ಮುಖ್ಯ ಪುಟ  ಕ್ರೀಡಾ ಜಗತ್ತು > ಇತರ ಕ್ರೀಡೆಗಳು > ಕ್ರೀಡಾಸುದ್ದಿ
 
ಚೀನಾ ಏಷಿಯನ್ ಚಾಂಪಿಯನ್‌ಗೆ ನಿಷೇಧ
ಚೀನಾದಲ್ಲಿ ನಡೆದಿದ್ದ ಏಷಿಯನ್ ಗೆಮ್ಸ್ ಕ್ರೀಡಾಕೂಟದ ಟ್ರೈಯಥ್ಲಾನ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದ ವಾಂಗ್ ಹೋಗ್ನಿ ಅವರು ಮದ್ದು ಸೇವನೆ ಪರೀಕ್ಷೆಯಲ್ಲಿ ತಪ್ಪಿತಸ್ಥಳು ಎಂದು ಸಾಬೀತು ಆಗಿರುವುದರಿಂದ ಅವಳನ್ನು ಎರಡು ವರ್ಷಗಳ ಕಾಲ ನಿಷೇಧಕ್ಕೆ ಒಳಪಡಿಸಲಾಗಿದೆ.

ಕಳೆದ ದೋಹಾ ಏಷಿಯನ್ ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಿದ್ದ ವಾಂಗ್ ಅವರು ಅಗಸ್ಟ್ 24ರಂದು ಜಾಗತಿಕ ಮದ್ದು ಸೇವನಾ ತಡೆ ಪ್ರಾಧಿಕಾರ ನಡೆಸಿದ ಟೆಸ್ಟೋಟ್ರೋಮ್ ಪರೀಕ್ಷೆಯಲ್ಲಿ ಉತ್ತೇಜಕ ಮದ್ದು ಸೇವಿಸಿದ್ದು ಸಾಬೀತಾಗಿದೆ ಎಂದು ಅಂತರ್ಜಾಲ ಮಾದ್ಯಮದಲ್ಲಿ ಪ್ರಕಟಿಸಲಾಗಿದೆ.

ವಾಂಗ್, ಎರಡು ವರ್ಷದ ನಿಷೇಧ ಶಿಕ್ಷೆಯನ್ನು ಸಪ್ಟಂಬರ್ 27ರಂದು ತೆಗೆದುಕೊಳ್ಳಲಾದ ಬಿ ಸ್ಯಾಂಪಲ್ ವರದಿಯನ್ನು ಆಧರಿಸಿ ಒಪ್ಪಿಕೊಂಡಿದ್ದಾರೆ. ವಾಂಗ್ ಮೇಲಿನ್ ನಿಷೇಧ ಅಕ್ಟೋಬರ್ 2009 ರವರೆಗೆ ಜಾರಿಯಲ್ಲಿ ಇರಲಿದೆ ಎಂದು ವಾಡಾ ತಿಳಿಸಿದೆ.

ಅಂತಾರಾಷ್ಟ್ರೀಯ ಓಲಿಂಪಿಕ್ ಕಮಿಟಿಯು ಮದ್ದು ಸೇವನಾ ಪ್ರಾಧಿಕಾರವು ಮದ್ದು ಸೇವನೆಯಲ್ಲಿ ಭಾಗಿಯಾಗಿರಬಹುದಾದ ಇತರೆ ವ್ಯಕ್ತಿಗಳನ್ನು ಶಿಕ್ಷಿಸಬೇಕು ಎಂದು ಕೇಳಿಕೊಂಡಿದ್ದು, ಅದರ ಪ್ರಕಾರ ವಾಂಗ್ ಹೊಗ್ನಿ ಕೋಚ್ ಮತ್ತು ಟ್ರೈಯಥ್ಲಾನ್ ತಂಡದ ಇತರ ಸದಸ್ಯರನ್ನು ಶಿಕ್ಷೆಗೆ ಗುರಿಪಡಿಸಲಿದೆ ಎಂದು ವರದಿಯಾಗಿದೆ.
ಮತ್ತಷ್ಟು
ಮಿಲಿಟರಿ ಕ್ರೀಡಾಕೂಟ: ಭಾರತಕ್ಕೆ ಸೋಲು
ಮರಿಯಾನ್ ಬೆನ್ನು ಬಿಡದ ಐಓಸಿ
ಮತ್ತೆ ಸೋತ ಸಾನಿಯಾ
ಟೆನಿಸ್: ಬಾರ್ತೋಲಿ, ಶಿಂಡರ್ಸ್ ಮುನ್ನಡೆ
ಪದಕ ಮರಳಿಸಿದ ಜೋನ್ಸ್
ಅ.10ರಿಂದ ಸಬ್ ಜ್ಯೂ. ನ್ಯಾ. ಚಾಂಪಿಯನ್‌ಷಿಪ್