೀಯ ಕ್ರೀಡಾಕೂಟಕ್ಕೆ ಸೌಕರ್ಯದ ಕೊರತೆ