ಜನೆವರಿ ತಿಂಗಳಿನಲ್ಲಿ ನಡೆಯಲಿರುವ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಗೆ ಸಿದ್ದವಾಗುತ್ತಿರುವ ಅಗ್ರ ಶ್ರೇಯಾಂಕಿತ ರೋಜರ್ ಫೆಡರರ್ ಅವರು ಕುಯೋಂಗ್‌ನಲ್ಲಿ ನಡೆಯಲಿರುವ ಎಎಎಂಐ ಕ್ಲಾಸಿಕ್ ಟೆನಿಸ್ ಟೂರ್ನಿಯ ಪ್ರಮುಖ ಆಕರ್ಷಣೆಯಾಗಲಿದ್ದಾರೆ.
ಆಸ್ಟ್ರೇಲಿಯನ್ ಓಪನ್, ವಿಂಬಲ್ಡನ್ ಓಪನ್ ಮತ್ತು ಯುಎಸ್ ಓಪನ್ ಟೆನಿಸ್ ಪ್ರಶಸ್ತಿಗಳನ್ನು ಕಳೆದ ವರ್ಷ ರೋಜರ್ ಫೆಡರರ್ ಅವರು ಗೆದ್ದುಕೊಂಡಿದ್ದಾರೆ. ಎಎಎಂಐ ಕ್ಲಾಸಿಕ್ ಟೆನಿಸ್ ಟೂರ್ನಿಯು ರೌಂಡ್ ರಾಬಿನ್ ಲೀಗ್ ಮಾದರಿಯಲ್ಲಿ ನಡೆಯಲಿದ್ದು, ಫೆಡರರ್ ಅವರೊಂದಿಗೆ ಚೀಲಿಯ ಫರ್ನಾಂಡೊ ಗೊನ್ಸಾಲೆಜ್, ಅಮೆರಿಕದ ಆಂಡಿ ರಾಡಿಕ್, ಜರ್ಮನಿಯ ಟಾಮಿ ಹಾಸ್, ಕ್ರೋಯೇಷಿಯಾದ ಇವಾನ್ ಜುಬಿಕಿಕ್, ಸ್ಕಾಟಲೆಂಡಿನ ಆಂಡಿ ಮುರ್ರೆ ಮತ್ತು ಮರಾಟ್ ಸಫೀನ್ ಪಾಲ್ಗೊಳ್ಳಲಿದ್ದಾರೆ.
ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿ ನಡೆಯುವ ಅಂಕಣದ ರೀತಿಯಲ್ಲಿ ಕುಯೋಂಗ್ ಓಪನ್ ಟೂರ್ನಿ ನಡೆಯುವ ಅಂಕಣವನ್ನು ಸಿದ್ದಗೊಳಿಸಲಾಗಿದೆ.
|