ಮುಖ್ಯ ಪುಟ  ಕ್ರೀಡಾ ಜಗತ್ತು > ಇತರ ಕ್ರೀಡೆಗಳು > ಕ್ರೀಡಾಸುದ್ದಿ
 
ಮಿಲಿಟರಿ ಕ್ರೀಡಾಕೂಟ: ಭಾರತಕ್ಕೆ ಸೋಲು
ಹೈದಾರಾಬಾದಿನಲ್ಲಿ ಬುಧವಾರದಿಂದ ಪ್ರಾರಂಭವಾದ ನಾಲ್ಕನೆ ಕ್ರೀಡಾಕೂಟದ ಮೊದಲನೆ ದಿನದಂದು ಬ್ರೆಜಿಲ್ ಮತ್ತು ಭಾರತ ನಡುವೆ ನಡೆದ ಫುಟ್ಬಾಲ್ ಪಂದ್ಯವನ್ನು ಬ್ರೆಜಿಲ್ 3-0 ಗೋಲುಗಳ ಅಂತರದಿಂದ ಗೆದ್ದುಕೊಂಡಿದೆ.

ಬ್ರೆಜಿಲ್ ಪರ ಸಿ. ರೋನಾಲ್ಡೊ (22 ಮತ್ತು 68ನೇ ನಿಮಿಷ) ಎ. ಮಾರ್ಕೋಸ್ ( 85ನೇ ನಿಮಿಷ) ಗೋಲು ಗಳಿಸಿ ತಂಡದ ಗೆಲುವಿಗೆ ಮುನ್ನುಡಿ ಬರೆದರೆ, ಭಾರತ ಗೋಲು ದಾಖಲಿಸುವ ಅವಕಾಶ ಇದ್ದರೂ ಗೋಲು ಗಳಿಸುವುದಕ್ಕೆ ಪೂರ್ಣಪ್ರಮಾಣದಲ್ಲಿ ಪ್ರಯತ್ನ ಮಾಡಲಿಲ್ಲ..
ಭಾರತೀಯ ಫುಟ್ಬಾಲ್ ತಂಡದ ನಾಯಕ ಆರ್. ಎಸ್ ಭಂಡಾರಿ ಅವರು ಸೋಲಿಗೆ ಗೋಲು ಗಳಿಸುವ ಅವಕಾಶಗಳನ್ನು ಕಳೆದುಕೊಂಡಿದ್ದು ಕಾರಣ ಎಂದು ಹೇಳಿದ್ದಾರೆ.

ನಾವು ಉತ್ತಮವಾದ ಆಟವನ್ನು ಪ್ರದರ್ಶಿಸಿದ್ದೆವೆ ಬ್ರೆಜಿಲ್ ತಂಡ ಜಗತ್ತಿನ ಉತ್ತಮ ತಂಡಗಳಲ್ಲಿ ಒಂದು ಎಂದು ಖ್ಯಾತಿ ಪಡೆದಿದೆ. ದೊರೆತ ಕೆಲ ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿಕೊಂಡಲ್ಲಿ ನಾವು ಕೆಲ ಗೋಲು ದಾಖಲಿಸಬಹುದಿತ್ತು ಎಂದು ಅವರು ಹೇಳಿದ್ದಾರೆ.

ಬ್ರೆಜಿಲ್ ತಂಡದ ನಾಯಕ ಸಿ. ಲೂಯಿಸ್ ಅವರು ಪ್ರಾರಂಭದಲ್ಲಿ ತಂಡವು ಒತ್ತಡಕ್ಕೆ ಒಳಗಾಗಿ ನಂತರ ಸುಧಾರಿಸಿಕೊಂಡಿತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮತ್ತಷ್ಟು
ಮರಿಯಾನ್ ಬೆನ್ನು ಬಿಡದ ಐಓಸಿ
ಮತ್ತೆ ಸೋತ ಸಾನಿಯಾ
ಟೆನಿಸ್: ಬಾರ್ತೋಲಿ, ಶಿಂಡರ್ಸ್ ಮುನ್ನಡೆ
ಪದಕ ಮರಳಿಸಿದ ಜೋನ್ಸ್
ಅ.10ರಿಂದ ಸಬ್ ಜ್ಯೂ. ನ್ಯಾ. ಚಾಂಪಿಯನ್‌ಷಿಪ್
ಜಪಾನ್ ಓಪನ್: ವಿನಸ್‌ಗೆ ಗೆಲುವು