ಉತ್ತೇಜಕ ಮದ್ದು ಸೇವನೆಯನ್ನು ಒಪ್ಪಿಕೊಂಡು ಗೆದ್ದುಕೊಂಡಿರುವ ಪದಕಗಳನ್ನು ಅಂತಾರಾಷ್ಟ್ರೀಯ ಓಲಿಂಪಿಕ್ ಸಮಿತಿಗೆ ಮರಳಿಸಿದರೂ ಆಪಾದಿತೆ ಮರಿಯಾನ್ ಜೋನ್ಸ್ ಅವರನ್ನು ಅಂತಾರಾಷ್ಟ್ರೀಯ ಓಲಿಂಪಿಕ್ ಸಮಿತಿ ಮತ್ತು ಅಂತಾರಾಷ್ಟ್ರೀಯ ಅಥ್ಲಿಟಿಕ್ ಅಸೋಸಿಯೆಷನ್ ಮರಿಯಾನ್ ಜೋನ್ಸ್ ವಿರುದ್ಧ ಇನ್ನು ಕಠಿಣ ಕ್ರಮಗಳನ್ನು ಅನುಸರಿಸಲು ಮುಂದಾಗಿದೆ.
ಐಎಎಎಪ್ ಮತ್ತು ಐಓಸಿ, ಮರಿಯಾನ್ ಜೋನ್ಸ್ ಅವರ ಎಲ್ಲ ಕ್ರೀಡಾಕೂಟದ ದಾಖಲೆಗಳ ಅಳಿಸುವಿಕೆ. ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಪಡೆದ ಸಂಭಾವನೆ ಮತ್ತು ಬಹುಮಾನಗಳ ಮೊತ್ತವನ್ನು ವಶಪಡಿಸಿಕೊಳ್ಳುವುದು ಅಲ್ಲದೇ ಅಜೀವ ಪರ್ಯಂತ ನಿಷೇಧ ವಿಧಿಸುವ ಸಾಧ್ಯತೆ ಇದೆ.
ಇದೇ ಸಮಯದಲ್ಲಿ ಮರಿಯಾನ್ ಜೋನ್ಸ್ ಅವರಿಂದ ಕಿತ್ತುಕೊಂಡ ಪದಕಗಳನ್ನು 2000ದ ಸಿಡ್ನಿ ಓಲಿಂಪಿಕ್ ಕ್ರೀಡಾಕೂಟದಲ್ಲಿ ಸೋತ ಗ್ರೀಕ್ ಓಟಗಾರ್ತಿ ಕ್ಯಾತರಿನಾ ಥಾನೌ ಅವರಿಗೆ ನೀಡಲಾಗುವುದು. ಅಲ್ಲದೇ ರೀಲೆಯಲ್ಲಿನ ಇತರ ಆಟಗಾರರು ಪಡೆದಿರುವ ಎಲ್ಲ ಪದಕಗಳನ್ನು ಕಿತ್ತುಕೊಳ್ಳಲು ಐಓಸಿ ನಿರ್ಧರಿಸಿದೆ.
ಉತ್ತೇಜಕ ಮದ್ದು ಸೇವನೆ ಪ್ರಕರಣದಲ್ಲಿ ಜೋನ್ಸ್ ತಪ್ಪಿತಸ್ಥಳು ಎಂದು ಸಾಬೀತಾದ ನಂತರ ಐದು ಪದಕಗಳನ್ನು ಮರಳಿಸಿದ್ದು ಅಲ್ಲದೇ ಆ ಫಲಿತಾಂಶಗಳ ಮುಟ್ಟುಗೋಲು ಹಾಕಲು ಒಪ್ಪಿದ್ದಳು.
ಅಮೆರಿಕದ ಓಲಿಂಪಿಕ್ ಕಮಿಟಿ ಜೋನ್ಸ್ ಅವರಿಂದ ವಶಪಡಿಸಿಕೊಂಡಿರುವ ಎಲ್ಲ ಪದಕಗಳನ್ನು ಎನು ಮಾಡುವುದು ಎಂದು ನಿರ್ಧರಿಸಿಲ್ಲ.
ಐಓಸಿ ಮತ್ತು ಐಎಎಎಫ್, ಜೋನ್ಸ್ ಹೆಸರಿನಲ್ಲಿ ಇದ್ದ ಎಲ್ಲ ಫಲಿತಾಂಶಗಳ ರದ್ದತಿಗೆ ಮಂಗಳವಾರ ಮುಂದಾಗಿದ್ದು, 2000 ಸಿಡ್ನಿ ಓಲಿಂಪಿಕ್ ಕ್ರೀಡಾಕೂಟದಲ್ಲಿ ಜೋನ್ಸ್ ಪ್ರತಿನಿಧಿಸಿದ್ದ ಕ್ರೀಡೆಗಳ ಫಲಿತಾಂಶವನ್ನು ಮರು ಪ್ರಕಟಿಸಲಾಗುವುದು.
|